ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಪಾರ್ಶ್ವನಾಥರಿಗೆ 1008 ಕಳಸದಿಂದ ಅಭಿಷೇಕ - ಕಣ್ಣನ ಸೆಳೆದ ಜಲ, ಕ್ಷೀರಾಭಿಷೇಕ..!

ಹುಬ್ಬಳ್ಳಿ: ನವಗ್ರಹ ತೀರ್ಥ ಕ್ಷೇತ್ರದಲ್ಲಿ ಭಗವಾನ್ ಪಾರ್ಶ್ವನಾಥ ತೀರ್ಥಂಕರರಿಗೆ 1008 ಕಳಸದ ಮೂಲಕ ಜಲಾಭಿಷೇಕ ಕ್ಷೀರಾಭಿಷೇಕ ನೆರವೇರಿಸುವ ಮೂಲಕ ಮಹಾಮಸ್ತಕಾಭಿಷೇಕ ಕಾರ್ಯಕ್ರಮಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು. ಜೈನಧರ್ಮದ ಸಂಪ್ರದಾಯದ ಮೂಲಕ ಅರ್ಘ್ಯ ನೀಡುವ ಮೂಲಕ ಪಾರ್ಶ್ವನಾಥರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ಪಾರ್ಶ್ವನಾಥ ತೀರ್ಥಂಕರರಿಗೆ ಮಹಾಮಸ್ತಕಾಭಿಷೇಕ ಮಾಡುವ ಕಾರ್ಯಕ್ರಮ ಎಂಟನೇ ದಿನಕ್ಕೆ ಕಾಲಿಟ್ಟಿದ್ದು, ಎಂಟನೇ ದಿನವಾದ ಬುಧವಾರ ಆದಿನಾಥ ತೀರ್ಥಂಕರರಿಗೆ ಕ್ಷೀರಾಭಿಷೇಕ, ಜಲಾಭಿಷೇಕ ಹಾಗೂ ಮಂಗಳ ದ್ರವ್ಯದ ಮೂಲಕ ಅಭಿಷೇಕ ಮಾಡಲಾಯಿತು.

ಸುಮೇರು ಪರ್ವತದಲ್ಲಿ ಕಳಸ ಪೂಜೆಯ ಬಳಿಕ ಪಾರ್ಶ್ವನಾಥರಿಗೆ ಅಭಿಷೇಕ ಆರಂಭಗೊಂಡಿದ್ದು, ಜಲಾಭಿಷೇಕ, ಎಳೆನೀರು ಅಭಿಷೇಕ, ಕ್ಷೀರಾಭಿಷೇಕ ಹೀಗೆ ಮಂಗಳ ದ್ರವ್ಯದ ಮೂಲಕ ಮಹಾಮಸ್ತಕಾಭಿಷೇಕದ ಮೊದಲಘಟ್ಟಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು.

ಇನ್ನೂ ಲಕ್ಷಾಂತರ ಭಕ್ತಸಾಗರದಲ್ಲಿಯೇ ಪಾರ್ಶ್ವನಾಥರಿಗೆ ಹಾಗೂ ನವಗ್ರಹದ ಒಂಬತ್ತು ಪಾರ್ಶ್ವನಾಥರ ವಿಗ್ರಹಗಳಿಗೆ ಅಭಿಷೇಕ ಮಾಡುವ ಮೂಲಕ ಪೂಜೆ ಸಲ್ಲಿಸಲಾಯಿತು. 1008 ಕಳಸಗಳನ್ನು ಪೂಜೆ ಮಾಡಿ ಅನುಷ್ಠಾನ ಮಾಡಿ ಬಳಿಕ ಭವ್ಯ ಮೆರವಣಿಗೆ ಜೊತೆಗೆ ಆಗಮಿಸಿ ಸಕಲ ವಾದ್ಯ ಹಾಗೂ ಗುರು, ಆಚಾರ್ಯರ ನೇತೃತ್ವದಲ್ಲಿ ಭವ್ಯ ಅಭಿಷೇಕ ಮಾಡುವ ಮೂಲಕ ಪಾರ್ಶ್ವನಾಥರಿಗೆ ಭಕ್ತಿ ಸಮರ್ಪಣೆ ಮಾಡಲಾಯಿತು.

ಮಹಿಳೆಯರು ಇಂತಹದೊಂದು ಅವಿಸ್ಮರಣೀಯ ಕ್ಷಣದಲ್ಲಿ ನೃತ್ಯ ಮಾಡುವ ಮೂಲಕ ವಿನೂತನ ರೀತಿಯಲ್ಲಿ ಪಾರ್ಶ್ವನಾಥರ ಅಭಿಷೇಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಮೆರಗನ್ನು ತಂದಿದ್ದು, ವಿಶೇಷವಾಗಿದೆ.

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

22/01/2025 06:36 pm

Cinque Terre

112.1 K

Cinque Terre

1

ಸಂಬಂಧಿತ ಸುದ್ದಿ