ಅಮೆರಿಕದ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ ಕೂಡಲೇ ಡೊನಾಲ್ಡ್ ಟ್ರಂಪ್, ವಿಶ್ವ ಆರೋಗ್ಯ ಸಂಸ್ಥೆಯಿಂದ (WHO) ಹಿಂದೆ ಸರಿಯಲು ನಿರ್ಧರಿಸಿದ್ದಾರೆ. ಈ ಸಂಬಂಧ ಆದೇಶಕ್ಕೆ ಟ್ರಂಪ್ ಸಹಿ ಹಾಕಿದ್ದಾರೆ. ಇತರ ದೇಶಗಳಿಗೆ ಹೋಲಿಸಿದರೆ, ಅಮೆರಿಕ ಈ ಸಂಸ್ಥೆಗೆ ದೊಡ್ಡ ಮೊತ್ತದ ಕೊಡುಗೆ ನೀಡಿದೆ. ನಾವು WHOಗೆ 500 ಮಿಲಿಯನ್ ಡಾಲರ್ ನೀಡಿದ್ದೇವೆ. 1.4 ಬಿಲಿಯನ್ ಜನಸಂಖ್ಯೆ ಹೊಂದಿರುವ ಚೀನಾ ಕೇವಲ 39 ಮಿಲಿಯನ್ ಡಾಲರ್ ಮಾತ್ರ ನೀಡುತ್ತದೆ. "ಇದು ಅನ್ಯಾಯ' ಎಂದು ಟ್ರಂಪ್ ಹೇಳಿದ್ದಾರೆ.
ಶ್ವೇತ ಭವನದಲ್ಲಿ ಆದೇಶಕ್ಕೆ ಸಹಿ ಹಾಕಿದ ಟ್ರಂಪ್ ವಿಶ್ವ ಆರೋಗ್ಯ ಸಂಸ್ಥೆಯು ಅಮೆರಿಕದ ವಿರುದ್ಧ ಪಕ್ಷಪಾತ ಮಾಡುತ್ತಿದೆ. ಇಲ್ಲಿ ಚೀನಾಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆ ನಮಗೆ ಮೋಸ ಮಾಡಿದೆ ಎಂದು ಹೇಳಿದ್ದರು.
COVID-19 ಸಾಂಕ್ರಾಮಿಕ ರೋಗವನ್ನು WHO ತಪ್ಪಾಗಿ ನಿರ್ವಹಿಸುವುದು ಮತ್ತು ತುರ್ತಾಗಿ ಅಗತ್ಯವಿರುವ ಸುಧಾರಣೆಗಳನ್ನು ಅಳವಡಿಸಿಕೊಳ್ಳದಿರುವುದು ಸೇರಿದಂತೆ ಹಲವಾರು ಕಾರಣಗಳನ್ನು ಟ್ರಂಪ್ ಉಲ್ಲೇಖಿಸಿದ್ದಾರೆ.
PublicNext
21/01/2025 04:36 pm