ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಡೇಟಿಂಗ್ ಆ್ಯಪ್ ಡೌನ್‌ಲೋಡ್ ಮಾಡುವ ಮುನ್ನ ಇರಲಿ ಎಚ್ಚರ… ಎಚ್ಚರ… ಯುವಕರೇ ಮಾತಿಗೆ ಮರಳಾಗಬೇಡಿ

ಹುಬ್ಬಳ್ಳಿ: ಕಾಲ ಬದಲಾದಂತೆ ಈಗ ವಂಚಕರು ಸಹ ಬದಲಾಗುತ್ತಿದ್ದಾರೆ. ಜನರು ಚಾಪೆ ಕೆಳಗೆ ನುಗ್ಗಿದ್ರೆ ವಂಚಕರು ರಂಗೋಲಿ ಕೆಳಗೆ ನುಗ್ಗುವ ಕೆಲಸ ಮಾಡುತ್ತಿದ್ದಾರೆ. ಅಂದರೆ ಮೊದಲು ನಾವೆಲ್ಲರೂ ಯಾರನ್ನೇ ಭೇಟಿ ಆಗಬೇಕು ನಂಬರ್ ತಗೋಬೇಕು ಅಂದ್ರೆ ಅದು ಕಷ್ಟದ ಕೆಲಸ. ಆದ್ರೆ ಅದನ್ನೇ‌ ಬಂಡವಾಳ ಮಾಡಿಕೊಂಡ ವಂಚಕರು ಡೇಟಿಂಗ್ ಆ್ಯಪ್ ಮೂಲಕ ಯುವಕರಿಗೆ ವಂಚನೆ ಮಾಡುತ್ತಿದ್ದಾರೆ. ಅಷ್ಟಕ್ಕೂ ಆ ಡೇಟಿಂಗ್ ಕಥೆ ತೋರಿಸ್ತೀವಿ ನೋಡಿ...

ಹೌದು... ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಅದೆಷ್ಟೋ ಯುವಕರು ಡೇಟಿಂಗ್ ಆ್ಯಪ್ ಜಾಲಕ್ಕೆ ಸಿಲುಕಿ ಒದ್ದಾಡುತ್ತಿದ್ದಾರೆ. ನೀವು ಸಿಂಗಲ್ ಇದೀರಾ,, ನಿಮಗೆ ಸಂಗಾತಿ ಬೇಕಾ,,, ಎಂದು ಚೆಂದುಳ್ಳಿ ಚೆಲುವೆಯರ ಮೂಲಕ ಜನರನ್ನ ಆಕರ್ಷಣೆ ಮಾಡುತ್ತಾರೆ. ಆಗಲೇ ನೋಡಿ ಯುವಕರು ಆ್ಯಪ್ ಡೌನ್ಲೋಡ್ ಮಾಡಿಕೊಂಡ ಯುವತಿಯರಿಗೆ ಚಾಟ್ ಮಾಡಲು ಆರಂಭಿಸುತ್ತಾರೆ. ಆದ್ರೆ ಅಲ್ಲಿರೋರು ಹುಡುಗಿಯರಾ ಅಥವಾ ಬೇರೆನಾ ಎಂಬುದು ಯಾರಿಗೂ ತಿಳಿಯೋದಿಲ್ಲ. ಯಾವಾಗ ಅವರು ವೀಡಿಯೋ ಕಾಲ್ ಮಾಡಿ ಅದನ್ನೇ ಸ್ಕ್ರಿನ್ ರೆಕಾರ್ಡ್ ಮಾಡಿಕೊಂಡು ಹಣಕ್ಕೆ ಬೇಡಿಕೆ ಇಡುತ್ತಾರೋ, ಅವಾಗ ಹುಡುಗರಲ್ಲಿ ಭಯ ಆತಂಕ ಯಾರಿಗೂ ಹೇಳದ ಪರಿಸ್ಥಿತಿ ನಿರ್ಮಾಣ ಆಗಿರುತ್ತದೆ. ಚಾಟ್ ಹಿಸ್ಟರಿ ತಗೊಂಡು ನಿಮ್ಮ ಮನೆಯವರಿಗೆ ಕಳಿಸ್ತೀವಿ ಅಂತ ಬೆದರಿಕೆ ಹಾಕಿ ಹಣ ಲಪಟಾಯಿಸುತ್ತಾರೆ. ಈ ಬಗ್ಗೆ ಯಾವ ರೀತಿ ಎಚ್ಚರಿಕೆಯಿಂದ ಇರಬೇಕೆಂದು ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ಸಲಹೆ ನೀಡಿದ್ದಾರೆ ಕೇಳಿ.

ನೋಡಿದ್ರಲ್ಲಾ ವೀಕ್ಷಕರೇ ಡೇಟಿಂಗ್ ಆ್ಯಪ್ ಕಥೆನಾ… ಒಟ್ಟಿನಲ್ಲಿ ಡೇಟಿಂಗ್ ಆ್ಯಪ್ ಮೂಲಕ ವಂಚನೆ‌ ಪ್ರಕರಣ ಬೆಳಕಿಗೆ ಬರದಿದ್ರೂ ಸಹ, ಅದೆಷ್ಟೋ ಯುವಕರು ಯುವತಿಯರು ಜಾಲಕ್ಕೆ ಸಿಲುಕಿ ಒದ್ದಾಡುತ್ತಿದ್ದಾರೆ. ಅಕಸ್ಮಾತ್ ಯಾರಿಗಾದರೂ ಇಂತಹ ಸಮಸ್ಯೆ ಆಗಿದ್ದರೆ ಪೊಲೀಸರ ಮೊರೆ ಹೋಗಿ ಎಂಬುದೇ ಪಬ್ಲಿಕ್ ನೆಕ್ಸ್ಟ್ ಸಲಹೆ ಆಗಿದೆ.

ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್, ಹುಬ್ಬಳ್ಳಿ.

Edited By : Somashekar
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

22/01/2025 12:56 pm

Cinque Terre

120.31 K

Cinque Terre

3

ಸಂಬಂಧಿತ ಸುದ್ದಿ