", "articleSection": "Infrastructure,Government,News,Public News", "image": { "@type": "ImageObject", "url": "https://prod.cdn.publicnext.com/s3fs-public/421698-1737619151-v61.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Iranna Y Walikar" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹುಬ್ಬಳ್ಳಿ : ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಒಂದಲ್ಲೊಂದು ರೀತಿಯಲ್ಲಿ ನೂತನ ಪ್ರಯೋಗ ಮಾಡ್ತಾ ಬಂದಿದೆ. ಈಗ ಹೊಸ ವರ್ಷಕ್ಕೆ ಅವಳಿ ನಗರದ ಜನರ...Read more" } ", "keywords": ",Hubballi-Dharwad,Infrastructure,Government,News,Public-News", "url": "https://publicnext.com/node" } ನಿಮ್ಮ ಏರಿಯಾದಲ್ಲಿ ಸಮಸ್ಯೆ ಇದಿಯಾ ಒಂದು ಕರೆ ಸಾಕು : ಮಹಾನಗರ ಪಾಲಿಕೆಯ ನೂತನ ಪ್ರಯೋಗ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಿಮ್ಮ ಏರಿಯಾದಲ್ಲಿ ಸಮಸ್ಯೆ ಇದಿಯಾ ಒಂದು ಕರೆ ಸಾಕು : ಮಹಾನಗರ ಪಾಲಿಕೆಯ ನೂತನ ಪ್ರಯೋಗ

ಹುಬ್ಬಳ್ಳಿ : ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಒಂದಲ್ಲೊಂದು ರೀತಿಯಲ್ಲಿ ನೂತನ ಪ್ರಯೋಗ ಮಾಡ್ತಾ ಬಂದಿದೆ. ಈಗ ಹೊಸ ವರ್ಷಕ್ಕೆ ಅವಳಿ ನಗರದ ಜನರ ಸಮಸ್ಯೆಗಳನ್ನು ಆಲಿಸಲು ಒಂದು ಹೊಸದೊಂದು ಕಾರ್ಯಕ್ರಮವನ್ನು ಆರಂಭ ಮಾಡಿದ್ದಾರೆ. ನಿಮ್ಮ ಏರಿಯಾದಲ್ಲಿ ಏನಾದ್ರು ಸಮಸ್ಯೆ ಇದ್ರೆ, 8277802331 ಒಂದೇ ಕರೆ ಮಾಡಿ, ಮೇಯರ್ ಮತ್ತು ಪಾಲಿಕೆ ಆಯುಕ್ತರು ಜೊತೆ ಮಾತನಾಡಿ ಅಂದೇ ಬಗೆ ಹರಿಸಿಕೊಳ್ಳಿ.

ಎಸ್ ಅವಳಿ ನಗರದ ಸಮಸ್ಯೆಗಳ ಪರಿಹಾರಕ್ಕೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ದಿಟ್ಟ ಹೆಜ್ಜೆಯನ್ನಿಟ್ಟಿದೆ. ರಾಜ್ಯದಲ್ಲೇ ಎರಡನೇ ದೊಡ್ಡ ಪಾಲಿಕೆ. ಅವಳಿ ನಗರದಲ್ಲಿ ದಿನದಿಂದ ದಿನಕ್ಕೆ ಜನಸಂಖ್ಯೆ ಹೆಚ್ಚುತ್ತಿದೆ. ಹಾಗೇಯೇ ಸಮಸ್ಯೆಗಳು ಎದುರಾಗುತ್ತಿವೆ. ಒಟ್ಟು 82 ವಾರ್ಡ್ ಗಳನ್ನು ಹೊಂದಿರುವ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ.

ಅವಳಿ ನಗರದ ಜನರಿಗಾಗಿ ಹೊಸದೊಂದು ಕಾರ್ಯಕ್ರಮ ಆರಂಭ ಮಾಡಿದೆ. ಕುಡಿಯುವ ನೀರು, ಕಸ ವಿಲೇವಾರಿ, ರಸ್ತೆ ಸಮಸ್ಯೆ, ಬೀದಿ ದೀಪ, ಒಳಚರಂಡಿ ಸಮಸ್ಯೆ ಸೇರಿದಂತೆ ಏನೇ ಸಮಸ್ಯೆ ಇದ್ದರೂ ತ್ವರಿತ ಪರಿಹಾರ ನೀಡಲು ಪೋನ್ ಇನ್ ಕಾರ್ಯಕ್ರಮ ಮಾಡಿದೆ. ಪ್ರತಿ ತಿಂಗಳು ಮೊದಲ ಬುಧವಾರ ಒಂದು ದಿನ ಮೇಯರ್ ರಾಮಣ್ಣ ಬಡಿಗೇರ ಮತ್ತು ಪಾಲಿಕೆ ಆಯುಕ್ತ ಈಶ್ವರ ಉಳಾಗಡ್ಡಿ ಅವರು ಹಲವಾರು ಸಮಸ್ಯೆಗಳಿಗೆ ಸಾರ್ವಜನಿಕರೊಂದಿಗೆ ಆಲಿಸಲಿದ್ದಾರೆ.

ಇನ್ನು ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತ ಪರಿಹಾರ ಕಲ್ಪಿಸಿ ಜನಸ್ನೇಹಿ ಆಡಳಿತ ನೀಡುವ ನಿಟ್ಟಿನಲ್ಲಿ ಆಯುಕ್ತರ ದಿಟ್ಟ ಹೆಜ್ಜೆಯನ್ನಿಟ್ಟಿದ್ದು, ಸಮಸ್ಯೆಗಳಿಂದ ಬೇಸತ್ತ ಅವಳಿ ನಗರದ ಜನತೆಗೆ ಪಾಲಿಕೆಯ ಆಯುಕ್ತ ಡಾ ಈಶ್ವರ ಉಳ್ಳಾಗಡ್ಡಿ ಅವರು ನೆಮ್ಮದಿಯ ಸಂತೋಷದ ಸುದ್ದಿ ನೀಡಿದ್ದಾರೆ. ಪ್ರತಿ ತಿಂಗಳು ಮೊದಲ ಬುಧವಾರ ಬೆಳಗ್ಗೆ 11 ರಿಂದ 12:30 ನಿಮ್ಮ ಜೊತೆ ಮಾತನಾಡಿ ಸಮಸ್ಯೆಗಳನ್ನು ಬಗೆ ಹರಿಸಲಿದ್ದಾರೆ. 8277802331 ಕರೆ ಮಾಡಿ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ.

ಈರಣ್ಣ ವಾಲಿಕಾರ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ.

Edited By : Suman K
Kshetra Samachara

Kshetra Samachara

23/01/2025 01:29 pm

Cinque Terre

16.33 K

Cinque Terre

2

ಸಂಬಂಧಿತ ಸುದ್ದಿ