ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಮಹಾಮಸ್ತಕಾಭಿಷೇಕ ಸಂಭ್ರಮ- ನೂರಾರು ಜನರಿಗೆ ದೀಕ್ಷೆ, ಉಪನಯನ ಸಂಸ್ಕಾರ

ಹುಬ್ಬಳ್ಳಿ: ಹುಬ್ಬಳ್ಳಿ ತಾಲೂಕಿನ ವರೂರಿನ ನವಗ್ರಹ ತೀರ್ಥ ಕ್ಷೇತ್ರದಲ್ಲಿ ನಡೆಯುತ್ತಿರುವ ತೀರ್ಥಂಕರರ ಮಹಾಮಸ್ತಕಾಭಿಷೇಕ ಒಂಬತ್ತನೇ ದಿನಕ್ಕೆ ಕಾಲಿಟ್ಟಿದ್ದು, ಈ ಹಿನ್ನಲೆಯಲ್ಲಿ ನೂರಾರು ಯುವಕರಿಗೆ ಹಾಗೂ ಬಾಲಕರಿಗೆ ದೀಕ್ಷೆ ಹಾಗೂ ಉಪನಯನ ಮಾಡುವ ಕಾರ್ಯಕ್ರಮ ನಡೆಸಲಾಯಿತು.

ರಾಷ್ಟ್ರಸಂತ ಗುಣಧರನಂದಿ ಮಹಾರಾಜರ ನೇತೃತ್ವದಲ್ಲಿ ಹುಬ್ಬಳ್ಳಿಯ ವರೂರಿನ ನವಗ್ರಹ ತೀರ್ಥಂಕರ ಮಹಾಮಸ್ತಕಾಭಿಷೇಕ ಹಿನ್ನಲೆಯಲ್ಲಿ ವಿಶೇಷ ಕಾರ್ಯಕ್ರಮ ಆಯೋಜನೆ ಮಾಡಿದ್ದು, ಒಂದೊಳ್ಳೆ ಸಮಾಜ ಕಟ್ಟಲು, ಸದೃಢ ಯುವಕರು ಬೇಕೆಂದು ವಿಶೇಷ ಕಾರ್ಯಕ್ರಮದ ಮೂಲಕ ಯುವಕರಿಗೆ ಹಾಗೂ ಬಾಲಕರಿಗೆ ದೀಕ್ಷಾ ಹಾಗೂ ಉಪನಯನ ಮಾಡಲಾಯಿತು.

ಇನ್ನೂ ಇಂತಹದೊಂದು ಕಾರ್ಯಕ್ರಮದಲ್ಲಿ ಜೈನ ಧರ್ಮದ ಸಂಪ್ರದಾಯದ ಮೂಲಕ ನೂರಾರು ಬಾಲಕರಿಗೆ ಸಂಸ್ಕಾರ ಮಂತ್ರ ಪಠಿಸಿ ದೀಕ್ಷಾ ಹಾಗೂ ಉಪನಯನ ಕಾರ್ಯಕ್ರಮ ಮಾಡಲಾಯಿತು. ತಂದೆ-ತಾಯಿ ಮೊದಲು ಗುರು, ಅವರಿಗೆ ಗೌರವ ಕೊಡುವುದರ ಜೊತೆಗೆ ಮುಪ್ಪಿನ ಕಾಲದಲ್ಲಿ ಚೆನ್ನಾಗಿ ನೋಡಿಕೊಳ್ಳಿ ಎಂದು ಆಶೀರ್ವಚನ ಮಾಡಿದ ಆಚಾರ್ಯರು, ಇದೇ ಸಮಯದಲ್ಲಿ ನೂರಾರು ಬಾಲಕರಿಗೆ ಉಪನಯನ ಸಂಸ್ಕಾರ ನೀಡಿದರು.

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

23/01/2025 04:21 pm

Cinque Terre

27.47 K

Cinque Terre

0

ಸಂಬಂಧಿತ ಸುದ್ದಿ