", "articleSection": "Politics,Cultural Activity,Religion", "image": { "@type": "ImageObject", "url": "https://prod.cdn.publicnext.com/s3fs-public/229640-1737542092-hblhkpatil.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Mallesh Suranagi" }, "editor": { "@type": "Person", "name": "hdmanju" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹುಬ್ಬಳ್ಳಿ: ನವಗ್ರಹ ಕ್ಷೇತ್ರಕ್ಕೆ ಪ್ರವಾಸೋದ್ಯಮ ಇಲಾಖೆಯಿಂದ 2 ಕೋಟಿ ರೂಪಾಯಿ ಅನುದಾನವನ್ನು ಅಭಿವೃದ್ಧಿಗಾಗಿ ನೀಡುತ್ತೇವೆ ಎಂದು ಸಚಿವ ಎಚ್.ಕೆ....Read more" } ", "keywords": "Hubballi, Navagraha Teertha Kshetra, development, grant, H.K. Patil, Karnataka, temple development, Indian culture, Hindu temples, tourism, infrastructure development, government funding,Hubballi-Dharwad,Politics,Cultural-Activity,Religion", "url": "https://publicnext.com/node" }
ಹುಬ್ಬಳ್ಳಿ: ನವಗ್ರಹ ಕ್ಷೇತ್ರಕ್ಕೆ ಪ್ರವಾಸೋದ್ಯಮ ಇಲಾಖೆಯಿಂದ 2 ಕೋಟಿ ರೂಪಾಯಿ ಅನುದಾನವನ್ನು ಅಭಿವೃದ್ಧಿಗಾಗಿ ನೀಡುತ್ತೇವೆ ಎಂದು ಸಚಿವ ಎಚ್.ಕೆ.ಪಾಟೀಲ ಹೇಳಿದರು.
ವರೂರಿನಲ್ಲಿಂದು ನಡೆದ ಸಭೆಯಲ್ಲಿ ಮಾತನಾಡಿದ ಅವರು, ಜೈನರು ಆಡಳಿತ ಮಂಡಳಿಯಲ್ಲಿರಬಹುದು ಆದರೆ ಗ್ರಾಮೀಣ ಭಾಗದ ಮಕ್ಕಳನ್ನ ಆರಿಸಿ ತಂದು ಶಿಕ್ಷಣ ನೀಡ್ತಾ ಇದ್ದಾರೆ.
ಇಲ್ಲಿಂದ ಅವರ ಎಷ್ಟು ಜನ ಭೋದನೆ ತೆಗೆದುಕೊಂಡು ಹೋಗ್ತಾರೋ ಗೊತ್ತಿಲ್ಲ. ಆದ್ರೆ ಅವರಿಗೆ ಬಲ ಕೊಡುವ ಕೆಲಸ ಮಾಡ್ಬೇಕು, ಜೈನ ಬಸ್ತಿ, ದೇವಸ್ಥಾನಗಳು ನಮ್ಮ ರಾಜ್ಯದಲ್ಲಿ ಬಹಳಷ್ಟಿವೆ. ಆದ್ರೆ ಅವುಗಳ ಪರಿಸ್ಥಿತಿ ಹೇಗಿದೆ ಅಂತ ಯಾರು ನೋಡಲ್ಲ ಎಂದರು.
ಹಳ್ಳಿಗಳಲ್ಲಿ ಬಸ್ತಿ, ಗುಡಿ ಎಲ್ಲದಕ್ಕೂ ದೇವಸ್ಥಾನ ಅಂತೀವಿ ಹೊಯ್ಸಳ, ಚಾಲುಕ್ಯರ ಕಾಲದಲ್ಲಿ ಕಟ್ಟಿದ್ದು, ಅವುಗಳು ಹಾಳಾಗುತ್ತಿವೆ. ಇದು ಕೇವಲ ಸರ್ಕಾರದಿಂದ ಅಷ್ಟೇ ಆಗುವ ಕೆಲಸ ಅಲ್ಲ. ರಾಜ್ಯದಲ್ಲಿ 25 ಸಾವಿರ ಸ್ಮಾರಕಗಳಿವೆ. ಅದರಲ್ಲಿ 3-4 ಸಾವಿರ ಜೈನ ಬಸ್ತಿಗಳೇ ಇವೆ ಎಂದು ಅವರು ಮಾಹಿತಿ ನೀಡಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
22/01/2025 04:05 pm