", "articleSection": "Politics", "image": { "@type": "ImageObject", "url": "https://prod.cdn.publicnext.com/s3fs-public/286525-1737564436-WhatsApp-Image-2025-01-22-at-10.17.00-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Praveen Onkari" }, "editor": { "@type": "Person", "name": "shivuk" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಧಾರವಾಡ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮಾಜಿ ಪೈಲ್ವಾನರು ಜಿಲ್ಲಾ ಕುಸ್ತಿ ಸಂಘದ ನೇತೃತ್ವದಲ್ಲಿ ಧಾರವಾಡ ಜಿಲ್ಲಾಧಿಕಾರಿ ಕಚೇರಿ...Read more" } ", "keywords": " Dharwad, Former Wrestler, Protest Demonstration, Various Demands, Karnataka News, Dharwad Protest, Wrestler Agitation, Indian Wrestling, Karnataka Government, Public Demonstration.,Hubballi-Dharwad,Politics", "url": "https://publicnext.com/node" }
ಧಾರವಾಡ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮಾಜಿ ಪೈಲ್ವಾನರು ಜಿಲ್ಲಾ ಕುಸ್ತಿ ಸಂಘದ ನೇತೃತ್ವದಲ್ಲಿ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು.
ಧಾರವಾಡದ ಮಾರುತಿ ಗರಡಿ ಮನೆಯಿಂದ ಧಾರವಾಡ ಜಿಲ್ಲಾಧಿಕಾರಿ ಕಚೇರಿವರೆಗೂ ಪ್ರತಿಭಟನಾ ರ್‍ಯಾಲಿ ನಡೆಸಿದ ಮಾಜಿ ಪೈಲ್ವಾನರು ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.
ಧಾರವಾಡದ ಪ್ರತಿಷ್ಠಿತ ಮಾರುತಿ ಗರಡಿ ಮನೆಯನ್ನು ಜೀರ್ಣೋದ್ಧಾರ ಮಾಡಬೇಕು, ಮಾಜಿ ಪೈಲ್ವಾನರ ಮಾಸಾಶನವನ್ನು 3500 ರಿಂದ 10 ಸಾವಿರಕ್ಕೆ ಹೆಚ್ಚಳ ಮಾಡಬೇಕು. ಮಾಜಿ ಹಾಗೂ ಹಾಲಿ ಪೈಲ್ವಾನರಿಗೆ ರೈಲ್ವೆ ಮತ್ತು ಬಸ್ ಪಾಸ್ ನೀಡಬೇಕು. ಮಾಸಾಶನ ವಯೋಮಿತಿ 40 ವರ್ಷಕ್ಕೆ ಇಳಿಸಬೇಕು ಎಂದು ಮಾಜಿ ಪೈಲ್ವಾನರು ಆಗ್ರಹಿಸಿದರು. ಮಾಜಿ ಪೈಲ್ವಾನರ ಹೋರಾಟ ಸಮಿತಿ ಅಧ್ಯಕ್ಷ ಪಿ.ಎಚ್.ನೀರಲಕೇರಿ ಈ ಧರಣಿಯ ನೇತೃತ್ವ ವಹಿಸಿದ್ದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
22/01/2025 10:17 pm