", "articleSection": "Law and Order", "image": { "@type": "ImageObject", "url": "https://prod.cdn.publicnext.com/s3fs-public/418299-1737465830-hushra.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "VinayakHubballi" }, "editor": { "@type": "Person", "name": "Ashok.Mullalli" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹುಬ್ಬಳ್ಳಿ: ರಾಜ್ಯದಲ್ಲಿ ದಿನದಿಂದ ದಿನಕ್ಕೆ ದರೋಡೆ ಪ್ರಕರಣಗಳು ಹೆಚ್ಚಾಗುತ್ತಿವೆ. ಬೀದರ್,ಮಂಗಳೂರು,ಮೈಸೂರು ಹಾಗೂ ಹುಬ್ಬಳ್ಳಿಯಲ್ಲಿ ದರೋಡೆ ಪ್ರ...Read more" } ", "keywords": "Hubballi Police, Rising Crime Cases, Karnataka News, 930 Thieves Paraded, Commissioner Shashikumar Warns, Crime Prevention, Police Action, Karnataka Crime Rate, Hubballi City News ¹.,Hubballi-Dharwad,Law-and-Order", "url": "https://publicnext.com/node" }
ಹುಬ್ಬಳ್ಳಿ: ರಾಜ್ಯದಲ್ಲಿ ದಿನದಿಂದ ದಿನಕ್ಕೆ ದರೋಡೆ ಪ್ರಕರಣಗಳು ಹೆಚ್ಚಾಗುತ್ತಿವೆ. ಬೀದರ್,ಮಂಗಳೂರು,ಮೈಸೂರು ಹಾಗೂ ಹುಬ್ಬಳ್ಳಿಯಲ್ಲಿ ದರೋಡೆ ಪ್ರಕರಣಗಳು ನಡೆದಿವೆ. ಜನ ಭಯದ ವಾತಾವರಣದಲ್ಲಿ ದಿನ ಕಳೆಯುವಂತಾಗಿದೆ. ಬ್ಯಾಂಕ್ ಗಳನ್ನೇ ಟಾರ್ಗೆಟ್ ಮಾಡಿ ಲೂಟಿ ಮಾಡೋದು, ನಡು ರಸ್ತೆಯಲ್ಲಿ ರಾಬರಿ ಕಾಮನ್ ಆಗಿ ಬಿಟ್ಟಿದೆ. ಈ ಹಿನ್ನಲೆಯಲ್ಲಿ ಹು-ಧಾ ಪೊಲೀಸರು ಹೈ ಅಲರ್ಟ್ ಆಗಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಹು-ಧಾ ಪೊಲೀಸ್ ಅಲರ್ಟ್ ಆಗಿದ್ದು, ಬ್ಯಾಂಕ್ ಸಿಬ್ಬಂದಿ, ಸೆಕ್ಯುರಿಟಿ ಏಜೆನ್ಸಿ ಹಾಗೂ ಕಳ್ಳತನ ಪ್ರಕರಣದಲ್ಲಿ ಭಾಗಿಯಾದವರ ಪರೇಡ್ ಮಾಡಿದ್ದಾರೆ.
ದರೋಡೆ ಪ್ರಕರಣ ಹೆಚ್ಚಾದ ಹಿನ್ನೆಲೆ ಸರ್ಕಾರವೂ ಅಲರ್ಟ್ ಆಗಿದ್ದು, ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಇಂದು MOB ಗಳ ಪರೇಡ್ ಮಾಡಿದ್ರು.ಅವಳಿ ನಗರದಲ್ಲಿ ಸ್ಥಳೀಯ ಹಾಗೂ ಪರಸ್ಥಳೀಯ ಸೇರಿ ಸುಮಾರು 3600 ಜನ MOB ಕಾರ್ಡ್ ಹೋಲ್ಡರ್ ಗಳಿದ್ದಾರೆ. ಇಂದು ಒಟ್ಟು 930 ಜನ MOB ಕಾರ್ಡ್ ಹೋಲ್ಡರ್ ಗಳನ್ನು ಕರೆದು ಕಮಿಷನರ್ ವಾರ್ನ್ ಮಾಡಿದ್ರು. ದರೋಡೆ ಪ್ರಕರಣ ಹಿನ್ನೆಲೆ ಮುಂಜಾಗೃತಾ ಕ್ರಮವಾಗಿ ಪೊಲೀಸ್ ಕಮಿಷನರ್ ಎಲ್ಲರಿಗೂ ಎಚ್ಚರಿಕೆ ನೀಡಿದರು. ಅಪರಾಧ ಪ್ರಕರಣಗಳು,ಅಂದ್ರೆ, ಕೊಲೆ, ಸುಲಿಗೆ,ಡಕಾಯಿತಿ,ಕಳ್ಳತನ,ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ರೆ ಅಂತಹವರ ವಿರುದ್ಧ MOB ಕಾರ್ಡ್ ಓಪನ್ ಮಾಡಲಾಗುತ್ತೆ.
ಹು-ಧಾ ಅವಳಿ ನಗರದಲ್ಲಿ ಬರೋ ಪೊಲೀಸ್ ಠಾಣೆಗಳಲ್ಲಿ 50 ರಿಂದ 60 ಜನ MOB ಕಾರ್ಡ್ ಹೋಲ್ಡರ್ ಗಳಿದ್ದಾರಂತೆ.ಅವರನ್ನೆಲ್ಲ ಕರೆದು ಎಚ್ಚರಿಕೆ ನೀಡಿದ್ದು, ಮತ್ತೆ ಅಂತಹ ಪ್ರಕರಣದಲ್ಲಿ ಭಾಗಿಯಾದ್ರೆ ಗಡಿಪಾರು ಮಾಡೋ ಎಚ್ಚರಿಕೆಯನ್ನು ಕಮಿಷನರ್ ನೀಡಿದ್ದಾರೆ. ಇದಲ್ಲದೇ ಕೆಲವರು 20 ವರ್ಷಗಳ ಹಿಂದೆ ಮಾಡಿದ ಅಪರಾಧಕ್ಕೆ ಅವರಿಗೆ MOB ಕಾರ್ಡ್ ನೀಡಲಾಗಿದೆ.ಅಂತಹವುಗಳನ್ನ ಪರಿಶೀಲನೆ ಮಾಡಿ ಅವರನ್ನ ಮುಖ್ಯವಾಹಿನಿಗೆ ತರುತ್ತೇವೆ ಅಂತಾ ಕಮಿಷನರ್ ಶಶಿಕುಮಾರ್ ಹೇಳಿದ್ದಾರೆ.
ಹೇಳಿ ಕೇಳಿ ಹುಬ್ಬಳ್ಳಿಗೆ ಹೊರಗಿನಿಂದ ಬರೋರ ಸಂಖ್ಯೆ ಜಾಸ್ತಿ. ಅದರಲ್ಲೂ ವ್ಯವಹಾರದ ದೃಷ್ಟಿಯಿಂದ ಹುಬ್ಬಳ್ಳಿ ನಗರಕ್ಕೆ ಬರೋರು ಹೆಚ್ಚಾಗಿದ್ದು, ದರೋಡೆ ಪ್ರಕರಣಗಳು ಹೆಚ್ಚಾಗಿರೋದರಿಂದ ಸಹಜವಾಗಿ ಜನ ಆತಂಕಕ್ಕೆ ಒಳಗಾಗಿದ್ದು, ಹು-ಧಾ ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ ಅಲರ್ಟ್ ಆಗಿರೋದು ಜನರಲ್ಲಿ ತುಸು ನೆಮ್ಮದಿ ತರಿಸಿದೆ.
ವಿನಯ್ ರೆಡ್ಡಿ, ಕ್ರೈಂ ಬ್ಯುರೋ, ಪಬ್ಲಿಕ್ ನೆಕ್ಸ್ಟ್
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
21/01/2025 06:54 pm