ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಹೆಲಿಕಾಪ್ಟರ್ ಮೂಲಕ ಪುಷ್ಪ ವೃಷ್ಟಿ- ವರೂರಿನಲ್ಲಿ ಮಹಾಮಸ್ತಕಾಭಿಷೇಕ ಮೆರುಗು

ಹುಬ್ಬಳ್ಳಿ: ನವಗ್ರಹ ತೀರ್ಥ ಕ್ಷೇತ್ರದಲ್ಲಿ ತೀರ್ಥಂಕರ ಮಹಾಮಸ್ತಕಾಭಿಷೇಕದ ಸಂಭ್ರಮ ಜೋರಾಗಿದೆ. ಪಾರ್ಶ್ವನಾಥರಿಗೆ ಹಾಗೂ ಸುಮೇರು ಪರ್ವತದ ಪವಿತ್ರ ಕ್ಷೇತ್ರಕ್ಕೆ ಭಕ್ತರು ಹೆಲಿಕಾಪ್ಟರ್ ಮೂಲಕ ಪುಷ್ಪ ವೃಷ್ಟಿ ಮಾಡುತ್ತಿರುವುದು ವಿಶೇಷವಾಗಿದೆ.

ನಿನ್ನೆಯಷ್ಟೇ ಜಲಾಭಿಷೇಕದ ಮೂಲಕ ಪಾರ್ಶ್ವನಾಥ ತೀರ್ಥಂಕರರಿಗೆ ಅಭಿಷೇಕ ಮಾಡಿದ್ದು, ಇಂದು ಹೆಲಿಕಾಪ್ಟರ್ ಮೂಲಕ ಪುಷ್ಪ ವೃಷ್ಟಿ ಭಕ್ತಿ ಸಮರ್ಪಣೆ ಮಾಡುತ್ತಿದ್ದಾರೆ.

ಛಬ್ಬಿ ಬಳಿಯಲ್ಲಿ ಹೆಲಿಪ್ಯಾಡ್ ನಿರ್ಮಾಣ‌ ಮಾಡಿದ್ದು, ಭಕ್ತರು ಹೆಲಿಕಾಪ್ಟರ್ ಮೂಲಕ ಪುಷ್ಪ ವೃಷ್ಟಿ ಮಾಡುತ್ತಿದ್ದಾರೆ.

ಬೆಲ್ 407 ಹೆಲಿಕಾಪ್ಟರ್ ಮೂಲಕ ಒಂದು ಪ್ರಯಾಣದಲ್ಲಿ ಆರು ಜನ ಭಕ್ತರು ಪುಷ್ಪ ವೃಷ್ಟಿ ಮಾಡಿ ಪಾರ್ಶ್ವನಾಥರಿಗೆ ಹಾಗೂ ಪಾವನ ಕ್ಷೇತ್ರದ ಸುಮೇರು ಪರ್ವತಕ್ಕೆ ಹೆಲಿಕಾಪ್ಟರ್ ಮೂಲಕ ಪುಷ್ಪ ಸಮರ್ಪಣೆ ಮಾಡುತ್ತಿದ್ದಾರೆ.

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

23/01/2025 04:48 pm

Cinque Terre

54.44 K

Cinque Terre

1

ಸಂಬಂಧಿತ ಸುದ್ದಿ