ಆಕರ್ಷಕ ಕಣ್ಣುಗಳು,ಕಂದು ಮೈಬಣ್ಣ ಮುಗ್ಧ ನಗುವಿನ ಮೂಲಕ ಎಲ್ಲರನ್ನು ಸೆಳೆಯುತ್ತಿರುವ ಮಹಾಕುಂಭಮೇಳದಲ್ಲಿ ಮೋಡಿ ಮಾಡಿದ ಪ್ರಯಾಗ್‌ರಾಜ್‌ನ ಪರಮ ಸುಂದರಿ ಮೊನಾಲಿಸಾ ಸದ್ಯ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಮಧ್ಯಪ್ರದೇಶದ ಇಂದೋರ್‌ನಿಂದ ಬಂದು ಕುಂಭಮೇಳದಲ್ಲಿ ಜಪಮಾಲೆಗಳನ್ನು ಮಾರುವ ಯುವತಿ
ತನ್ನ ಕಣ್ಣುಗಳ ಮೂಲಕ ದೇಶದ ಜನರು ಗಮನ ಸೆಳೆದ ಸುಂದರಿ ರಾತ್ರೋರಾತ್ರಿ ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ಮಿಂಚಿದ್ದಾಳೆ.
ಹೌದು ಮೊನಾಲಿಸಾ ಭೋಸ್ಲೆ ಮಹಾ ಕುಂಭಮೇಳದಲ್ಲಿ ರುದ್ರಾಕ್ಷಿ, ಜಪಮಾಲೆ ಸೇರಿದಂತೆ ನಾನಾ ರೀತಿಯ ಸರಗಳನ್ನು ಮಾರುವಾಕೆ. ಡಿಜಿಟಲ್ ಕ್ರಿಯೇಟರ್ ಒಬ್ಬರು ಈಕೆಯ ರೀಲ್ಸ್ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಈ ವಿಡಿಯೊಗೆ ಸುಮಾರು 1 ಮಿಲಿಯನ್ ವರೆಗೆ ಲೈಕ್ಸ್ ಬಂದಿದ್ದೇ ತಡ, ಸಾಮಾಜಿಕ ಜಾಲತಾಣದಲ್ಲಿ ಈಕೆಯ ಸೌಂದರ್ಯದ ಬಗ್ಗೆ ಚರ್ಚೆಗಳು ಹುಟ್ಟಿಕೊಂಡವು. ನೆಟ್ಟಿಗರು 'ಮಹಾ ಕುಂಭಮೇಳದ ಮೊನಲಿಸಾ' ಎಂದು ಕರೆಯಲು ಆರಂಭಿಸಿದರು.
ಇಂಟರ್ನೆಂಟ್‌ನಲ್ಲಿ ಸುದ್ದಿಯಾಗುತ್ತಿದ್ದಂತೆ ಮಹಾ ಕುಂಭಮೇಳದಲ್ಲಿ ಭಾಗವಹಿಸಿದ್ದ ಮಾಧ್ಯಮದವರು, ಡಿಜಿಟಲ್ ಕ್ರಿಯೇಟರ್ಸ್, ವ್ಲಾಗರ್ಸ್ ಸೇರಿದಂತೆ ಎಲ್ಲರೂ ಸಂದರ್ಶನಕ್ಕಾಗಿ ಮೊನಾಲಿಸಾ ಹಿಂದೆ ಬಿದ್ದಿದ್ದಾರೆ. ಆಕೆಯನ್ನು ಹುಡುಕಿಕೊಂಡು ಇನ್ನಷ್ಟು ಯೂಟ್ಯೂಬರ್ಸ್ ಬರುತ್ತಿದ್ದಾರೆ. ಪರಿಣಾಮ ವ್ಯಾಪಾರ ಮಾಡಲೂ ಸಾಧ್ಯವಾಗದಂತಹ ಪರಿಸ್ಥಿತಿ ಸೃಷ್ಟಿಯಾಗಿದೆ. ಅಲ್ಲದೆ ಕೆಲವರು ಎಲ್ಲೆ ಮೀರಿ ನಡೆದುಕೊಳ್ಳುತ್ತಿದ್ದಾರೆ. ಮಾತ್ರವಲ್ಲದೆ ಯಾರೊಬ್ಬರು ಯಾರೊಬ್ಬರು ಆಕೆಯ ಬಳಿ ರುದ್ರಾಕ್ಷಿ,ಜಪಮಾಲೆ,ಮುತ್ತಿನ ಸರ ಕೊಳ್ಳುತ್ತಿಲ್ಲ ಎಂದು ಸ್ವತಹ ಮೊನಾಲಿಸಾ ಹೇಳಿ ಬೇಸರಪಟ್ಟಿದ್ದಾಳೆ.
ತನ್ನ ಪಾಡಿಗೆ ಸರಗಳನ್ನು ಮಾರಾಟ ಮಾಡಿಕೊಂಡಿದ್ದ ಮೊನಾಲಿಸಾ, ಇದೀಗ ಯಾರಿಗೂ ಗುರುತು ಸಿಗದಂತೆ ಮುಖ ಮುಚ್ಚಿಕೊಂಡು ತೆರಳುವಂತಾಗಿದೆ. ಮೊನಾಲಿಸಾ, ಮುಖಕ್ಕೆ ಮಾಸ್ಕ್, ತಲೆ ಕವರ್ ಮಾಡಿ ಗುರುತು ಸಿಗದಂತೆ ತೆರಳುತ್ತಿರುವ ವಿಡಿಯೋ ಇದೀಗ ವೈರಲ್ ಆಗುತ್ತಿದೆ.
ಸಾಮಾಜಿಕ ಜಾಲತಾಣದಲ್ಲಿ ಖ್ಯಾತಿ ಹಾಗೂ ಮಾರಾಟದಲ್ಲಿ ಕುಸಿತ ಕಂಡ ಕಾರಣ ಮೊನಾಲಿಸಾ ಮನೆಗೆ ಹಿಂತಿರುಗಿದ್ದಾಳೆ.
PublicNext
20/01/2025 04:20 pm