", "articleSection": "Law and Order", "image": { "@type": "ImageObject", "url": "https://prod.cdn.publicnext.com/s3fs-public/418299-1737380246-pata.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "VinayakHubballi" }, "editor": { "@type": "Person", "name": "Ashok.Mullalli" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹುಬ್ಬಳ್ಳಿ: ರಾಜ್ಯದಲ್ಲಿ ದಿನದಿಂದ ದಿನಕ್ಕೆ ದರೋಡೆ ಪ್ರಕರಣಗಳು ಜಾಸ್ತಿ ಆಗುತ್ತಿರುವ ಹಿನ್ನೆಲೆಯಲ್ಲಿ ಅವಳಿ ನಗರದ ಪೊಲೀಸರು ಹೈ ಅಲರ್ಟ್ ಆಗಿದ್ದ...Read more" } ", "keywords": ",Hubballi-Dharwad,Law-and-Order", "url": "https://publicnext.com/node" }
ಹುಬ್ಬಳ್ಳಿ: ರಾಜ್ಯದಲ್ಲಿ ದಿನದಿಂದ ದಿನಕ್ಕೆ ದರೋಡೆ ಪ್ರಕರಣಗಳು ಜಾಸ್ತಿ ಆಗುತ್ತಿರುವ ಹಿನ್ನೆಲೆಯಲ್ಲಿ ಅವಳಿ ನಗರದ ಪೊಲೀಸರು ಹೈ ಅಲರ್ಟ್ ಆಗಿದ್ದು ಮುಂಜಾಗ್ರತಾ ಕ್ರಮವಾಗಿ ಬ್ಯಾಂಕ್,ಸೆಕ್ಯೂರಿಟಿ ಏಜೆನ್ಸಿ,ಕರೆನ್ಸಿ ಚೇಸ್ಟ್ ಏಜೆನ್ಸಿ ಮತ್ತು ಬ್ಯಾಂಕ್ ಲೀಡ್ ಮುಖ್ಯಸ್ಥರನ್ನು ಕರೆಯಿಸಿ ಸುರಕ್ಷತಾ ಕ್ರಮಗಳ ಕುರಿತು ಮೀಟಿಂಗ್ ಮಾಡಲಾಯಿತು.
ಅವಳಿ ನಗರದ ವ್ಯಾಪ್ತಿಯಲ್ಲಿ ಎಷ್ಟು ATM ಮಶೀನ್ ಗಳಿವೆ,ಪ್ರತಿನಿತ್ಯ ಮಶೀನ್ ಗಳಿಗೆ ಯಾವ ಯಾವ ಏಜೆನ್ಸಿ ಯಿಂದ ಎಷ್ಟು ಹಣವನ್ನು ಸಾಗಾಟ ಮಾಡಲಾಗುತ್ತದೆ, ಹಣ ಸಾಗಾಟ ಮಾಡುವ ವಾಹನಗಳ ಸ್ಥಿತಿಗತಿ ಹೇಗಿದೆ ಮತ್ತು ಹಣವನ್ನು ಸಾಗಾಟ ಹಾಗೂ ATM ಗಳಿಗೆ ತೆಗೆದುಕೊಂಡು ಹೋಗುವಾಗ ಯಾವ ರೀತಿಯಾದ ಸೆಕ್ಯೂರಿಟಿ ಇರತ್ತೆ ಎಂಬುದರ ಕುರಿತು ಕಮಿಷನರ್ ಎನ್. ಶಶಿಕುಮಾರ್ ಬ್ಯಾಂಕ್ ಹಾಗೂ ಹಣ ಸಾಗಾಟ ಮಾಡುವ ಏಜೆನ್ಸಿ ಗಳ ಮುಖ್ಯಸ್ಥರಿಂದ ಮಾಹಿತಿಯನ್ನು ಪಡೆದರು.
ದರೋಡೆ ಮಾಡುವ ದರೋಡೆಕೋರರು ಯಾವಾಗ ದರೋಡೆ ಮಾಡ್ತಾರೆ ಅನ್ನೋದು ಗೊತ್ತಾಗಲ್ಲ. ಹೀಗಾಗಿ ಮುನ್ನೆಚ್ಚರಿಕೆ ಕ್ರಮವನ್ನು ಹೇಗೆ ಅನುಸರಿಸಬೇಕು ಜೊತೆಗೆ ಪೊಲೀಸ್ ಇಲಾಖೆಯ ಜೊತೆ ಹೇಗೆಲ್ಲ ಸಂವಹನ ಇಟ್ಟುಕೊಂಡಿರಬೇಕು ಎಂಬುದರ ಕುರಿತು ಕಮಿಷನರ್ ಶಶಿಕುಮಾರ್ ಅವರು ಹಣ ಸಾಗಾಟ ಮಾಡುವ ಸಿಬ್ಬಂದಿಗಳಿಗೆ ಹೇಳಿದರು.
ಸದ್ಯ ರಾಜ್ಯದಲ್ಲಿ ಬೀದರ್,ಮೈಸೂರು,ಮಂಗಳೂರು ನಗರಗಳಲ್ಲಿ ದರೋಡೆ ಪ್ರಕರಣಗಳು ಆಗುತ್ತಿದ್ದ ಹಾಗೆ ಮುನ್ನೆಚ್ಚರಿಕೆ ಕ್ರಮವಾಗಿ ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಭವಿಸದಂತೆ ಅವಳಿ ನಗರದ ಪೊಲೀಸರು ಹೈ ಅಲರ್ಟ್ ವಹಿಸಿದ್ದು ಬ್ಯಾಂಕ್ ಹಾಗೂ ಹಣ ಸಾಗಾಟದ ಸಿಬ್ಬಂದಿಗೆ ಸ್ವಲ್ಪ ನೆಮ್ಮದಿ ನಿಟ್ಟುಸಿರು ಬಿಡುವಂತಾಗಿದೆ.
- ವಿನಯ ರೆಡ್ಡಿ, ಕ್ರೈಂ ಬ್ಯುರೋ ಪಬ್ಲಿಕ್ ನೆಕ್ಸ್ಟ್
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
20/01/2025 07:07 pm