", "articleSection": "Infrastructure,Government", "image": { "@type": "ImageObject", "url": "https://prod.cdn.publicnext.com/s3fs-public/418299-1737454075-SAMASYE.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Praveen Onkari" }, "editor": { "@type": "Person", "name": "Ashok.Mullalli" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಧಾರವಾಡ: ಬೆಳಗಾವಿಯಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಅಧಿವೇಶನಕ್ಕೆ ಧಾರವಾಡದಿಂದಲೂ ಅನೇಕ ಬಸ್‌ಗಳನ್ನು ಬಿಡಲಾಗಿದೆ. ಧಾರವಾಡ ಜಿಲ್ಲೆಯ ಐದೂ ತಾಲೂಕ...Read more" } ", "keywords": "Dharwad News, Congress Convention, Transportation Issues, Bus Services, Karnataka Politics, Dharwad City, Public Inconvenience, Congress Event, Karnataka News ¹.,Hubballi-Dharwad,Infrastructure,Government", "url": "https://publicnext.com/node" }
ಧಾರವಾಡ: ಬೆಳಗಾವಿಯಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಅಧಿವೇಶನಕ್ಕೆ ಧಾರವಾಡದಿಂದಲೂ ಅನೇಕ ಬಸ್‌ಗಳನ್ನು ಬಿಡಲಾಗಿದೆ. ಧಾರವಾಡ ಜಿಲ್ಲೆಯ ಐದೂ ತಾಲೂಕಿನ ಬೇರೆ ಬೇರೆ ಗ್ರಾಮಗಳಿಗೂ ಬಸ್‌ಗಳನ್ನು ಬಿಟ್ಟು ಅವುಗಳ ಮೂಲಕ ಜನರನ್ನು ಕಾಂಗ್ರೆಸ್ ಅಧಿವೇಶನಕ್ಕೆ ಕರೆದೊಯ್ಯಲಾಗಿದೆ.
ಬಸ್‌ಗಳ ಕೊರತೆಯಿಂದ ಧಾರವಾಡದ ಹೊಸ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಸುಸ್ತಾಗುವಂತಾಯಿತು. ಹೊಸ ಬಸ್ ನಿಲ್ದಾಣದಿಂದ ಸವದತ್ತಿ, ಯಲ್ಲಮ್ಮನ ಗುಡ್ಡಕ್ಕೆ ಬಸ್‌ಗಳು ಹೋಗುತ್ತವೆ. ಆದರೆ, ಬಸ್‌ಗಳ ಕೊರತೆಯಿಂದಾಗಿ ಪ್ರಯಾಣಿಕರು ಹೈರಾಣಾಗುವಂತಾಯಿತು.
ಧಾರವಾಡದ ಹೊಸ ಬಸ್ ನಿಲ್ದಾಣದಲ್ಲಿ ಸಾವಿರಾರು ಪ್ರಯಾಣಿಕರು ಬಸ್‌ಗಾಗಿ ಕಾಯುತ್ತ ನಿಂತ ಪ್ರಸಂಗ ನಡೆಯಿತು. ಈ ನಿಲ್ದಾಣದಿಂದ ಹಳಿಯಾಳ, ದಾಂಡೇಲಿ, ಸವದತ್ತಿ ಕಡೆಗೆ ಪ್ರತಿನಿತ್ಯ ಅನೇಕ ಬಸ್‌ಗಳು ಸಂಚಾರ ಮಾಡುತ್ತಿದ್ದವು ಆದರೆ, ಮಂಗಳವಾರ ಮಾತ್ರ ಬಸ್‌ಗಳು ಇಲ್ಲದೇ ಇದ್ದಿದ್ದರಿಂದ ಪ್ರಯಾಣಿಕರು ಅಕ್ಷರಶಃ ಪರದಾಡುವಂತಾಯಿತು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
21/01/2025 03:38 pm