ಚಳ್ಳಕೆರೆ: ಮಾರಮ್ಮನ ಹಬ್ಬಕ್ಕೆ ತಯಾರು ಮಾಡಿಕೊಳ್ಳಲು ತಮ್ಮ ಗ್ರಾಮಕ್ಕೆ ಹೋಗಿದ್ದ ಶಿಕ್ಷಕನ ಮನೆಯಲ್ಲಿ ಮನೆಯ ಬೀಗ ಮುರಿದು ಹಣ ಹಾಗೂ ಒಡವೆ ಕಳ್ಳತನ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಚಳ್ಳಕೆರೆ ನಗರದ ಶಾಂತಿನಗರದ ಸೈನಿಕ ಆಸ್ಪತ್ರೆಯ ಮುಂಭಾಗದಲ್ಲಿ ಭೀಮನಾಯ್ಕ್ ಎನ್ನುವ ಶಿಕ್ಷಕರ ಮನೆಯಲ್ಲಿ ಈ ಕಳ್ಳತನ ನಡೆದಿದೆ. ಭೀಮ ನಾಯ್ಕ್ ತಳುಕಿನ ಮಾರುತಿ ಅನುದಾನಿತ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದಾರೆ. ಚಳ್ಳಕೆರೆ ನಗರದ ಶ್ರೀನಿವಾಸ್ ಆಚಾರ ಅವರ ಮನೆಯಲ್ಲಿ ಬಾಡಿಗೆ ಮನೆ ಪಡೆದು ವಾಸ ಮಾಡುತ್ತಿದ್ದರು. ತಮ್ಮ ಗ್ರಾಮದಲ್ಲಿ ನಡೆಯುತ್ತಿರುವ ಶೂನ್ಯವು ಮಾರಮ್ಮ ಹಬ್ಬಕ್ಕೆ ತಯಾರು ಮಾಡಿಕೊಳ್ಳಲು ಹೋಗಿದ್ದ ರಾತ್ರಿ ಮನೆಯಲ್ಲಿ ಕಳ್ಳತನವಾಗಿದೆ. ಅಕ್ಕ ಪಕ್ಕದ ಮನೆಗಳನ್ನು ಹೊರಗಿನಿಂದ ಚಿಲಕ ಹಾಕಿ ಮನೆಯ ಮುಖ್ಯದ್ವಾರದ ಒಳಬೀಗ ಮುರಿದು ಒಳ ನುಗ್ಗಿದ ಕಳ್ಳರು ಬೀರು ಒಡೆದು ಬೀರುವಿನಲ್ಲಿದ್ದ ಒಡವೆ ಹಾಗೂ 15,000 ಹಣ ದೋಚಿ ಪರಾರಿಯಾಗಿದ್ದಾರೆ.
ಘಟನಾ ಸ್ಥಳಕ್ಕೆ ಡಿವೈಎಸ್ಪಿ ಟಿಬಿ ರಾಜಣ್ಣ, ಬೆರಳಚ್ಚು ತಜ್ಞರು ಹಾಗೂ ಶ್ವಾನದಳದ ಸಿಬ್ಬಂದಿ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
PublicNext
20/01/2025 05:21 pm