ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಲಾಯರ್ ಜಗದೀಶ್ ಮೇಲೆ 10ಕ್ಕೂ ಹೆಚ್ಚು ಜನರಿಂದ ಅಟ್ಯಾಕ್.! - ವಿಡಿಯೋ ವೈರಲ್

ಬೆಂಗಳೂರು: ಬಿಗ್‌ಬಾಸ್ ಖ್ಯಾತಿಯ ಲಾಯರ್ ಜಗದೀಶ್ ಅವರ ಮೇಲೆ 10ಕ್ಕೂ ಹೆಚ್ಚು ಜನ ಸೇರಿ ಹಲ್ಲೆ ಮಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಜನರೊಂದಿಗೆ ವಾಗ್ವಾದ ನಡೆಸಿ ಜಗದೀಶ್ ಟೀ-ಶರ್ಟ್ ಹಿಡಿದು ನೂಕಾಟ ತಳ್ಳಾಟ ನಡೆಸಿದ್ದಾರೆ. ಈ ವೇಳೆ ವ್ಯಕ್ತಿಯೊಬ್ಬರು ಜಗದೀಶ್ ಕುತ್ತಿಗೆ ಹಿಡಿದು ಕಾರಿನ ಮೇಲೆ ಮಲಗಿಸಿದ್ದಾರೆ. ಅಷ್ಟೇ ಅಲ್ಲದೆ ಎರಡು ಏಟು ಹಾಕಿದ್ದಾರೆ. ಆದರೆ ಘಟನೆ ಎಲ್ಲಿ ಆಗಿದ್ದು? ಯಾರು ಹಾಗೂ ಯಾಕೆ ಹಲ್ಲೆ ಮಾಡಿದ್ದು ಎಂಬ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ.

ಆದರೂ ಇತ್ತೀಚೆಗೆ ನಟ ದರ್ಶನ್ ಹಾಗೂ ಅವರ ಅಭಿಮಾನಿಗಳ ವಿರುದ್ಧ ಲಾಯರ್ ಜಗದೀಶ್ ಮಾತನಾಡುತ್ತಿದ್ದರು. ಹಾಗಾಗಿ ದರ್ಶನ್ ಅಭಿಮಾನಿಗಳೇ ಹಲ್ಲೆ ನಡೆಸಿದ್ದಾರೆ ಎಂದು ಕೆಲವರು ಹೇಳುತ್ತಿದ್ದಾರೆ. ಅದೇ ರೀತಿಯಲ್ಲೇ ವಿಡಿಯೋ ವೈರಲ್ ಆಗುತ್ತಿದೆ. ಆದರೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಅಷ್ಟೇ ಅಲ್ಲದೆ ಈ ಸಂಬಂಧ ಯಾವುದೇ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿಲ್ಲ.

Edited By : Suman K
PublicNext

PublicNext

23/01/2025 06:19 pm

Cinque Terre

66.49 K

Cinque Terre

12