ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ - ಅಪಘಾತದಲ್ಲಿ ಅನಾಥವಾದ ಅದೆಷ್ಟೋ ಕುಟುಂಬಗಳು

ಹುಬ್ಬಳ್ಳಿ: ಅವರೆಲ್ಲರೂ ತರಕಾರಿ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದ ಬಡ ವ್ಯಾಪಾರಸ್ಥರು. ನೂರು ಇನ್ನೂರು ದುಡಿದರೂ ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದರು. ಆದರೆ ವಿಧಿಯಾಟದಿಂದ ಈಗ ಉಸಿರೇ ನಿಂತು ಹೋಗಿದೆ.

ಯಲ್ಲಾಪುರ ಮಾರ್ಗದ ಅರೆಬೈಲ್ ಸಮೀಪ ಭೀಕರ ರಸ್ತೆ ಅಪಘಾತದಲ್ಲಿ 9 ಜನ ಸಾವನ್ನಪ್ಪಿದ್ದಾರೆ. 10 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಚಾಲಕನ ನಿಯಂತ್ರಣ ತಪ್ಪಿ ತರಕಾರಿ ತುಂಬಿದ್ದ ಮಿನಿ ಗೂಡ್ಸ್ ವಾಹನ ಪಲ್ಟಿಯಾದ ಪರಿಣಾಮ ಸ್ಥಳದಲ್ಲಿಯೇ 9 ಜನ‌ ಅಸುನೀಗಿ 10ಕ್ಕೂ ಹೆಚ್ಚು ಜನರಿಗೆ ಗಾಯವಾಗಿರುವ ಧಾರುಣ ಘಟನೆ ಯಲ್ಲಾಪುರ ರಸ್ತೆಯ ಅರಬೈಲ್ ಸಮೀಪ ನಡೆದಿದೆ.

ಅಪಘಾತದಲ್ಲಿ ಮೃತಪಟ್ಟವರ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಹಾವೇರಿ ಜಿಲ್ಲೆಯ ಸವಣೂರಿನಿಂದ ಕುಮಟಾ ಸಂತೆಗೆ ತೆರಳುತ್ತಿದ್ದ ತರಕಾರಿ ತುಂಬಿದ ಲಾರಿಯೇ ಅಪಘಾತಕ್ಕೆ ಒಳಗಾಗಿರುವ ವಾಹನವಾಗಿದೆ. ವೇಗವಾಗಿ ತೆರಳುತ್ತಿದ್ದ ವೇಳೆ ಪಲ್ಟಿಯಾದ ಹಿನ್ನಲೆಯಲ್ಲಿ, 9 ಜನರು ಸ್ಥಳದಲ್ಲಿಯೇ ಪ್ರಾಣ ಕಳೆದು ಕೊಂಡಿದ್ದಾರೆ.

ಇನ್ನೂ ಘಟನೆಯಲ್ಲಿ 10ಕ್ಕೂ ಹೆಚ್ಚು ಜನರಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಆ ಎಲ್ಲ ಗಾಯಾಳುಗಳನ್ನು ಹುಬ್ಬಳ್ಳಿ‌ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಲವು ಮೃತ ದೇಹಗಳನ್ನು ಯಲ್ಲಾಪುರ ಸರ್ಕಾರಿ ಆಸ್ಪತ್ರೆ ರವಾನಿಸಿದ್ದಾರೆ.‌ ಅಪಘಾತದ ರಭಸಕ್ಕೆ ವಾಹನ ಸಂಪೂರ್ಣ ಜಖಂಗೊಂಡಿದೆ. ಸ್ಥಳಕ್ಕೆ ಯಲ್ಲಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಒಟ್ಟಿನಲ್ಲಿ ಚಿಕ್ಕಮಕ್ಕಳ ಪುಟ್ಟ ಸಂಸಾರದಲ್ಲಿರುವ ಬಡ ವ್ಯಾಪಾರಸ್ಥರ ಸಾವು ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿದೆ. ವ್ಯಾಪಾರ ಮಾಡಿಕೊಂಡು ಖುಷಿಯಿಂದ‌ ಮನೆಗೆ ಹೋಗಬೇಕಿದ್ದವರು ಹೆಣವಾಗಿರುವುದು ದುರ್ದೈವದ ಸಂಗತಿಯಾಗಿದೆ.

ಮಲ್ಲೇಶ್ ಸೂರಣಗಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ

Edited By : Vinayak Patil
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

22/01/2025 11:08 am

Cinque Terre

99.25 K

Cinque Terre

17

ಸಂಬಂಧಿತ ಸುದ್ದಿ