ಕುಂದಗೋಳ : ಅತಿವೇಗವಾಗಿ ನಿಯಂತ್ರಣಕ್ಕೆ ಸಿಗದಂತೆ ಟ್ರ್ಯಾಕ್ಟರ್ ಚಾಲನೆ ಮಾಡಿಕೊಂಡ ಹೊರಟ ಟ್ರ್ಯಾಕ್ಟರ್ ಪಲ್ಟಿಯಾಗಿ ಟ್ರ್ಯಾಕ್ಟರ್'ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೋರ್ವ ಸಾವನ್ನಪ್ಪಿದ ಘಟನೆ ಸಂಶಿ ಲಕ್ಷ್ಮೇಶ್ವರ ರಸ್ತೆಯಲ್ಲಿ ನಡೆದಿದೆ.
ಹೌದು ! ಕುಂದಗೋಳ ತಾಲೂಕಿನ ಪಶುಪತಿಹಾಳ ಗ್ರಾಮದ ಟ್ರ್ಯಾಕ್ಟರ್ ಚಾಲಕ ನಿಂಗಪ್ಪ ಗಂಗಪ್ಪ ಚಬ್ಬಿ ಎಂಬಾತ ತನ್ನ ಗೆಳೆಯ ಬಸವರಾಜ ಸುರೇಶ ಜಾವೂರ ಎಂಬಾತನನ್ನು ಟ್ರ್ಯಾಕ್ಟರ್'ನಲ್ಲಿ ಕೂರಿಸಿಕೊಂಡು ಪಶುಪತಿಹಾಳದಿಂದ ರಾಮಗೇರಿ ಎಡೆಗೆ ಹೊರಟ ವೇಳೆ ಚಾಲಕನ ನಿಯಂತ್ರಣಕ್ಕೆ ಸಿಗದೆ ಟ್ರ್ಯಾಕ್ಟರ್ ಪಲ್ಟಿಯಾಗಿದೆ.
ಈ ವೇಳೆ ಬಸವರಾಜ ಸುರೇಶ ಜಾವೂರ ಪಲ್ಟಿಯಾದ ಟ್ರ್ಯಾಕ್ಟರ್ ಅಡಿಯಲ್ಲಿ ಸಿಲುಕಿ ಚಿಕಿತ್ಸೆಗೆಂದು ಕುಂದಗೋಳ ತಾಲೂಕು ಆಸ್ಪತ್ರೆಗೆ ದಾಖಲಿಸುವ ಮಾರ್ಗ ಮಧ್ಯೆ ವೇಳೆ ಮೃತಪಟ್ಟಿದ್ದಾರೆ. ಈ ಘಟನೆ ಗುಡಗೇರಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜ.16 ರಂದು ನಡೆದಿದ್ದು, ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದೆ.
Kshetra Samachara
22/01/2025 04:46 pm