ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಎಣ್ಣೆ ಏಟಲ್ಲಿ ಹಿಗ್ಗಾಮುಗ್ಗಾ ಥಳಿತ : ಸ್ಥಳದಲ್ಲೇ ಪ್ರಾಣ ಬಿಟ್ಟ ವ್ಯಕ್ತಿ

ಬೆಳಗಾವಿ : ಎಣ್ಣೆ ಏಟಿನಲ್ಲಿ ಹಿಗ್ಗಾಮುಗ್ಗಾ ಥಳಿಸಲಾಗಿದ್ದು ವ್ಯಕ್ತಿ ಸ್ಥಳದಲ್ಲೇ ಪ್ರಾಣ ಬಿಟ್ಟಿರುವ ಘಟನೆ ಬೆಳಗಾವಿ ಜಿಲ್ಲೆಯ ಮೂಡಲಗಿ ಪಟ್ಟಣದಲ್ಲಿ ನಡೆದಿದೆ.‌

ಮೂಡಲಗಿಯ ಬಾರ್ ಒಂದರಲ್ಲಿ ಕ್ಷುಲ್ಲಕ ಕಾರಣಕ್ಕೆ ಗಲಾಟೆ ಆರಂಭವಾಗಿ ರಂಗಪ್ಪ ಪಾಟೀಲ್, ಈರಪ್ಪ ತುಂಗಳ ಇಬ್ಬರು ಲಕ್ಷ್ಮಣ ಮರನೂರ ಎಂಬುವರನ್ನು ಹಿಗ್ಗಾಮುಗ್ಗ ಥಳಿಸಿದ್ದಾರೆ. ಈ ಘಟನೆಯಲ್ಲಿ ಲಕ್ಷ್ಮಣ ಮರನೂರ(45) ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.‌

ರಂಗಪ್ಪ ಪಾಟೀಲ್, ಈರಪ್ಪ ತುಂಗಳ ಕೊಲೆ ಮಾಡಿದ ಆರೋಪಿಗಳು ಹಾಗೂ ಸಾವನ್ನಪ್ಪಿದ ಲಕ್ಷ್ಮಣ ನಿನ್ನೆ ಮಧ್ಯಾಹ್ನ ಬಾರಿಗೆ ಬಂದು ಮದ್ಯಪಾನ ಮಾಡ್ತಿದ್ರು, ಲಕ್ಷ್ಮಣ ಕುಳಿತಿದ್ದ ಟೇಬಲ್ ಪಕ್ಕದಲ್ಲಿಯೇ ಇಬ್ಬರು ಆರೋಪಿಗಳು ಕುಳಿತಿದ್ದಾರೆ.

ಈ ವೇಳೆ ಕ್ಷುಲ್ಲಕ ವಿಚಾರಕ್ಕೆ ಮೂವರ ಮಧ್ಯೆ ಜಗಳ ಆರಂಭವಾಗಿದೆ. ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸುವ ಹಂತಕ್ಕೆ ಜಗಳ ತಲುಪಿದೆ.‌ ಈ ವೇಳೆ ಲಕ್ಷ್ಮಣ ಮೇಲೆ ರಂಗಪ್ಪ ಹಾಗೂ ಈರಪ್ಪ ಹಲ್ಲೆ ಮಾಡಿದ್ದಾರೆ.‌ ಇಬ್ಬರ ಹಲ್ಲೆಯಿಂದ ಸ್ಥಳದಲ್ಲಿಯೇ ಲಕ್ಷ್ಮಣ ಪ್ರಾಣ ಬಿಟ್ಟಿದ್ದಾನೆ.‌

ಲಕ್ಷ್ಮಣ ಮೇಲೆ ಹಲ್ಲೆ ಮಾಡುವ ವಿಡಿಯೋ ಸ್ಥಳೀಯರೊಬ್ಬರ ಮೊಬೈಲ್ ನಲ್ಲಿ ಸೆರೆಯಾಗಿದೆ. ನಂತರ ಸ್ಥಳಕ್ಕೆ ಬಂದು ಸ್ಥಳೀಯರನ್ನು ಪೊಲೀಸ್ರು ವಿಚಾರಿಸಿದ್ದಾರೆ. ಕೂಡಲೆ ಇಬ್ಬರನ್ನು ಪತ್ತೆ ಹಚ್ಚಿ ಮೂಡಲಗಿ ಪೊಲೀಸರು ಬಂಧಿಸಿದ್ದಾರೆ.‌

ಇನ್ನೂ ಕೊಲೆಯಾದ ಲಕ್ಷ್ಮಣ ಮೃತ ದೇಹವನ್ನು ಬೆಳಗಾವಿಯ ಬಿಮ್ಸ್ ಶವಾಗಾರಕ್ಕೆ ಮರಣೋತ್ತರ ಪರೀಕ್ಷೆಗಾಗಿ ಸಾಗಿಸಲಾಗಿದ್ದು, ಈ ಕುರಿತು ಮೂಡಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.‌

Edited By : Somashekar
PublicNext

PublicNext

13/01/2025 04:09 pm

Cinque Terre

20.43 K

Cinque Terre

0

ಸಂಬಂಧಿತ ಸುದ್ದಿ