", "articleSection": "Infrastructure,Crime,Law and Order", "image": { "@type": "ImageObject", "url": "https://prod.cdn.publicnext.com/s3fs-public/378325-1737440402-2.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Praveen Onkari" }, "editor": { "@type": "Person", "name": "somashekar" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಧಾರವಾಡ: ಹುಬ್ಬಳ್ಳಿ, ಧಾರವಾಡ ನಗರದಲ್ಲಿ ಕ್ರೈಂ ಕಡಿಮೆ ಮಾಡಲು ಪೊಲೀಸ್ ಇಲಾಖೆ ಸಾಕಷ್ಟು ಕಸರತ್ತು ಮಾಡುತ್ತಿದ್ದರೂ ಕ್ರೈಂಗಳು ಮಾತ್ರ ಕಡಿಮೆಯಾಗ...Read more" } ", "keywords": ",Hubballi-Dharwad,Infrastructure,Crime,Law-and-Order", "url": "https://publicnext.com/node" }
ಧಾರವಾಡ: ಹುಬ್ಬಳ್ಳಿ, ಧಾರವಾಡ ನಗರದಲ್ಲಿ ಕ್ರೈಂ ಕಡಿಮೆ ಮಾಡಲು ಪೊಲೀಸ್ ಇಲಾಖೆ ಸಾಕಷ್ಟು ಕಸರತ್ತು ಮಾಡುತ್ತಿದ್ದರೂ ಕ್ರೈಂಗಳು ಮಾತ್ರ ಕಡಿಮೆಯಾಗುತ್ತಿಲ್ಲ.
ಧಾರವಾಡ ನಗರದ ಸಪ್ತಾಪುರ ಬಡಾವಣೆಯಿಂದ ಶ್ರೀನಗರವರೆಗೆ ವಿದ್ಯಾರ್ಥಿಗಳ ಸೋಗಿನಲ್ಲಿ ಬರುವ ಕಳ್ಳರ ಗ್ಯಾಂಗ್ ವಿದ್ಯಾರ್ಥಿಗಳ ರೂಮ್ ಹಾಗೂ ಪಿಜಿಗಳನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ. ಈ ಕುರಿತ ಒಂದು ವರದಿ ಇಲ್ಲಿದೆ ನೋಡಿ.
ಅವಳಿನಗರಗಳು ಬೆಳೆದಂತೆಲ್ಲಾ ಕ್ರೈಂಗಳು ಕೂಡ ಬೆಳೆಯುತ್ತಿವೆ. ಪೊಲೀಸರು ಇದಕ್ಕೆ ಕಡಿವಾಣ ಹಾಕಲು ಏನೆಲ್ಲಾ ಕಸರತ್ತು ಮಾಡುತ್ತಿದ್ದಾರೆ. ಆದರೆ, ಅಷ್ಟು ಸುಲಭವಾಗಿ ಕ್ರೈಂಗೆ ಕಡಿವಾಣ ಹಾಕಲು ಆಗುತ್ತಿಲ್ಲ. ಇದಕ್ಕೆ ಉದಾಹರಣೆ ಎಂದರೆ ಧಾರವಾಡ ನಗರದ ಸಪ್ತಾಪುರ ಬಡಾವಣೆಯಿಂದ ಶ್ರೀನಗರದ ನಡುವೆ ಸಾವಿರಾರು ಪಿಜಿ ಹಾಗೂ ರೂಮ್‌ಗಳಿವೆ. ಇಲ್ಲಿ ಕೋಚಿಂಗ್ ಪಡೆಯಲು ಬೇರೆ ಬೇರೆ ಜಿಲ್ಲೆಯಿಂದ ವಿದ್ಯಾರ್ಥಿಗಳು ಬರುತ್ತಾರೆ. ಆದರೆ ಈ ವಿದ್ಯಾರ್ಥಿಗಳಿಗೆ ಕಳ್ಳರದ್ದೇ ದೊಡ್ಡ ಸಂಕಷ್ಟ. ವಿದ್ಯಾರ್ಥಿಗಳ ಸೋಗಿನಲ್ಲೇ ಬರುವ ಕೆಲ ಕಳ್ಳರು, ಬ್ಯಾಗ್ ಬೆನ್ನಿಗೆ ಹಾಕಿಕೊಂಡೇ ರೂಮ್ ಹಾಗೂ ಪಿಜಿಗಳಿಗೆ ನುಗ್ಗುತ್ತಾರೆ.
ಅಲ್ಲಿ ವಿದ್ಯಾರ್ಥಿಗಳ ಮೊಬೈಲ್ ಹಾಗೂ ಬ್ಯಾಗ್ ಕಳ್ಳತನ ಮಾಡಿ ಪರಾರಿಯಾಗುತ್ತಾರೆ. ಧಾರವಾಡದಲ್ಲಿ ಇದು ಒಂದೇ ಬಾರಿ ಅಲ್ಲ. ಹಲವು ಬಾರಿ ಈ ರೀತಿ ಕಳ್ಳತನ ನಡೆದಿವೆ. ಹೀಗಾಗಿ ಪಿಜಿ ಹಾಗೂ ರೂಮ್ ಮಾಲೀಕರು ಪೊಲೀಸ್ ಠಾಣೆ ಮೊರೆ ಕೂಡ ಹೋಗಿದ್ದಾರೆ. ಆದರೆ ಇಲ್ಲಿವರೆಗೆ ಒಬ್ಬೇ ಒಬ್ಬ ಕಳ್ಳ ಕೂಡ ಪತ್ತೆಯಾಗಿಲ್ಲ. ಇನ್ನು ಈ ಕಳ್ಳರ ದೃಶ್ಯ ಸಿಸಿಟಿವಿಯಲ್ಲಿ ಕೂಡ ಸೆರೆಯಾಗಿದೆ. ಆದರೂ ಪೊಲೀಸರಿಗೆ ಕಳ್ಳರು ಮಾತ್ರ ಪತ್ತೆಯಾಗಿಲ್ಲ.
ವಿದ್ಯಾರ್ಥಿಗಳ ಸೋಗಿನಲ್ಲಿ ಬರುವ ಕಳ್ಳರನ್ನು ಹಿಡಿಯುವುದು ಪೊಲೀಸ್ ಇಲಾಖೆಗೂ ದೊಡ್ಡ ತಲೆನೋವಾಗಿದೆ. ಯಾರು ವಿದ್ಯಾರ್ಥಿಗಳು ಯಾರು ಕಳ್ಳರು ಎಂಬುದೇ ಗೊತ್ತಾಗುವುದಿಲ್ಲ. ಇಲ್ಲಿ ಸಮಸ್ಯೆ ಪಿಜಿ ಹಾಗೂ ರೂಮ್‌ಗಳದ್ದಲ್ಲ. ಪಿಜಿ ಹಾಗೂ ರೂಮ್‌ಗಳಿಗೆ ಒಂದು ಕ್ಯಾಂಪಸ್ ಅಂತಾ ಇರೋದಿಲ್ಲ. ಹೀಗಾಗಿ ವಿದ್ಯಾರ್ಥಿಗಳು ತಡ ರಾತ್ರಿವರೆಗೆ ಹೊರಗೆ ಓಡಾಡುತ್ತಾರೆ.
ಅದರಲ್ಲೇ ಮಾಡುವ ಕಳ್ಳರು ಕೂಡ ಬಂದು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ. ಇದೇ ಈಗ ಪೊಲೀಸ್ ಇಲಾಖೆಗೆ ಬಂದಿರುವ ಸಮಸ್ಯೆ. ಸದ್ಯ ಪೊಲೀಸ್ ಆಯುಕ್ತರು ಇದನ್ನು ತಡೆಯುವ ಮಾತು ಹೇಳಿದ್ದಾರೆ.
ಏನೇ ಆಗಲಿ ವಿದ್ಯಾರ್ಥಿಗಳ ಸೋಗಿನಲ್ಲಿ ಬರುವ ಈ ಕಳ್ಳರನ್ನು ಹಿಡಿಯುವುದು ಅಷ್ಟು ಸುಲಭ ಅಲ್ಲ. ಆದರೆ, ಪೊಲೀಸ್ ಇಲಾಖೆ ಮನಸ್ಸು ಮಾಡಿದರೆ ಅದು ಕಷ್ಟವೂ ಅಲ್ಲ.
-ಪ್ರವೀಣ ಓಂಕಾರಿ, ಪಬ್ಲಿಕ್ ನೆಕ್ಸ್ಟ್, ಧಾರವಾಡ.
Kshetra Samachara
21/01/2025 11:50 am