ಬೆಂಗಳೂರು: ಅಣ್ಣಮ್ಮ ತಾಯಿಯನ್ನು ಕೂರಿಸಲು ವಿರೋಧ ವ್ಯಕ್ತಪಡಿಸಿದ ಬಿಗ್ ಬಾಸ್ ಖ್ಯಾತಿಯ ವಕೀಲ ಜಗದೀಶ್ ಹಾಗೂ ಯುವಕರ ಗುಂಪಿನ ನಡುವೆ ಮಾರಾಮಾರಿ ನಡೆದಿದೆ.
ಬೆಂಗಳೂರಿನ ಸಹಕಾರ ನಗರದಲ್ಲಿ ಇಂದು ಬೆಳಗ್ಗೆ ಘಟನೆ ನಡೆದಿದೆ. ಅಣ್ಣಮ್ಮನನ್ನು ಕೂರಿಸಲು ವಕೀಲ ಜಗದೀಶ್ ವಿರೋಧ ವ್ಯಕ್ತಪಡಿಸಿದ್ದಾರೆ. ಇದರಿಂದ ಕೋಪಕೊಂಡ ಯುವಕರ ಗುಂಪು ವಕೀಲ ಜಗದೀಶ್ ಮನೆ ಬಳಿ ಬಂದು ಜಗಳ ಆರಂಭಿಸಿದ್ದಾರೆ. ಈ ವೇಳೆ ಇಬ್ಬರ ನಡುವೆ ಮಾರಾಮಾರಿ ಆಗಿದೆ. ಈ ಸಂಬಂಧ ಕೊಡಗೇಹಳ್ಳಿ ಠಾಣೆಯಲ್ಲಿ ದೂರು ಪ್ರತಿದೂರು ದಾಖಲಾಗಿದೆ.
PublicNext
23/01/2025 08:51 pm