ಹುಬ್ಬಳ್ಳಿ: ಪಾರ್ಶ್ವನಾಥರಿಗೆ ಸಾರ್ವಜನಿಕರಿಂದ 1008 ಕಳಸದಿಂದ ಜಲಾಭಿಷೇಕ ಕಾರ್ಯಕ್ರಮ ಅದ್ದೂರಿಯಾಗಿ ನಡೆಯತ್ತಿದೆ. ನಿನ್ನೆಯಷ್ಟೇ ಮಹಾಮಸ್ತಕಾಭಿಷೇಕದ ಮೊದಲ ಘಟ್ಟದ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿತ್ತು. ಈ ನಿಟ್ಟಿನಲ್ಲಿ ಸಾರ್ವಜನಿಕ ಜಲಾಭಿಷೇಕಕ್ಕೆ ಅವಕಾಶ ಮಾಡಲಾಗಿದೆ.
ನವಗ್ರಹ ತೀರ್ಥ ಕ್ಷೇತ್ರದಲ್ಲಿ ಭಗವಾನ್ ಪಾರ್ಶ್ವನಾಥ ತೀರ್ಥಂಕರರಿಗೆ 1008 ಕಳಸದ ಮೂಲಕ ಜಲಾಭಿಷೇಕ ಕ್ಷೀರಾಭಿಷೇಕ ನೆರವೇರಿಸುವ ಮೂಲಕ ಮಹಾಮಸ್ತಕಾಭಿಷೇಕ ಕಾರ್ಯಕ್ರಮಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು. ಹೌದು..ಜೈನಧರ್ಮದ ಸಂಪ್ರದಾಯದ ಮೂಲಕ ಅರ್ಘ್ಯ ನೀಡುವ ಮೂಲಕ ಪಾರ್ಶ್ವನಾಥರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಪಾರ್ಶ್ವನಾಥ ತೀರ್ಥಂಕರರಿಗೆ ಮಹಾಮಸ್ತಕಾಭಿಷೇಕ ಮಾಡುವ ಕಾರ್ಯಕ್ರಮ ಒಂಬತ್ತನೇ ದಿನಕ್ಕೆ ಕಾಲಿಟ್ಟಿದ್ದು, ಆದಿನಾಥ ತೀರ್ಥಂಕರರಿಗೆ ಕಳಸ ಜಲಾಭಿಷೇಕ ಮಾಡಲಾಯಿತು.ಸುಮೇರು ಪರ್ವತದಲ್ಲಿ ಕಳಸ ಪೂಜೆಯ ಬಳಿಕ ಪಾರ್ಶ್ವನಾಥರಿಗೆ ಅಭಿಷೇಕ ಆರಂಭಗೊಂಡಿದ್ದು, ನವಗ್ರಹದ ಒಂಬತ್ತು ಪಾರ್ಶ್ವನಾಥರ ವಿಗ್ರಹಗಳಿಗೆ ಅಭಿಷೇಕ ಮಾಡುವ ಮೂಲಕ ಪೂಜೆ ಸಲ್ಲಿಸಲಾಯಿತು.
ಒಟ್ಟಿನಲ್ಲಿ ಭಕ್ತರು ಕುಟುಂಬ ಸಮೇತವಾಗಿ ಪಾರ್ಶ್ವನಾಥರಿಗೆ ಜಲಾಭಿಷೇಕ ಮಾಡುವ ಮೂಲಕ ಭಕ್ತಿ ಸಮರ್ಪಣೆ ಮಾಡಿರುವುದು ವಿಶೇಷವಾಗಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
23/01/2025 05:42 pm