ಕುಂದಗೋಳ : ಹೆಂಡತಿ ಮೇಲೆ ಸಂಶಯಪಟ್ಟ ಗಂಡನೆ ಹೆಂಡತಿಯನ್ನು ಅಮಾನುಷವಾಗಿ ಕೊಲೆಗೈದು ತಾನು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿ ಬದುಕುಳಿದ ಘಟನೆ ಕುಂದಗೋಳ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಹೌದು ! ಕುಂದಗೋಳ ತಾಲೂಕಿನ ಕುಬಿಹಾಳ ಗ್ರಾಮದ ಈಶ್ವರಗೌಡ ಬಾಪುಗೌಡ ಸಾತಮಾರ ಎಂಬ ಪತಿಯೆ, ಪತ್ನಿ ಸುಧಾ ಈಶ್ವರಗೌಡ ಸಾತಮಾರ ಮೇಲೆ ಸಂಶಯ ಪಟ್ಟು ಮೂಗಿನ ಹತ್ತಿರ ಹೊಡೆದು ರಕ್ತ ಸಿಕ್ತವಾಗಿ ಗಾಯಗೊಳಿಸಿ, ಬಲಗೈಯನ್ನು ವಾಟರ್ ಹಿಟರ್'ನಿಂದ ಸುಟ್ಟು ಕುತ್ತಿಗೆ ಹಿಚುಕಿ ಕೊಲೆ ಮಾಡಿ ತಾನು ಸಹ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿ ಬದುಕುಳಿದ್ದಾನೆ.
ಈ ಘಟನೆ ಜನೆವರಿ 17 ರಂದು ಕುಂದಗೋಳ ತಾಲೂಕಿನ ಕುಬಿಹಾಳ ಗ್ರಾಮದಲ್ಲಿ ನಡೆದಿದ್ದು, ಕುಂದಗೋಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದೆ.
Kshetra Samachara
21/01/2025 02:48 pm