ವಿಶ್ವದ ಅತಿದೊಡ್ಡ ಧಾರ್ಮಿಕ ಮೇಳ 144 ವರ್ಷಗಳಿಗೊಮ್ಮೆ ನಡೆಯುವ ಮಹಾ ಕುಂಭಮೇಳವು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಆರಂಭವಾಗಿದ್ದು, ಕೋಟ್ಯಾಂತರ ಜನ ಅಲ್ಲಿಗೆ ಭೇಟಿ ನೀಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಮಹಾ ಕುಂಭ ಮೇಳ ರಾರಾಜಿಸುತ್ತಿದೆ. ಧಾರ್ಮಿಕ ಕಾರ್ಯಕ್ರಮಕ್ಕೆ ಸಂಬಂಧಿಸಿದ ವಿವಿಧ ರೀತಿಯ ಮಾಹಿತಿ, ಚಿತ್ರ, ವಿಡಿಯೋಗಳು ಫೇಸ್‌ಬುಕ್, ಎಕ್ಸ್, ಇನ್‌ಸ್ಟಾಗ್ರಾಮ್ ಖಾತೆಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.
ಸದ್ಯ ಇದೇ ಸಾಮಾಜಿಕ ಜಾಲತಾಣದಲ್ಲಿ ಕುಂಭಮೇಳದಲ್ಲಿ ರುದ್ರಾಕ್ಷಿ ಮಾರುವ ಹುಡುಗಿಯೊಬ್ಬಳು ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾಳೆ. ಬ್ಯೂಟಿ ಎನ್ನುವುದು ಶ್ರೀಮಂತರಿಗೆ ಸೀಮಿತವಲ್ಲ ಬಡವರಿಗೆ ವರ ಎನ್ನುವುದಕ್ಕೆ ಈ ಬೆಡಗಿಯೇ ಬೆಸ್ಟ್ ಉದಾಹರಣೆ ಎನ್ನಬಹುದು.
ಇಂದೋರಿನ ಈ ಬೆಡಗಿ ರುದ್ರಾಕ್ಷಿ ಮಾಲೆ ಮಾರಿ ಜೀವನ ನಡೆಸುತ್ತಿದ್ದಾಳೆ. ಅದ್ಯಾವಾಗ ಕ್ಯಾಮೆರಾ ಕಣ್ಣಿಗೆ ಬಿದ್ದಳೋ ತನ್ನ ಸೌಂದರ್ಯದಿಂದಲೇ ಎಲ್ಲರ ಹೃದಯ ಗೆದ್ದು ಸಕ್ಕತ್ ಫೇಮಸ್ ಆಗಿದ್ದಾಳೆ. ಇನ್ಸ್‌ಸ್ಟಾಗ್ರಾಮದಲ್ಲಿ ಬ್ಯೂಟಿಫುಲ್ ಬೆಡಗಿ ಮೊನಾಲಿಸಾಳ ವಿಡಿಯೋಗಳಿಗೆ ಕಂಡರಿಯದ ರೀತಿಯಲ್ಲಿ ಲೈಕ್ಸ್ ಬರುತ್ತಿವೆ.
ಹೆಸರಿಗೆ ತಕ್ಕಂತೆ ಮೊನಾಲಿಸಾ ಸಿಕ್ಕಾಪಟ್ಟೆ ಬ್ಯೂಟಿಫುಲ್ ಆಗಿದ್ದು ಎಲ್ಲರೂ ವಾವ್ಹ್ ಎನ್ನುತ್ತಿದ್ದಾರೆ. ಇವಳ ಬ್ಯೂಟಿಗೆ ವಿಶ್ವದಾದ್ಯಂತ ಫ್ಯಾನ್ಸ್ ಹುಟ್ಟಿಕೊಂಡಿದ್ದಾರೆ.
PublicNext
18/01/2025 02:16 pm