ಹುಬ್ಬಳ್ಳಿ: ವಿವಾಹಿತ ಮಹಿಳೆ ಜೊತೆ ಫೋನ್ ನಲ್ಲಿ ಮಾತನಾಡಿದ ಎಂಬ ಕಾರಣಕ್ಕೆ ಯುವಕನನ್ನು ಅಪಹರಣ ಮಾಡಿ ಮಾರಣಾಂತಿಕ ಹಲ್ಲೆ ನಡೆಸಿದ್ದಲ್ಲದೇ ಬೆತ್ತಲೆ ಮಾಡಿ ಏರಿಯಾದಲ್ಲಿ ಬೆತ್ತಲೆ ಮೆರವಣಿಗೆ ಮಾಡಿದ ಘನಘೋರ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದ್ದು ಪಬ್ಲಿಕ್ ನೆಕ್ಸ್ಟ್ ಗೆ Exclusive ಆಗಿ ಸಿಕ್ಕಿದೆ.
ಹುಬ್ಬಳ್ಳಿಯ ಟಿಪ್ಪು ನಗರದ 25 ವರ್ಷದ ಮುಜಾಪೀರ್ ಎಂಬ ಯುವಕನನ್ನೇ ಬೆತ್ತಲೆ ಮೆರವಣಿಗೆ ಮಾಡಿದ್ದು. ಈತ ತನ್ನ ಮನೆಯ ಪಕ್ಕದ ಆಂಟಿಯೊಬ್ಬಳ ಜೊತೆ ಫೋನ್ ನಲ್ಲಿ ಮಾತನಾಡುತ್ತಿದ್ದ. ಅಷ್ಟೇ ಅಲ್ಲ ಆಕೆಯ ಜೊತೆ ಅನೈತಿಕ ಸಂಬಂಧ ಕೂಡ ಹೊಂದಿದ್ದ ಹೀಗಾಗಿ ಸಾಕಷ್ಟು ಬಾರಿ ಮುಜಾಪೀರ್'ಗೆ ಎಚ್ಚರಿಕೆ ನೀಡಿದರೂ ಕೂಡಾ ಕ್ಯಾರೆ ಎನ್ನದೇ ಜಾಲಿ...ಜಾಲಿ ಅಂತಾ ಆಂಟಿ ಜೊತೆ ಡಿಂಗ್ ಡಾಂಗ್ ನಡೆಸಿದ್ದ.
ಇದರಿಂದ ರೊಚ್ಚಿಗೆದ್ದ ಮಹಿಳೆಯ ಕುಟುಂಬದವರು ಮುಜಾಪೀರ್ ನನ್ನು ಮನೆಯಿಂದ ಕಿಡ್ನ್ಯಾಪ್ ಮಾಡಿ ಹುಬ್ಬಳ್ಳಿಯ ಹೊರವಲಯದಲ್ಲಿ ಆತನನ್ನು ಮನಸ್ಸೋ ಇಚ್ಛೆ ಹಲ್ಲೆ ನಡೆಸಿದ್ದಾರೆ. ಅಷ್ಟೇ ಅಲ್ಲದೇ ಆತನನ್ನು ಬೆತ್ತಲೆಗೊಳಿಸಿ ಆಟೋದಲ್ಲಿ ತಂದು ಹುಬ್ಬಳ್ಳಿಯಲ್ಲಿ ತಂದು ಏರಿಯಾದಲ್ಲಿ ಬಿಟ್ಟು ಹೋಗಿದ್ದಾರೆ.ಸದ್ಯ ಘಟನೆಯ ಕುರಿತು ಹಲ್ಲೆಗೊಳಗಾದ ಮುಜಾಪೀರ್ ಹೇಳಿದ್ದು ಹೀಗೆ.
ಮುಜಾಪೀರ್ ನನ್ನು ಕರೆದೊಯ್ದ ಮಹಿಳೆಯ ಕುಟುಂಬದವರು ಮುಳ್ಳಿನ ಕಟ್ಟಿಗೆ,ರಾಡ್,ಹಾಗೂ ಬ್ಲೇಡ್ ನಿಂದ ಹಲ್ಲೆ ನಡೆಸಿದ ಪರಿಣಾಮ ಮುಜಾಪೀರ್ ಗಂಭೀರವಾಗಿ ಗಾಯಗೊಂಡಿದ್ದು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ ಅಂತಾ ಮುಜಾಪೀರ್ ತಾಯಿ ಹೇಳಿದ್ದಾಳೆ.
ಒಟ್ಟಿನಲ್ಲಿ ನಾಲ್ಕು ಮಕ್ಕಳಿದ್ದರೂ ಆಂಟಿಯ ಹಿಂದೆ ಬಿದ್ದು ಬೆಡ್ ನಲ್ಲಿ ಹೊರಳಾಡಿದ್ದ ಮುಜಾಪೀರ್ ಇದೀಗ ಆಂಟಿಯ ಕುಟುಂಬಸ್ಥರಿಂದ ಹೊಡೆತ ತಿಂದು ಬೆಡ್ ಸೇರಿದ್ದಾನೆ.ಕಸಬಾಪೇಟ್ ಠಾಣೆಯ ಪೊಲೀಸರು ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
-ವಿನಯ್ ರೆಡ್ಡಿ, ಕ್ರೈಂ ಬ್ಯುರೋ, ಪಬ್ಲಿಕ್ ನೆಕ್ಸ್ಟ್
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
22/01/2025 03:33 pm