", "articleSection": "Politics,Law and Order,Government", "image": { "@type": "ImageObject", "url": "https://prod.cdn.publicnext.com/s3fs-public/418299-1737361788-hindu.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Iranna Y Walikar" }, "editor": { "@type": "Person", "name": "Ashok.Mullalli" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹುಬ್ಬಳ್ಳಿ: ರಾಜ್ಯದಲ್ಲಿ ಹಿಂದೂಗಳನ್ನು ಸಿಎಂ ಆದಿಯಾಗಿ ಸರ್ಕಾರ ಅಪಮಾನ ಮಾಡುತ್ತಿದೆ. ಹಿಂದೂ ಹೋರಾಟಗಾರರನ್ನು ಜೈಲಿಗೆ ಕಳಿಸುತ್ತಿದ್ದಾರೆ. ಅದೇ ...Read more" } ", "keywords": "Hubballi, Cruelty to Cows, Muslim Community, Karnataka News, CM and DCM Responsible, MLA Yatnal Statement, Cow Protection, Hindu-Muslim Tension, Indian Politics, Karnataka Government.,Hubballi-Dharwad,Politics,Law-and-Order,Government", "url": "https://publicnext.com/node" } ಹುಬ್ಬಳ್ಳಿ: ಹಸುಗಳ ಮೇಲಿನ ಹೀನ ಕೃತ್ಯ, ಮುಸ್ಲಿಮರಿಗೆ ಧೈರ್ಯ ಬರೋದಕ್ಕೆ ಸಿಎಂ, ಡಿಸಿಎಂ ಕಾರಣ - ಶಾಸಕ ಯತ್ನಾಳ್
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಹಸುಗಳ ಮೇಲಿನ ಹೀನ ಕೃತ್ಯ, ಮುಸ್ಲಿಮರಿಗೆ ಧೈರ್ಯ ಬರೋದಕ್ಕೆ ಸಿಎಂ, ಡಿಸಿಎಂ ಕಾರಣ - ಶಾಸಕ ಯತ್ನಾಳ್

ಹುಬ್ಬಳ್ಳಿ: ರಾಜ್ಯದಲ್ಲಿ ಹಿಂದೂಗಳನ್ನು ಸಿಎಂ ಆದಿಯಾಗಿ ಸರ್ಕಾರ ಅಪಮಾನ ಮಾಡುತ್ತಿದೆ. ಹಿಂದೂ ಹೋರಾಟಗಾರರನ್ನು ಜೈಲಿಗೆ ಕಳಿಸುತ್ತಿದ್ದಾರೆ. ಅದೇ ಬೆಂಗಳೂರಿನಲ್ಲಿ ಹಸುವಿನ ಕೆಚ್ಚಲು ಕೊಯ್ಯುವ ಕೆಲಸ ಮಾಡಿದ್ದಾರೆ. ಅಂತಹವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಹಿಂದೂಗಳ ಭಾವನೆಗೆ ಧಕ್ಕೆ ತಂದು, ಹಿಂದೂಗಳ ಸ್ವಾಭಿಮಾನವನ್ನು ಕೆದಕಿ ರಾಜ್ಯದಲ್ಲಿ ಮತ್ತೊಮ್ಮೆ ಗಲಭೆ ಎಬ್ಬಿಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು‌.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಸ್ಲಿಂರಿಗೆ ಇಷ್ಟು ಧೈರ್ಯ ಬರಲು ಸಿಎಂ ಸಿದ್ದರಾಮಯ್ಯ, ಡಿಕೆಶಿ ಕಾರಣವಾಗಿದ್ದಾರೆ.‌ ಅವರು ಮುಸ್ಲಿಂರನ್ನು ನಮ್ಮ ಸಹೋದರರು ಎಂದು ಹೇಳುತ್ತಿರುವ ಕಾರಣ ಇಷ್ಟೆಲ್ಲಾ ನಡೆಯುತ್ತಿದೆ ಎಂದು ಆರೋಪಿಸಿದರು.

ಬಿಜೆಪಿಗೆ ಕರ್ನಾಟಕದಲ್ಲಿ ಸೋಲಾಗಲು ಕಾರಣ ಹಿಂದೂಗಳ ರಕ್ಷಣೆ ಮಾಡದೇ ಇರುವುದು. ಬಿಜೆಪಿ ಹಿಂದೂ ಕಾರ್ಯಕರ್ತರ ರಕ್ಷಣೆ ಮಾಡಲಿಲ್ಲ. ಈ ಹಿನ್ನೆಲೆಯಲ್ಲಿ ಹಿಂದೂಗಳು ವಿಧಾನಸಭಾ ಚುನಾವಣೆಯಲ್ಲಿ ಸರಿಯಾದ ಕೆಲಸ ಮಾಡಲಿಲ್ಲ. ಒಂದು ವೇಳೆ ಹಿಂದೂಗಳ ರಕ್ಷಣೆ ಮಾಡಿ, ಕಾನೂನು ಸುವ್ಯವಸ್ಥೆ ಮಾಡಿದಲ್ಲಿ ಉತ್ತರ ಪ್ರದೇಶದ ವಾತಾವರಣ ರಾಜ್ಯದಲ್ಲಿ ಇರುತಿತ್ತು ಎಂದರು. ಬಿಜೆಪಿಯಲ್ಲಿ ನಮ್ಮ ತಪ್ಪುಗಳು ಬಹಳಷ್ಟಿವೆ. ಯಡಿಯೂರಪ್ಪ ಏನೂ ಮಾಡಲಿಲ್ಲ, ಶಿವಮೊಗ್ಗದಲ್ಲಿ ನಿಯಂತ್ರಣ ಮಾಡದೇ ಅವರು ರಾಜ್ಯದಲ್ಲಿ ಏನ್ ಮಾಡುತ್ತಾರೆ ಎಂದರು.

Edited By : Ashok M
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

20/01/2025 02:00 pm

Cinque Terre

53.16 K

Cinque Terre

14

ಸಂಬಂಧಿತ ಸುದ್ದಿ