ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ರೈತರ ಗೋಳನ್ನು ಕೇಳೋರಿಲ್ಲದಂತಾಗಿದೆ. ದೇವರು ವರ ಕೊಟ್ಟರು ಪೂಜಾರಿ ಕೊಡುತ್ತಿಲ್ಲ ಎಂಬ ಗಾದೆ ಮಾತಿನಂತಾಗಿದೆ ರೈತರ ಬದುಕು ಕೂಡ, ಬೀದಿಗೆ ಬಿದ್ದಿದೆ. ಧಾರವಾಡ ಜಿಲ್ಲೆಯಲ್ಲಿ ಮಾವು ಬೆಳೆದ ರೈತರ ಸ್ಥಿತಿ ಅಯೋಮಯವಾಗಿದೆ. ಆಪಾತ್ಕಾಕಾಲಕ್ಕೆ ಅಂತ ವಿಮೆ ಮಾಡಿಸಿದ್ದ ರೈತರಿಗೆ ಸರ್ಕಾರದಿಂದಲೇ ಮೊಸವಾಗಿದ್ದು, ನ್ಯಾಯಕ್ಕಾಗಿ ಮಾವು ಬೆಳೆದ ರೈತರು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಮೊರೆ ಬಂದಿದ್ದಾರೆ.
ಧಾರವಾಡ ಜಿಲ್ಲೆಯಲ್ಲಿ ಮಾವು ಬೆಳೆದ ರೈತರು, ಸರಿಯಾಗಿ ವೀಮೆ ಬಾರದೆ ಗೋಳಾಡುತ್ತಿದ್ದಾರೆ. ವಿಮೆ ಪರಿಹಾರ ವಿತರಣೆಯಲ್ಲಿ ಸರ್ಕಾರದಿಂದಲೇ ತಾರತಮ್ಯ ಮಾಡುತ್ತಿದ್ದಾರಂತೆ. ಇನ್ನು ದುರ್ವಿದಿ ಅಂದ್ರೆ, ಕಾಂಗ್ರೆಸ್ ಪ್ರಾಭಲ್ಯದ ಕ್ಷೇತ್ರದ ರೈತರಿಗೆ ಹೆಚ್ಚಿನ ಪರಿಹಾರ ಸಿಕ್ಕಿದೆ. ಆದ್ರೆ ಬಿಜೆಪಿ ಬೆಂಬಲಿಸುವ ರೈತರ ಖಾತೆಗೆ ಬಿಡಿಗಾಸಿನ ಪರಿಹಾರ ಬಂದಿದೆ. ಇದು ಎಂತಹ ಅನ್ಯಾಯ..? ಧಾರವಾಡ ಗ್ರಾಮಾಂತರ ಗರಗ ಗ್ರಾಮದ ರೈತರು ಜಿಲ್ಲಾಡಳಿತ ನಮಗೆ ಅನ್ಯಾಯ ಮಾಡ್ತಿದೆಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮೊರೆ ಬಂದಿದ್ದಾರೆ. ಪಕ್ಕದ ಊರಿನ ರೈತರಿಗೊಂದು ನ್ಯಾಯ ನಮಗೊಂದು ಯಾಕೆ..? ಎಂದು ಗೋಳಾಡುತ್ತಿದ್ದಾರೆ.
ಕಲಘಟಗಿ ಭಾಗದ ರೈತರ ಮಾವು ಬೆಳಹಾನಿಗೆ ಶೇಕಡ 44% ನಿಂದ 65% ರಷ್ಟು ಪರಿಹಾರ ಬಂದಿದೆ. ಆದ್ರೆ ಧಾರವಾಡ ಗ್ರಾಮಾಂತರ ಸೇರಿದಂತೆ ಹಲವು ತಾಲೂಕು ಭಾಗದ ರೈತರಿಗೆ ಶೇಕಡಾ7% ರಷ್ಟು ಮಾತ್ರ ಹಾನಿ ಪರಿಹಾರ ನೀಡುತ್ತಿದ್ದಾರೆ. ಕಲಘಟಗಿ ಕ್ಷೇತ್ರದ ರೈತರಿಗೆ ಹೆಕ್ಟೇರ್ ಗೆ 55 ಸಾವಿರದಿಂದ 60 ಸಾವಿರ ವಿಮೆ ಪರಿಹಾರ ನೀಡುತ್ತಿದ್ದಾರೆ.
ಬಿಜೆಪಿ ಬೆಂಬಲಿಸಿದ ರೈತರ ಖಾತೆಗೆ ಕೇವಲ 5 ರಿಂದ 7 ಸಾವಿರ ಪರಿಹಾರ ಹಾಕುತ್ತಿದ್ದಾರಂತೆ. ಇದನ್ನೆಲ್ಲ ನೋಡಿದ್ರೆ ತೋಟಗಾರಿಕೆ ಇಲಾಖೆ ಅಧಿಕಾರಿಗಳಿಂದಲೇ ಪ್ರಮಾದ ನಡೆಯುತ್ತಿದೆಯಾ ಎಂಬ ಅನುಮಾನ ಮೂಡುತ್ತಿದೆ. ಅನ್ಯಾಯಕ್ಕೆ ಒಳಗಾದ ರೈತರು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರನ್ನು ಭೇಟಿ ನೀಡಿ ಸಮಸ್ಯೆಗಳನ್ನು ತೋಡಿಕೊಂಡಿದ್ದಾರೆ.
ಇದು ಧಾರವಾಡ ಜಿಲ್ಲೆಯ ಅನ್ನದಾತನ ಅಳಲು, ಬೆಳೆ ವಿಮೆ ಪರಿಹಾರದ ವಿಚಾರದಲ್ಲೂ ರಾಜಕೀಯ ಮಾಡುತ್ತಿದೆಯಾ ರಾಜ್ಯ ಸರ್ಕಾರ...? ಕಾಂಗ್ರೆಸ್ ಸರ್ಕಾರ ಬಂದ ಮೇಲೆ ರೈತರಿಗೆ ಅನ್ಯಾಯದ ಆರೋಪ ಕೇಳಿ ಬಂದಿದೆ. ಕಾರ್ಮಿಕ ಸಚಿವ ಸಚಿವ ಸಂತೋಷ ಲಾಡ್ ಕ್ಷೇತ್ರದ ರೈತರಿಗೆ ಸೂಕ್ತ ಪರಿಹಾರ ನೀಡಿದ್ದಾರೆ.
ಆದ್ರೆ ಧಾರವಾಡ ಗ್ರಾಮಾಂತರ ಭಾಗದ ರೈತರಿಗೆ ಸರ್ಕಾರ ನೀಡಿದೆ ಬಿಡಿಗಾಸಿನ ಪರಿಹಾರ ಬರುತ್ತಿರುವುದನ್ನು ನೋಡಿದ್ರೆ ರೈತರ ಜೊತೆ ರಾಜಕೀಯ ನಾಯಕರು ಆಟ ಆಡುತ್ತಿದ್ದಾರಾ. ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರೇ ಸೂಕ್ತ ತನಿಖೆ ಮಾಡಿಸಿ ರೈತರಿಗೆ ನ್ಯಾಯ ಕೊಡಿಸಬೇಕಿದೆ.
-ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
21/01/2025 10:26 pm