", "articleSection": "Infrastructure", "image": { "@type": "ImageObject", "url": "https://prod.cdn.publicnext.com/s3fs-public/286525-1737646953-WhatsApp-Image-2025-01-23-at-9.12.24-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Sridhar Pujar" }, "editor": { "@type": "Person", "name": "shivuk" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹುಬ್ಬಳ್ಳಿ : ಎಲ್ಲೆಂದರಲ್ಲಿ ಧೂಳು, ಬಂದ್ ಆಗಿರುವ ಎಕ್ಸಿಲೇಟರ್, ಕ್ಲೋಸ್ ಆಗಿರುವ ವಿಚಾರಣೆ ಕೌಂಟರ್, ಪ್ರಯಾಣಿಕರಿಗೆ ಕೂರಲು ಆಸನವಿಲ್ಲಾ, ಕರ್...Read more" } ", "keywords": "Hubballi, New Old Bus Stand, Infrastructure Development, Karnataka News, Hubballi-Dharwad, Public Transportation, Bus Stand Upgrade, Citizen Concerns, Government Accountability.,Hubballi-Dharwad,Infrastructure", "url": "https://publicnext.com/node" }
ಹುಬ್ಬಳ್ಳಿ : ಎಲ್ಲೆಂದರಲ್ಲಿ ಧೂಳು, ಬಂದ್ ಆಗಿರುವ ಎಕ್ಸಿಲೇಟರ್, ಕ್ಲೋಸ್ ಆಗಿರುವ ವಿಚಾರಣೆ ಕೌಂಟರ್, ಪ್ರಯಾಣಿಕರಿಗೆ ಕೂರಲು ಆಸನವಿಲ್ಲಾ, ಕರ್ತವ್ಯನಿರತ ಸಾರಿಗೆ ಸಿಬ್ಬಂದಿಗಳಿಗೂ ಧೂಳಿನದ್ದೆ ಗೋಳು.
ಅರೆ ! ಇದೇನು ಏನು ಅವ್ಯವಸ್ಥೆ ಅಂತಿರಾ... ಇದೇ ಸ್ವಾಮಿ ಹಳೇ ಬಸ್ ನಿಲ್ದಾಣ, ಅರ್ಥಾತ್ ನೂತನವಾಗಿ ನಿರ್ಮಾಣ ಆಗಿರುವ ಹುಬ್ಬಳ್ಳಿ ನಗರ ಮತ್ತು ಉಪನಗರ ಬಸ್ ನಿಲ್ದಾಣ.
ಜನವರಿ 21 ರಿಂದ ಆರಂಭವಾದ ಉಪನಗರ ಸಾರಿಗೆ ಬಸ್ ನಿಲ್ದಾಣದಲ್ಲಿ ನಿತ್ಯ 354 ಟ್ರಿಪ್ ಉಪನಗರ ಸಾರಿಗೆ ಬಸ್ ಓಡಾಟ ನಡೆಸುತ್ತಲಿದ್ದರೂ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಕೂರಲು ಸಮರ್ಪಕ ಆಸನಗಳೇ ಇಲ್ಲದೆ ನೆಲವನ್ನೇ ಆಶ್ರಯಿಸಿದ್ದಾರೆ, ಇತ್ತ ಸಾರಿಗೆ ನಿಯಂತ್ರಕರ ಕರ್ತವ್ಯಕ್ಕೆ ಒಂದು ಕೊಠಡಿ ಇಲ್ಲಾ, ಇನ್ನೂ ಎಲ್ಲಿ ? ಯಾವ ಬಸ್ ತಂಗುತ್ತವೆ ? ಎನ್ನುವ ನಾಮಫಲಕ ಎಲ್ಲಿದೆ ಅಂತಾ ಹುಡುಕುವವರೆಗೂ ಸಿಗೋದೆ ಇಲ್ಲಾ.
ಇನ್ನೂ ನಮ್ಮ ನಗರ ಸಾರಿಗೆ ಬಸ್ ನಿಲ್ದಾಣ ನಿತ್ಯ 1200 ಟ್ರಿಪ್ 126 ಶೆಡ್ಯೂಲ್ ಸೇವೆ ನೀಡುತ್ತಿದ್ದರೂ, ಈ ನಿಲ್ದಾಣಕ್ಕೆ ಬಂದರೇ ಹಗಲಲ್ಲೇ ಕತ್ತಲು, ಕತ್ತಲಾಗಿ ಅಕ್ಷರಶಃ ಈ ನಿಲ್ದಾಣ ಫುಲ್ ಕನ್ಫ್ಯೂಸ್ ಆಗಿ ಬಸ್ ನಿಲ್ದಾಣ ಒಳಗೆ ಟ್ರಾಫಿಕ್ ಜಾಮ್ ಆಗ್ತಾ ಇದೆ. ಅತ್ತ ಪ್ರಯಾಣಿಕರು ಕೂರಲು ಜಾಗವಿಲ್ಲದೆ ನಿಂತಿದ್ರೇ, ಕೆಲವರು ಬಸ್ ನಿಲ್ದಾಣದಲ್ಲಿ ಎದ್ದು ಬಿದ್ದು ಯಾವ ಬಸ್ ಎಲ್ಲಿದೆ ಎಂದು ಸಾರಿಗೆ ನಿಯಂತ್ರಕರ ಬೆನ್ನು ಬಿದ್ದಿದ್ದಾರೆ.
ಇನ್ನೂ ಅದೆಷ್ಟೋ ಜನ ವೃದ್ಧರು, ಮಹಿಳೆಯರು, ಅಂಗವಿಕಲರು ಈ ನಗರ ಉಪನಗರ ಬಸ್ ನಿಲ್ದಾಣಕ್ಕೆ ಬಂದು ಈ ಕೋಟಿ ಕೋಟಿ ಖರ್ಚು ಮಾಡಿ ಕಟ್ಟಿದ ಕಾಂಕ್ರೀಟ್ ಬೆಟ್ಟ ಹತ್ತಲಾರದೆ ಇಳಿಯಲಾರದೆ ಏನಂದ್ರು ಕೇಳಿ.
ಸ್ಮಾರ್ಟ್ ಸಿಟಿ ಯೋಜನೆಯಡಿ ಹೊರಗೆ ಮಾತ್ರ ಸ್ಮಾರ್ಟ್ ಆಗಿ ಕಾಣುವ ಬಸ್ ನಿಲ್ದಾಣದ ಒಳಗೆ ಸಮರ್ಪಕ ಸೌಕರ್ಯಗಳು ಜನರಿಗೆ ಸಿಗುತ್ತಿಲ್ಲಾ, ಈ ಬಗ್ಗೆ ಸಾರಿಗೆ ಅಧಿಕಾರಿಗಳೇ ಗಮನಿಸಿ...
-ಶ್ರೀಧರ ಪೂಜಾರ, ಪಬ್ಲಿಕ್ ನೆಕ್ಸ್ಟ್
Kshetra Samachara
23/01/2025 09:13 pm