", "articleSection": "Politics,Cultural Activity,Religion", "image": { "@type": "ImageObject", "url": "https://prod.cdn.publicnext.com/s3fs-public/229640-1737543013-hbl0.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Mallesh Suranagi" }, "editor": { "@type": "Person", "name": "hdmanju" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹುಬ್ಬಳ್ಳಿ: ಆಚಾರ್ಯ ಕುಂತುಸಾಗರ ಮಹಾರಾಜರ ಆಶೀರ್ವಾದದಿಂದ ಗುಣಧರನಂದಿ ಮಹಾರಾಜರು ವರೂರಿನ ಬಹುದೊಡ್ಡ ಕ್ರಾಂತಿ ಮಾಡಿದ್ದಾರೆ. ಶ್ರವಣಬೆಳಗೊಳದ ಮಾದ...Read more" } ", "keywords": "Hubballi, Varur, Bhagawan Parshwanath, Governor Thawar Chand Gehlot, Karnataka, Jain Temple, Indian Culture, Spiritual Tourism, Pilgrimage Sites, Religion News, Karnataka Governor.,Hubballi-Dharwad,Politics,Cultural-Activity,Religion", "url": "https://publicnext.com/node" }
ಹುಬ್ಬಳ್ಳಿ: ಆಚಾರ್ಯ ಕುಂತುಸಾಗರ ಮಹಾರಾಜರ ಆಶೀರ್ವಾದದಿಂದ ಗುಣಧರನಂದಿ ಮಹಾರಾಜರು ವರೂರಿನ ಬಹುದೊಡ್ಡ ಕ್ರಾಂತಿ ಮಾಡಿದ್ದಾರೆ. ಶ್ರವಣಬೆಳಗೊಳದ ಮಾದರಿಯಲ್ಲಿಯೇ ಭಗವಾನ್ ಪಾರ್ಶ್ವನಾಥರ ಮೂರ್ತಿಯನ್ನು ಪ್ರತಿಷ್ಠಾಪಿಸಿರುವುದು ವಿಶೇಷವಾಗಿದೆ ಎಂದು ಪಂಜಾಬ್ ರಾಜ್ಯಪಾಲರಾದ ಗುಲಾಬಚಂದ್ ಕಟಾರಿಯಾ ಅಭಿನಂದನೆ ಸಲ್ಲಿಸಿದರು.
ಮಹಾಮಸ್ತಕಾಭಿಷೇಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶ್ರವಣಬೆಳಗೊಳಕ್ಕೇ ನಾನು ಹೋಗಿದ್ದೇ ಅದೇ ಮಾದರಿಯಲ್ಲಿಯೇ ವರೂರಿನಲ್ಲಿ ಭಗವಾನ್ ಪಾರ್ಶ್ವನಾಥರು ವಿರಾಜಮಾನರಾಗಿದ್ದಾರೆ. ಗುಣಧರನಂದಿ ಮಹಾರಾಜರು ವರೂರಿನಲ್ಲಿ ವಿಶೇಷ ಪ್ರಯೋಗ ಮಾಡಿದ್ದಾರೆ ಎಂದರು.
ನಾನು ಕೂಡ ಕುಂತುಸಾಗರ ಮಹಾರಾಜರ ಶ್ರಾವಕ. ಜೀವನದಲ್ಲಿ ಶಾಂತಿ ಎಂಬುವುದು ಇಲ್ಲ ಎಂದರೇ ಅದೊಂದು ಜೀವನವೇ ವ್ಯರ್ಥ ಎಂಬುವಂತ ಸಂದೇಶವನ್ನು ಇಂತಹದೊಂದು ಕಾರ್ಯಕ್ರಮ ಸಂದೇಶ ನೀಡಿದೆ. ಅಲ್ಲದೆ ವರೂರಿನಲ್ಲಿ ಇತಿಹಾಸ ಸೃಷ್ಟಿಸುವ ಕಾರ್ಯ ಮಾಡಿದ್ದಾರೆ ಎಂದು ಅವರು ಹೇಳಿದರು.
ಗುರುವಿನ ಆಶೀರ್ವಾದದಿಂದ ಗುಣಧರನಂದಿ ಮಹಾರಾಜರು ಬಹುದೊಡ್ಡ ಕಮಾಲ್ ಮಾಡಿದ್ದಾರೆ. ಗುರುವಿನ ದರ್ಶನದಿಂದ ನನ್ನ ಜೀವನ ಭಾಗ್ಯಶಾಲಿಯಾಗಿದೆ. ನಿಮ್ಮ ಶಿಷ್ಯರಾದವರಿಗೆ ರಾಜನೀತಿಯಲ್ಲಿ ಬಹುದೊಡ್ಡ ಸ್ಥಾನ ದೊರೆತಿದೆ ಅದಕ್ಕೆ ನಾನೇ ಸಾಕ್ಷಿ. ನಾನು ಆಚಾರ್ಯರ ಶ್ರಾವಕ ಎಂಬುವಂತ ಗರ್ವ ನನಗಿದೆ ಎಂದು ಹೆಮ್ಮೆಯಿಂದ ಹೇಳಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
22/01/2025 04:20 pm