", "articleSection": "Infrastructure", "image": { "@type": "ImageObject", "url": "https://prod.cdn.publicnext.com/s3fs-public/378325-1737705252-1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Iranna Y Walikar" }, "editor": { "@type": "Person", "name": "somashekar" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಧೂಳಿನಿಂದಾಗಿ ಸಾರ್ವಜನಿಕರು ಬೇಸತ್ತು ಹೋಗಿದ್ದಾರೆ. ಎಲ್ಲೆ ನೋಡಿದರೂ ಧೂಳೋ ಧೂಳು. ಮನೆಯಿಂದ ಹೊರಗ...Read more" } ", "keywords": "Hubballi Air Pollution, Dust Pollution, Health Risks, Respiratory Problems, Air Quality Index, AQI Levels, Poor Air Quality, Hubli Mayor, Municipal Corporation, Environmental Issues, Public Health Concerns ,Hubballi-Dharwad,Infrastructure", "url": "https://publicnext.com/node" }
ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಧೂಳಿನಿಂದಾಗಿ ಸಾರ್ವಜನಿಕರು ಬೇಸತ್ತು ಹೋಗಿದ್ದಾರೆ. ಎಲ್ಲೆ ನೋಡಿದರೂ ಧೂಳೋ ಧೂಳು. ಮನೆಯಿಂದ ಹೊರಗಡೆ ಹೋಗಬೇಕಾದರೆ ಮಾಸ್ಕ್ ಹಾಕಿಕೊಂಡೆ ಹೋಗುವ ಪರಿಸ್ಥಿತಿ ಹುಬ್ಬಳ್ಳಿಯಲ್ಲಿ ನಿರ್ಮಾಣವಾಗಿದೆ. ಫ್ಲೈ ಓವರ್ ಕಾಮಗಾರಿಯಿಂದ ಹುಬ್ಬಳ್ಳಿ ಹೃದಯ ಭಾಗ ಚನ್ನಮ್ಮ ಸರ್ಕಲ್ ನಿಂದ ಹೊಸೂರ ಸರ್ಕಲ್ ವರೆಗೂ ಜನರು ಓಡಾಡದಂತಾಗಿದೆ.
ಹೌದು,,, ಹುಬ್ಬಳ್ಳಿ ಜನರಿಗೆ "ಧೂಳಿಗೆ ಮುಕ್ತಿ ಯಾವಾಗ ಎಂಬ ಯಕ್ಷ ಪ್ರಶ್ನೆ ಎಲ್ಲರಲ್ಲಿಯೂ ಕಾಡುತ್ತಿದೆ. ಹುಬ್ಬಳ್ಳಿಯ ರೈಲ್ವೆ ನಿಲ್ದಾಣದಿಂದ, ವಯಾ ಚನ್ನಮ್ಮ ಸರ್ಕಲ್, ಹೊಸೂರ ಸರ್ಕಲ್ ಉಣಕಲ್ ವರೆಗೆ, ಮತ್ತು ಬಿಡ್ನಾಳದಿಂದ ಗಬ್ಬೂರ ಕ್ರಾಸ್ ಕಡೆ ಹೋಗಬೇಕಾದ್ರೆ ಧೂಳಿನಿಂದ ಪಾದಚಾರಿಗಳು ಹಾಗೂ ವಾಹನ ಸವಾರರು ಸೋತು ಹೋಗಿದ್ದಾರೆ.
ಜನರು ಮಾಸ್ಕ್ ಧರಿಸದೆ ಹೋದರೆ ಅವರಿಗೆ ಅನಾರೋಗ್ಯ ವಾಗುವುದು ಗ್ಯಾರೆಂಟಿ ಆಗಿದೆ. ಸೂಕ್ತವಾದ ರಸ್ತೆ ವಿಲ್ಲದ ಕಾರಣ ಧೂಳು ಹೆಚ್ಚಾಗಿದೆ. ಒಂದು ವಾಹನ ಸಂಚಾರ ಮಾಡಿದರೆ ಸಾಕು ಧೂಳು ನಮ್ಮನ್ನೆ ಆವರಿಸಿಕೊಳ್ಳುತ್ತದೆ. ಬೈಕ್‌ನಲ್ಲಿ ಸಂಚಾರ ಮಾಡುವ ಪ್ರಯಾಣಿಕರು ಧೂಳಿನಿಂದ ಅಸ್ತಮಾದಿಂದ ಬಳಲುತ್ತಿದ್ದಾರೆ. ಅದಕ್ಕಾಗಿ ಮಹಾನಗರ ಪಾಲಿಕೆಯಿಂದ ದಿನಂಪ್ರತಿ ನೀರು ಹಾಕಿದ್ರು ಧೂಳು ನಿಲ್ಲುತ್ತಿಲ್ಲ. ಧೂಳು ತೆಗೆಯುವಂತ ವಾಹನ ಕೂಡ ಇದೆ. ಆದ್ರೂ ಕೂಡ ಈ ಭಯಾನಕ ಧೂಳು ಗೋಗುತ್ತಿಲ್ಲ. ಈ ಬಗ್ಗೆ ಪಾಲಿಕೆ ಮೇಯರ್ ರಾಮಣ್ಣ ಬಡಿಗೇರ ಏನು ಹೇಳುತ್ತಾರೆ ಕೇಳಿ.
ಜನರು ಧೂಳಿನಿಂದ ಇಷ್ಟೊಂದು ಸಮಸ್ಯೆಯನ್ನು ಅನುಭವಿಸುತ್ತಿದ್ದರು ಕೂಡ, ನಮ್ಮ ಜನ ಪ್ರತಿನಿಧಿಗಳು ಮಾತ್ರ ಎಸಿ ಕಾರಲ್ಲಿ ಓಡಾಡುತ್ತಿದ್ದಾರೆ. ಕೂಡಲೆ ಜನನಾಯಕರು ಜನರಿಂದ ವೋಟ್ ತೆಗೆದುಕೊಳ್ಳುತ್ತಿರಿ ನಿಜಾ, ಅವರಿಗೆ ನೆಮ್ಮದಿ ಜೀವನ ನಡೆಸಲು ಅನುಕೂಲ ಮಾಡಿ ಕೊಡಿ. ಎಲ್ಲ ನಾಯಕರು ಅಧಿಕಾರಿಗಳು ಒಂದು ಮೀಟಿಂಗ್ ಮಾಡಿ, ಸಾರ್ವಜನಿಕ ಹಿತದೃಷ್ಟಿಯಿಂದ ಧೂಳ ಮುಕ್ತ ನಗರವನ್ನು ಮಾಡಲು ಸಹಕರಿಸಿ ಎಂಬುದು ನಮ್ಮ ಕಳಕಳಿ.
ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ.
Kshetra Samachara
24/01/2025 01:24 pm