", "articleSection": "Politics,Cultural Activity,Religion", "image": { "@type": "ImageObject", "url": "https://prod.cdn.publicnext.com/s3fs-public/229640-1737558612-hbl2.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Mallesh Suranagi" }, "editor": { "@type": "Person", "name": "hdmanju" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹುಬ್ಬಳ್ಳಿ: ಅದು ಭಗವಾನ್ ಪಾರ್ಶ್ವನಾಥ ತೀರ್ಥಂಕರರ ಸಲ್ಲಿಸುವ ವಿಶೇಷ ಮಹಾಮಸ್ತಕಾಭಿಷೇಕ. ಹನ್ನೆರಡು ವರ್ಷಗಳಿಗೊಮ್ಮೆ ನಡೆಯುವ ಸಂಭ್ರಮ ಎಲ್ಲೆಡೆಯ...Read more" } ", "keywords": "Hubballi, Parshwanath, Mahamastakabhisheka, Jain Festival, Indian Culture, Spiritual Celebration, Temple Event, Karnataka Tourism, Hubli Temple, Jain Heritage, Religious Ceremony.,Hubballi-Dharwad,Politics,Cultural-Activity,Religion", "url": "https://publicnext.com/node" }
ಹುಬ್ಬಳ್ಳಿ: ಅದು ಭಗವಾನ್ ಪಾರ್ಶ್ವನಾಥ ತೀರ್ಥಂಕರರ ಸಲ್ಲಿಸುವ ವಿಶೇಷ ಮಹಾಮಸ್ತಕಾಭಿಷೇಕ. ಹನ್ನೆರಡು ವರ್ಷಗಳಿಗೊಮ್ಮೆ ನಡೆಯುವ ಸಂಭ್ರಮ ಎಲ್ಲೆಡೆಯೂ ಉತ್ಸಾಹದ ಚಿಲುಮೆಯನ್ನು ಹೊತ್ತಿಸಿದೆ. ಕಣ್ಣು ಹಾಯಿಸಿದಷ್ಟು ಜನಸಾಗರ, ಎಲ್ಲೆಡೆಯೂ ಪಾರ್ಶ್ವನಾಥ ನಾಮಸ್ಮರಣೆ. 68 ಅಡಿ ಎತ್ತರದ ಭವ್ಯ ಮೂರ್ತಿಯ ಜೊತೆಗೆ 405 ಅಡಿ ಎತ್ತರದ ಸುಮೇರು ಪರ್ವತದ ಮಹಾಮಸ್ತಕಾಭಿಷೇಕ ವೈಶಿಷ್ಟ್ಯಗಳನ್ನು ನೋಡಿಕೊಂಡು ಬರೋಣ ಬನ್ನಿ..
ಸಾಂಪ್ರದಾಯಿಕ ವಾದ್ಯ, ಎಲ್ಲೆಡೆಯೂ ಪಾರ್ಶ್ವನಾಥರ ನಾಮಜಪ, ಘೋಷಣೆ. ಕುಣಿದು ಕುಪ್ಪಳಿಸುವ ಭಕ್ತಸಾಗರ. ಶಾಂತಿ, ಅಹಿಂಸೆಯ ಧರ್ಮ ಪಾಲನೆಗೆ ಸಾಕ್ಷಿಯಾದ ಆಚಾರ್ಯರ ಸಮೂಹ. ಇದೆಲ್ಲಾ ದೃಶ್ಯಗಳಿಗೆ ಸಾಕ್ಷಿಯಾಗಿದ್ದು, ಹುಬ್ಬಳ್ಳಿಯ ಕೂಗಳತೆಯ ದೂರದಲ್ಲಿರುವ ವರೂರಿನ ನವಗ್ರಹ ತೀರ್ಥ ಕ್ಷೇತ್ರ.
ನವಗ್ರಹ ತೀರ್ಥ ಕ್ಷೇತ್ರ ಎಂದೇ ಖ್ಯಾತಿ ಪಡೆದ ವರೂರಿನ ಮಹಾಮಸ್ತಕಾಭಿಷೇಕದ ಸಂಭ್ರಮ ಎಂಟನೇ ದಿನಕ್ಕೆ ಕಾಲಿಟ್ಟಿದ್ದು, ಬೆಳ್ಳಂಬೆಳಿಗ್ಗೆಯೇ ಮೆರವಣಿಗೆ ಮೂಲಕ ಚಾಲನೆ ದೊರೆತಿದೆ. ರಥಯಾತ್ರೆಯ ಮೂಲಕ ಕಾರ್ಯಕ್ರಮ ಆರಂಭಗೊಂಡಿದ್ದು, ಪಾರ್ಶ್ವನಾಥರಿಗೆ ಭವ್ಯ ಮಹಾಮಸ್ತಕಾಭಿಷೇಕದ ಮೂಲಕ ಸಂಪನ್ನಗೊಂಡಿದೆ. 1008 ಕಳಸಗಳಿಂದ ಜಲಾಭಿಷೇಕ, ಕ್ಷೀರಾಭೀಷೇಕ ಹಾಗೂ ಮಂಗಳದ್ರವ್ಯದ ಅಭಿಷೇಕ ನೆರವೇರಿಸುವ ಮೂಲಕ ಅದ್ದೂರಿಯಾಗಿ ಆಚರಣೆ ಮಾಡಲಾಗಿದೆ.
ಜೈನಧರ್ಮದ ಸಂಪ್ರದಾಯದ ಮೂಲಕ ಅರ್ಘ್ಯ ನೀಡುವ ಮೂಲಕ ಪಾರ್ಶ್ವನಾಥರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಸುಮೇರು ಪರ್ವತದಲ್ಲಿ ಕಳಸ ಪೂಜೆಯ ಬಳಿಕ ಪಾರ್ಶ್ವನಾಥರಿಗೆ ಅಭಿಷೇಕ ಆರಂಭಗೊಂಡಿದ್ದು, ಜಲಾಭಿಷೇಕ, ಎಳೆನೀರು ಅಭಿಷೇಕ, ಕ್ಷೀರಾಭಿಷೇಕ ಹೀಗೆ ಮಂಗಳ ದ್ರವ್ಯದ ಮೂಲಕ ಮಹಾಮಸ್ತಕಾಭಿಷೇಕದ ಮೊದಲಘಟ್ಟಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು.
ಇನ್ನೂ ಎಂಟನೇ ದಿನದ ಪಂಚಕಲ್ಯಾಣ, ಮಹಾಮಸ್ತಕಾಭಿಷೇಕ ಕಾರ್ಯಕ್ರಮಕ್ಕೆ ಸಚಿವ ಎಚ್.ಕೆ.ಪಾಟೀಲ ವಿದ್ಯುಕ್ತವಾಗಿ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು. ಪಾರ್ಶ್ವನಾಥ ತೀರ್ಥಂಕರರಿಗೆ ಮಹಾಮಸ್ತಕಾಭಿಷೇಕದ ಕಾರ್ಯಕ್ರಮಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದ್ದು, ನವಗ್ರಹ ಕ್ಷೇತ್ರಕ್ಕೆ ಪ್ರವಾಸೋದ್ಯಮ ಇಲಾಖೆಯಿಂದ 2 ಕೋಟಿ ಕೊಡೋದಾಗಿ ಘೋಷಣೆ ಮಾಡಿದರು. ಅಲ್ಲದೆ ಸುಮೇರು ಪರ್ವತದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ಬಹುದೊಡ್ಡ ಕಳಸದ ಪೂಜೆ ನೇರವೇರಿಸಿದರು. ಅಲ್ಲದೇ ಕಾರ್ಯಕ್ರಮಕ್ಕೆ ಪಂಜಾಬ್ ರಾಜ್ಯಪಾಲರಾದ ಗುಲಾಬಚಂದ್ ಕಟಾರಿಯಾ ಆಗಮಿಸಿದ್ದು, ಗುಣಧರನಂದಿ ಮಹಾರಾಜರ ಹಾಗೂ ಕರ್ನಾಟಕದ ಜೈನಧರ್ಮ ಕಾರ್ಯವೈಖರಿಯನ್ನು ಕೊಂಡಾಡಿದ್ದಾರೆ.
ಒಟ್ಟಿನಲ್ಲಿ 405 ಅಡಿ ಎತ್ತರದ ಸುಮೇರು ಪರ್ವತದ ಕಳಸ ಪೂಜೆಯ ಜೊತೆಗೆ ಪಾರ್ಶ್ವನಾಥರಿಗೆ ಅಭಿಷೇಕ ಅದ್ದೂರಿಯಾಗಿ ನಡೆದಿದೆ. ಲೇಸರ್ ಶೋ ಮೂಲಕ ಕೂಡ ಪಾರ್ಶ್ವನಾಥ ತೀರ್ಥಂಕರರಿಗೆ ಗೌರವ ಸಮರ್ಪಣೆ ಮಾಡಲಾಗಿದೆ. ಎಂಟನೇ ದಿನದ ಕಾರ್ಯಕ್ರಮ ನಿಜಕ್ಕೂ ಅವಿಸ್ಮರಣೀಯ ಕ್ಷಣಗಳಿಗೆ ಸಾಕ್ಷಿಯಾಗಿದ್ದಂತೂ ಸತ್ಯ..
ಮಲ್ಲೇಶ್ ಸೂರಣಗಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
22/01/2025 08:40 pm