ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಶೈಕ್ಷಣಿಕ, ಧಾರ್ಮಿಕವಾಗಿ ಗುಣಧರನಂದಿ ಮಹಾರಾಜ ಕೊಡುಗೆ ಅಪಾರ - ಶಶಿಕಲಾ ಜೊಲ್ಲೆ

ಹುಬ್ಬಳ್ಳಿ: ಜೈನ ಧರ್ಮದಲ್ಲಿಯೇ ಶೈಕ್ಷಣಿಕ, ಆಧ್ಯಾತ್ಮಿಕ ಹಾಗೂ ಧಾರ್ಮಿಕವಾಗಿ ಬಹುದೊಡ್ಡ ಕ್ರಾಂತಿ ಮಾಡಿರುವ ಕೀರ್ತಿ ಗುಣಧರನಂದಿ ಮಹಾರಾಜರಿಗೆ ಸಲ್ಲುತ್ತದೆ ಎಂದು ಬಿಜೆಪಿ ನಾಯಕಿ ಶಶಿಕಲಾ ಜೊಲ್ಲೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವರೂರಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜೈನಧರ್ಮ ಶಾಂತಿ, ಅಹಿಂಸೆಯ ಆದರ್ಶಗಳನ್ನು ಪಾಲಿಸುತ್ತಲೇ ಬಂದಿದೆ. ಈ ನಿಟ್ಟಿನಲ್ಲಿ ಪ್ರಸ್ತುತ ದಿನಗಳಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಹೆಚ್ಚಿನ ಆದ್ಯತೆ ಕೊಟ್ಟಿರುವುದು ನಿಜಕ್ಕೂ ವಿಶೇಷವಾಗಿದೆ. ಅದರಲ್ಲೂ ಗುಣಧರನಂದಿ ಮಹಾರಾಜರು ಶೈಕ್ಷಣಿಕ ಸೇವೆಯಲ್ಲಿ ಬಹುದೊಡ್ಡ ಮೈಲಿಗಲ್ಲನ್ನು ಹುಟ್ಟು ಹಾಕಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

23/01/2025 06:45 pm

Cinque Terre

88.56 K

Cinque Terre

0

ಸಂಬಂಧಿತ ಸುದ್ದಿ