ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಥಣಿ: ಗಡಿಭಾಗದಲ್ಲಿ ತಲ್ವಾರ್ ಸದ್ದು- ಯುವಕನ ಮೇಲೆ ಮಾರಣಾಂತಿಕ ಹಲ್ಲೆ

ಅಥಣಿ: ಗಡಿಭಾಗದಲ್ಲಿ ಮತ್ತೆ ತಲ್ವಾರ್ ಸದ್ದು ಮಾಡಿದ್ದು ಓರ್ವ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗಿದೆ. ಅಥಣಿ ತಾಲೂಕಿನ ಸಂಬರಗಿ ಗ್ರಾಮದಲ್ಲಿ ನಿನ್ನೆ ರಾತ್ರಿ 8 ಗಂಟೆ ಸುಮಾರಿಗೆ ಮೂವರು ಯುವಕರು ತಲ್ವಾರ್ ಮತ್ತು ಕುಡುಗೋಲಿನಿಂದ ಕೊಲೆ ಮಾಡಲು ಯತ್ನಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಬೈಕ್ ರೇಸ್ ಸದ್ದು ವಿಚಾರವಾಗಿ ನಡೆದ ಗಲಾಟೆಯಲ್ಲಿ ಓರ್ವ ಕಾಂಗ್ರೆಸ್ ಮುಖಂಡನ ಕೊಲೆಗೆ ಸಂಚು ರೂಪಿಸಲಾಗಿತ್ತು ಎಂದು ತಿಳಿದು ಬಂದಿದೆ. ನಿನ್ನೆ ಸಾಯಂಕಾಲ ಮಾತಿಗೆ ಮಾತು ಬೆಳೆದು ಯುವಕರು ತಲ್ವಾರ್ ನಿಂದ ಹಲ್ಲೆ ಮಾಡಿದ್ದು, ಯುವಕ ಸೂರಜ್ ಅಬಾ ಕಾಂಬಳೆ (24)‌ ಗಂಭೀರ ಗಾಯಗೊಂಡಿದ್ದಾನೆ.

ರಕ್ತದ ಮಡುವಿನಲ್ಲಿ ಬಿದ್ದಿದ್ದ ಯುವಕನನ್ನು ಅಥಣಿಯ ಖಾಸಗಿ ಅಸ್ಪತ್ರೆಗೆ ದಾಖಲಿಸಲಾಗಿದೆ. ಹಲ್ಲೆ ಮಾಡಿದ ಮೂವರು ಆರೋಪಿಗಳಾದ ವಿಶಾಲ ಸುರೇಶ ನಾಟೆಕರ್, ಅತುಲ ತಾತೋಬಾ ನಲವಡೆ, ಸೋಣ್ಯಾ ಹಿಮ್ಮತ ಶಿಂಧೆ ವಿರುದ್ಧ ಅಥಣಿ ಪೊಲೀಸ್ ಠಾಣೆಯಲ್ಲಿ ಕೊಲೆ ಸಂಬಂಧಿತ ಕೇಸ್ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ. ಈಗಾಗಲೆ ಓರ್ವನನ್ನು ಬಂಧಿಸಿದ್ದು, ಇಬ್ಬರಿಗೆ ಹುಡುಕಾಟ ನಡೆಸುತ್ತಿದ್ದಾರೆ.

Edited By : Ashok M
PublicNext

PublicNext

13/01/2025 06:00 pm

Cinque Terre

30.88 K

Cinque Terre

0

ಸಂಬಂಧಿತ ಸುದ್ದಿ