ಕುಂದಗೋಳ : ಹೊಲದಲ್ಲಿ ಎತ್ತುಗಳನ್ನು ಕಟ್ಟಲು ಹೋದ ರೈತನಿಗೆ ಜೇನು ನೊಣಗಳು ಕಚ್ಚಿ ಮೃತಪಟ್ಟ ಘಟನೆ ಕುಂದಗೋಳ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ನಡೆದಿದೆ.
ಹೌದು ! ಕುಂದಗೋಳ ಪಟ್ಟಣದ ಗಂಗಪ್ಪ ಚನ್ನಬಸಪ್ಪ ಕುಂದಗೋಳ ಎಂಬ ರೈತ ಹೊಲದಲ್ಲಿ ಎತ್ತುಗಳನ್ನು ಕಟ್ಟುತ್ತಿರುವಾಗ ಏಕಾಏಕಿ ಜೇನು ನೋಣಗಳು ದಾಳಿ ನಡೆಸಿವೆ. ತಕ್ಷಣ ಗಮನಿಸಿದ ಅಕ್ಕಪಕ್ಕದ ಜಮೀನಿನ ರೈತರು ಗಾಯಾಳು ಗಂಗಪ್ಪನಿಗೆ ಕುಂದಗೋಳ ತಾಲೂಕು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡುವ ವೇಳೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಇದೇ ವೇಳೆ ಮೃತ ಗಂಗಪ್ಪ ಚನ್ನಬಸಪ್ಪ ಕುಂದಗೋಳ ಇವರ ಹೊಲದಲ್ಲಿ ಜೇನು ದಾಳಿಗೆ ಒದ್ದಾಡುತ್ತಿರುವ ಎತ್ತುಗಳನ್ನು ಕಂಡು ಓಡೋಡಿ ಬಂದ ಹಂಚಿನಾಳ ಗ್ರಾಮದ ರೈತ ಸುಭಾಸ ಬಸಪ್ಪ ಹೋಳಿ ಇವರಿಗೂ ಜೇನು ನೊಣಗಳು ಕಚ್ಚಿ ಗಾಯಗಳಾಗಿವೆ.
ಜೇನು ನೊಣಗಳ ಕಾಟಕ್ಕೆ ಇಡಾದ ಎತ್ತುಗಳನ್ನು ಕುಂದಗೋಳ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ, ಆದರೆ ವಿಧಿಯ ಆಟಕ್ಕೆ ಅನ್ನದಾತ ಗಂಗಪ್ಪ ಚನ್ನಬಸಪ್ಪ ಕುಂದಗೋಳ ಜೀವ ಬಿಟ್ಟಿದ್ದಾರೆ.
ಈ ಘಟನೆ ಕುಂದಗೋಳ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
Kshetra Samachara
23/01/2025 07:46 am