ವಿಕ್ಕಿ ಕೌಶಲ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ "ಚಾವ' ಸಿನಿಮಾ ಫೆಬ್ರವರಿ 14ಕ್ಕೆ ತೆರೆಗೆ ಬರಲಿದೆ. ಸದ್ಯ ಚಿತ್ರದ ಪೋಸ್ಟರ್, ಟ್ರೈಲರ್ ಹೊರ ಬಂದು ಸದ್ದು ಮಾಡ್ತಿದೆ. ಚಿತ್ರದಲ್ಲಿ ಮರಾಠ ಚತ್ರಪತಿ ಶಿವಾಜಿ ಪುತ್ರ ಸಾಂಬಾಜಿ ಸಾಧನೆ ಕಥೆ ಹೇಳಲಾಗುತ್ತಿದೆ.
ಮೊನ್ನೆಯಷ್ಟೇ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಜನ ಮೆಚ್ಚಿಕೊಂಡಿದ್ದಾರೆ. ಮುಂಬೈನಲ್ಲಿ ನಡೆದ ಟ್ರೇಲರ್ ರಿಲೀಸ್ ಈವೆಂಟ್ಗೆ ರಶ್ಮಿಕಾ ವ್ಹೀಲ್‌ಚೇರ್‌ನಲ್ಲಿ ಬಂದಿದ್ದರು. ವೇದಿಕೆಗೆ ಆಗಮಿಸುವ ವೇಳೆ ಕುಂಟುತ್ತಾ ಬಂದಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ವೇದಿಕೆ ಮೇಲೆ ಬರಲು ಕಷ್ಟಪಡುವುದನ್ನು ನೋಡಿದ ಬೆನ್ನಲ್ಲೇ ಅಭಿಮಾನಿಗಳು ರಶ್ಮಿಕಾಗೆ ಏನಾಯ್ತು ಎಂದು ಕೇಳ್ತಿದ್ದಾರೆ.ಕಾಲಿನ ಮೂಳೆ ಮುರಿತವಾಗಿದೆ ಎಂದು ರಶ್ಮಿಕಾ ಮಂದಣ್ಣ ಇತ್ತೀಚೆಗೆ ಅಪ್ಡೇಟ್ ಕೊಟ್ಟಿದ್ದರು. ಜಿಮ್ ಮಾಡುವ ವೇಳೆ ಗಾಯವಾಗಿದೆ ಎಂದು ತಿಳಿಸಿದ್ದರು. ಅದೇ ಕಾರಣಕ್ಕೆ ‘ಸಿಕ್ಕಂದರ್’ ಚಿತ್ರೀಕರಣ ಮುಂದೂಡಲಾಗಿದೆ.
PublicNext
23/01/2025 05:30 pm