ಹುಬ್ಬಳ್ಳಿ: ದುಷ್ಟ ಚಟಗಳಿಂದ ಯುವ ಸಮುದಾಯ ಹಾಳಾಗುತ್ತಿದೆ. ಅಲ್ಲದೇ ತಮ್ಮ ಜೀವನದ ಮೌಲ್ಯವನ್ನು ಅರಿಯದೇ ಅಮೂಲ್ಯ ಜೀವನವನ್ನು ದುಷ್ಟ ಚಟ, ದುಷ್ಟ ಕೃತ್ಯದಿಂದ ಹಾಳು ಮಾಡಿಕೊಳ್ಳದಂತೆ ದುಶ್ಚಟ ಮುಕ್ತ ಜೀವನದಿಂದ ಮೋಕ್ಷ ಸಾಧ್ಯ ಎಂಬುವಂತ ವಿನೂತನ ಕಾರ್ಯಕ್ಕೆ ಮುನ್ನುಡಿ ಬರೆದಿದ್ದಾರೆ.
ವರೂರಿನ ನವಗ್ರಹ ತೀರ್ಥ ಕ್ಷೇತ್ರದಲ್ಲಿ ನಡೆಯುತ್ತಿರುವ ಮಹಾಮಸ್ತಕಾಭಿಷೇಕ ಕಾರ್ಯಕ್ರಮ ಒಂಬತ್ತನೇ ದಿನಕ್ಕೆ ಕಾಲಿಟ್ಟಿದ್ದು, ಈ ನಿಟ್ಟಿನಲ್ಲಿ ಸಮಾಜಕ್ಕೆ ಒಂದು ಮಹತ್ವದ ಕೊಡುಗೆ ನೀಡಲು ಜೈನ ಆಚಾರ್ಯ ಗುಣಧರನಂದಿ ಮಹಾರಾಜರು ನಿರ್ಧಾರ ಮಾಡಿದ್ದು, ದುಷ್ಟ ಚಟಗಳಿಂದ ಯುವ ಸಮುದಾಯ ದೂರ ಮಾಡುವಂತೆ ಪ್ರತಿಜ್ಞೆ ಮಾಡಿಸುವ ಮೂಲಕ ಸಮಾಜಮುಖಿ ಕಾರ್ಯಕ್ಕೆ ಮುಂದಾಗಿದ್ದಾರೆ.
ಇನ್ನೂ ನೂರಾರು ಯುವಕರಿಗೆ ಸಮಾಜದ ಬಗ್ಗೆ ಮಾನವೀಯ ಮೌಲ್ಯಗಳ ಬಗ್ಗೆ ರಾಷ್ಟ್ರಸಂತ ಗುಣಧರನಂದಿ ಮಹಾರಾಜರು ತಿಳಿಸಿದ್ದಾರೆ. ಯುವ ಸಮುದಾಯ ದುಷ್ಟ ಚಟುವಟಿಕೆಗಳಿಂದ ದೂರ ಇರುವಂತೆ ಸೂಕ್ತ ಸಲಹೆ ನೀಡಿದ್ದು, ಮಾನವ ಜನ್ಮ ದೊಡ್ಡದು ಹಾಳು ಮಾಡಿಕೊಳ್ಳಬೇಡಿ ಹುಚ್ಚಪ್ಪಗಳಿರಾ ಎಂದು ತಿಳಿ ಹೇಳಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
23/01/2025 05:15 pm