ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ತನ್ನ ನೋವು ನುಂಗಿ ಕರುಳ ಕುಡಿಗೆ ಹಾಲುಣಿಸುತ್ತಿರುವ ಅಶ್ವ- ಮನ ಮಿಡಿಯುವ ದೃಶ್ಯ!

ಧಾರವಾಡ: ಕುರುಬರ ಕುದುರೆ ಹಿಂಡಿನಲ್ಲಿದ್ದ ಆ ಕುದುರೆಗೆ ಆನೆಕಾಲು ರೋಗ ಬಾಧಿಸಿತ್ತು. ಹೀಗಾಗಿ ಆ ಕುದುರೆಯನ್ನು ಕುರುಬರು ಗರ್ಭಿಣಿ ಇದ್ದಾಗಲೇ, ಅರ್ಧ ದಾರಿಯಲ್ಲೇ ಬಿಟ್ಟು ಹೋಗಿದ್ದರು. ಈಗ ಆ ಕುದುರೆಗೆ ಮರಿ ಕೂಡ ಜನಿಸಿದೆ.

ಮೊದಲೇ ತನಗೆ ಆನೆಕಾಲು ರೋಗ ಇದ್ದು, ನಡೆಯುವುದೇ ತಾಯಿ ಕುದುರೆಗೆ ಕಷ್ಟವಾಗಿದೆ. ಹೀಗಿದ್ದರೂ ತನ್ನ ಮರಿಗಾಗಿ ಆ ಕುದುರೆ ಜೀವ ಸವೆಸುತ್ತಿದೆ. ಕುಂಟುತ್ತಾ ಸಾಗಿ ಅಲ್ಲಲ್ಲಿ ಮೇಯ್ದು ತನ್ನ ಮಗುವಿಗೆ ಹಾಲುಣಿಸುವ ದೃಶ್ಯ ಕರುಳು ಹಿಂಡುವಂತಿದೆ.

ತಾಯಿ ಕುದುರೆಯ ಮುಂಗಾಲು ಆನೆಕಾಲಿನಂತಾಗಿದೆ. ಆ ಕುದುರೆಗೆ ನಡೆದಾಡುವುದೂ ಕಷ್ಟವಾಗಿದೆ. ಹೀಗಿದ್ದಾಗಲೂ ಮರಿಗೆ ಜನ್ಮ ಕೊಟ್ಟಿರುವ ಅಶ್ವ, ತನ್ನ ಕರುಳ ಬಳ್ಳಿಗಾಗಿ ಆದಷ್ಟು ದಿನ ಜೀವ ಸವೆಸುತ್ತಿದೆ. ತಾಯಿ ಬಿಟ್ಟು ತನಗೆ ಯಾರೂ ದಿಕ್ಕಿಲ್ಲದೇ ಇರುವುದರಿಂದ ಮರಿ ಕುದುರೆಯು ತಾಯಿ ಕುದುರೆಯೊಂದಿಗೆ ಸಾಗುತ್ತಿರುವ ದೃಶ್ಯ ಮನಮಿಡಿಯುವಂತಿದೆ.

Edited By : Vinayak Patil
Kshetra Samachara

Kshetra Samachara

22/01/2025 07:56 am

Cinque Terre

36.35 K

Cinque Terre

3