ಧಾರವಾಡ: ವಿಜಯ ಕರ್ನಾಟಕ ದಿನ ಪತ್ರಿಕೆ ಓದುಗರಿಗೆ ತಾಜಾ ಸುದ್ದಿ ಕೊಡುವುದರ ಜೊತೆಗೆ ಸಮಾಜಮುಖಿ ಜಾಗೃತಿ ಮೂಡಿಸಲು ಮುಂದಾಗಿದೆ. ಮಾದಕ ವಸ್ತುಗಳ ವಿರುದ್ಧ ಕರ್ನಾಟಕ ಎಂಬ ಸಂಕಲ್ಪವನ್ನು ಹೊತ್ತು, ವಿದ್ಯಾರ್ಥಿಗಳಲ್ಲಿ ಮಾದಕ ವಸ್ತುಗಳ ಜಾಗೃತಿ ಮೂಡಿಸುವ ಅಭಿಯಾನವನ್ನು ಹಮ್ಮಿಕೊಂಡಿದ್ದು, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಜೆಎಸ್ಎಸ್ ಸಂಸ್ಥೆ ಕಾರ್ಯದರ್ಶಿ ಅಜಿತ್ ಪ್ರಸಾದ್, ಕ್ಲಾಸಿಕ್ ಸಂಸ್ಥೆಯ ಲಕ್ಷ್ಮಣ ಉಪ್ಪಾರ,ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್, ಮನೋವೈದ್ಯ ಡಾ. ಪವನ ಜೋಶಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ಭರಮನಿ, ವಿಜಯ ಕರ್ನಾಟಕ ಸಂಪಾದಕರಾದ ಬಂಡು ಕುಲಕರ್ಣಿ ಸೇರಿದಂತೆ ಹಲವರು ಗಣ್ಯರು ಗುರುವಾರ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ವಿಜಯ ಕರ್ನಾಟಕ ದಿನಪತ್ರಿಕೆ ಸಹಯೋಗದೊಂದಿಗೆ ಇಂದು ಧಾರವಾಡ ಜೆಎಸ್ಎಸ್ ಮಹಾವಿದ್ಯಾಲಯದಲ್ಲಿ, ಡ್ರಗ್ಸ್ ಮುಕ್ತ ಕರ್ನಾಟಕ ಎಂದು ಸಂಕಲ್ಪ ಹೊತ್ತು ಇಡೀ ರಾಜ್ಯಾದ್ಯಂತ ಜಾಗೃತಿ ಅಭಿಯಾನ ಮಾಡುತ್ತಿದ್ದಾರೆ. ಇಂದಿನ ಯುವಪಡೆ ಮಾದಕ ವಸ್ತುಗಳತ್ತ ಜಾರುತ್ತಿದ್ದಾರೆ. ಡ್ರಗ್ಸ್ ಸೇವನೆ ಮಾಡಿ ಅದೆಷ್ಟೋ ಯುವಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇದನ್ನು ಬುನಾದಿ ಸಮೇತ ಕಿತ್ತು ಹಾಕಲು ವಿಜಯ ಕರ್ನಾಟಕ ಹಲವಾರು ರೀತಿಯಲ್ಲಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ ವಿದ್ಯಾರ್ಥಿಗಳನ್ನು ಒಂದೆಡೆ ಸೇರಿಸಿ ರ್‍ಯಾಲಿ ಮಾಡೋದರ ಮೂಲಕ ಸಾರ್ವಜನಿಕರಲ್ಲಿ ಮಾದಕ ವಸ್ತುಗಳ ಸೇವನೆ ಬಗ್ಗೆ ಅರಿವು ಮೂಡಿಸಿದ್ದಾರೆ. ಕಳೆದ ಮೂರು ವರ್ಷಗಳಿಂದ 100 ಕ್ಕೂ ಹೆಚ್ಚು ಮಾದಕ ವಸ್ತುಗಳ ವಿರುದ್ಧ ಜಾಗೃತಿ ಕಾರ್ಯಕ್ರಮಗಳನ್ನು ಮಾಡಿದ್ದಾರೆ. ಹೀಗೆ ಡ್ರಗ್ಸ್ ಮುಕ್ತ ಕರ್ನಾಟಕ ಸಂಕಲ್ಪ ಹೊತ್ತ ವಿಜಯ ಕರ್ನಾಟಕ ದಿನಪತ್ರಿಕೆಯ ಒಂದು ಮಹತ್ತರ ಕಾರ್ಯಕ್ಕೆ ಗಣ್ಯರು ಸಾಥ್ ನೀಡುವುದರ ಜೊತೆಗೆ ಅಭಿನಂದನೆ ಸಲ್ಲಿಸಿದ್ದಾರೆ. ದೇಶದ ಭವಿಷ್ಯ ಇಂದಿನ ವೇದಿಕೆಯಲ್ಲಿ ಇದೆ. ತಾಜಾ ಸುದ್ದಿಗಳನ್ನು ಕೊಡುವುದರ ಜೊತೆಗೆ ಸಮಾಜಮುಖಿ ಕಾರ್ಯ ಮಾಡ್ತಿರೋದಕ್ಕೆ ಸಂತೋಷ ತಂದಿದೆ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ್ ಬೊಮ್ಮಾಯಿ ಹೇಳಿದರು.
ಇನ್ನು ವಿಜಯ ಕರ್ನಾಟಕದ ಈ ಡ್ರಗ್ಸ್ ಮುಕ್ತ ಕರ್ನಾಟಕ ಅಭಿಯಾನಕ್ಕೆ ಪೊಲೀಸ್ ಕಮಿಷನರೇಟ್ ಕೂಡ ಸಾಥ್ ನೀಡಿದೆ. ಅವಳಿ ನಗರದಲ್ಲಿ ಡ್ರಗ್ಸ್ ಸೇವನೆ ಮಾಡಿ ಅದೆಷ್ಟೋ ಯುವಕರು ಕ್ರೈಂ ಮಾಡ್ತಿದ್ದಾರೆ. ಅತೀ ಹೆಚ್ಚು ಅಪರಾಧಗಳು ಆಗಿರೋದೆ ಮಾದಕ ವಸ್ತು ಸೇವನೆ ಮಾಡಿ, ಇದನ್ನೆಲ್ಲ ಗಮನಿಸಿದ ವಿಜಯ ಕರ್ನಾಟಕ ದಿನಪತ್ರಿಕೆ ಮಾದಕ ವಸ್ತುಗಳ ವಿರುದ್ಧ ಜಾಗೃತಿ ಮೂಡಿಸುತ್ತಿದ್ದಾರೆ. ಜಿಲ್ಲಾಡಳಿತ, ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರೇಟ್, ಧಾರವಾಡ ಜಿಲ್ಲಾ ಪೊಲೀಸ್ ಇಲಾಖೆ ಕೂಡ ಸಾಥ್ ನೀಡುವುದರ ಜೊತೆಗೆ ಕ್ರಮ ಕೈಗೊಳ್ಳುತ್ತಿದ್ದಾರೆ. ಇವರ ಒಂದು ಕಾರ್ಯಕ್ಕೆ ಸಾಥ್ ನೀಡುವುದರ ಜೊತೆಗೆ ವಿದ್ಯಾರ್ಥಿಗಳಲ್ಲಿ ಮಾದಕ ವಸ್ತುಗಳ ಸೇವನೆ ಬಗ್ಗೆ ಅರಿವು ಮೂಡಿಸಿದರು.
ಇನ್ನು ವಿಜಯ ಕರ್ನಾಟಕ ದಿನಪತ್ರಿಕೆಯ ಡ್ರಗ್ಸ್ ಮುಕ್ತ ಕರ್ನಾಟಕ ಎಂಬ ಸಂಕಲ್ಪಕ್ಕೆ ಗಣ್ಯರು ಚಾಲನೆ ನೀಡಿದ್ದಾರೆ. ಸುಭಾಷ್ ಚಂದ್ರ ಭೋಸ್ ಅವರ ಜನ್ಮ ದಿನದ ಅಂಗವಾಗಿ ಅವರ ಭಾವ ಚಿತ್ರಕ್ಕೆ ಪುಷ್ಪ ನಮನ ಮಾಡಿದರು. ಇದರ ಜೊತೆಗೆ ವಿಜಯ ಕರ್ನಾಟಕ ಸಿಬ್ಬಂದಿ ಗಣ್ಯರನ್ನು ಸನ್ಮಾನಿಸಿದರು. ಈ ಅಭಿಯಾನ ಕಾರ್ಯಕ್ರಮದಲ್ಲಿ ಉಜ್ವಲ ಡೆವಲಪರ್ಸ್ ಆ್ಯಂಡ್ ಬಿಲ್ಡರ್ ಮಾಲೀಕರಾದ ದಾದಾಪೀರ್ ಬಳ್ಳಾರಿ, ಹಂಚಿನಮನಿ ಕಾಲೇಜಿನ ಪ್ರಾಚಾರ್ಯರಾದ ರಾಜು ಕಡೆಮನಿ ಸೇರಿದಂತೆ ಜೆಎಸ್ಎಸ್ ಕಾಲೇಜು ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಭಾಗಿಯಾಗಿದ್ದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
23/01/2025 08:25 pm