ಬೆಳಗಾವಿ: ಬಸ್‌ನಲ್ಲಿ ಸೀಟ್ ವಿಚಾರಕ್ಕೆ ಯುವತಿಯರ ಮಧ್ಯೆ ಜಗಳವಾಗಿದ್ದು, ಓರ್ವ ಯುವತಿಯ ಕುತ್ತಿಗೆ, ಮುಖಕ್ಕೆ ಸಣ್ಣಪುಟ್ಟ ಗಾಯಗಳಾಗಿವೆ.
ಧಾರವಾಡ ಮೂಲದ ಕೌಶಲ್ಯ ಎಳವತ್ತಿ (23) ಅವರ ಕುತ್ತಿಗೆ ಮುಖಕ್ಕೆ ಗಾಯವಾಗಿದ್ದು, ಬೆಳಗಾವಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಶಹನಾಜ ಸವನೂರ, ಕರಿಷ್ಮಾ ಸವನೂರ, ಮಹಮ್ಮದ್ ಅಜಿಮ್ ಸವನೂರ ಎಂಬವರಿಂದ ಹಲ್ಲೆ ಮಾಡಿರುವ ಆರೋಪ ಮಾಡಲಾಗಿದೆ. ಗಾಯಗೊಂಡ ಯುವತಿಗೆ ಬೆಳಗಾವಿ ಬೀಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಬೆಳಗಾವಿ ಕಡೆಯಿಂದ ಹುಬ್ಬಳ್ಳಿಗೆ ಹೋಗುವಾಗ ಸೀಟ್ ವಿಚಾರಕ್ಕೆ ಆರಂಭವಾಗಿದ್ದ ಗಲಾಟೆ ತಾರಕಕ್ಕೆ ಏರಿ ಬಸ್ಸಿನಲ್ಲೆ ಹೊಡೆದಾಡಿಕೊಂಡಿದ್ದಾರೆ.
PublicNext
14/01/2025 09:16 pm