ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಿಜ್ಬುಲ್ಲಾ ಕಮಾಂಡರ್ 'ಶೇಖ್‌ ಮಹಮ್ಮದ್ ಅಲಿ ಹಮಾದಿ' ಗುಂಡಿಕ್ಕಿ ಹತ್ಯೆ

ಇಸ್ರೇಲ್: ಪೂರ್ವ ಲೆಬನಾನ್‌ನ ಬೆಕಾ ಕಣಿವೆ ಪ್ರದೇಶದಲ್ಲಿ ಅಪರಿಚಿತರ ಗುಂಡಿನ ದಾಳಿಗೆ ಹಿರಿಯ ಹಿಜ್ಬುಲ್ಲಾ ನಾಯಕ ಶೇಖ್ ಮುಹಮ್ಮದ್ ಅಲಿ ಹಮಾದಿ ಮಂಗಳವಾರ (ಜ.21) ಮೃತಪಟ್ಟಿರುವುದು ವರದಿಯಾಗಿದೆ.

ಅಪರಿಚಿತರ ಗುಂಪು ಪಶ್ಚಿಮ ಬೆಕಾ ಜಿಲ್ಲೆಯ ಮಚ್ಘರಾದಲ್ಲಿರುವ ಹಮಾದಿ ಮನೆ ಮೇಲೆ ದಾಳಿ ಮಾಡಿದೆ. ಆಗ ಹಮಾದಿ ದೇಹಕ್ಕೆ ಆರು ಗುಂಡು ಹೊಕ್ಕಿದೆ. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದೆ. ಅಷ್ಟರಲ್ಲಿ ಹಮಾದಿ ಸಾವನ್ನಪ್ಪಿದ್ದಾರೆ ಎಂದು ಟೈಮ್ಸ್ ಆಫ್ ಇಸ್ರೇಲ್ ಹೇಳಿದೆ.

ಕೌಟುಂಬಿಕ ಕಲಹದ ಕಾರಣಕ್ಕೆ ಹಮಾದಿ ಮೇಲೆ ಅಪರಿಚಿತರಿಂದ ಗುಂಡಿನ ದಾಳಿಯಾಗಿದೆ. ರಾಜಕೀಯ ಕಾರಣಕ್ಕಾದ ದಾಳಿ ಅಲ್ಲ. ಘಟನೆ ನಂತರ ಅಧಿಕಾರಿಗಳಯ ತನಿಖೆ ಆರಂಭಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

1985ರಲ್ಲಿ ಅಥೆನ್ಸ್‌ನಿಂದ ರೋಮ್‌ಗೆ 153 ಜನರು ಪ್ರಯಾಣಿಸುತ್ತಿದ್ದ ಪಶ್ಚಿಮ ಜರ್ಮನ್ ವಿಮಾನವನ್ನು ಹೈಜಾಕ್ ಮಾಡಿದ್ದಕ್ಕಾಗಿ US ಫೆಡರಲ್ ಏಜೆನ್ಸಿ ಎಫ್‌ಬಿಐನ ಮೋಸ್ಟ್ ವಾಂಟೆಡ್ ಭಯೋತ್ಪಾದಕರ ಪಟ್ಟಿಯಲ್ಲಿ ಹಮಾದಿ ಕೂಡ ಇದ್ದ.

Edited By : Abhishek Kamoji
PublicNext

PublicNext

23/01/2025 07:25 am

Cinque Terre

59.14 K

Cinque Terre

0