ಶಬರಿಮಲೆ: ಮಕರ ಸಂಕ್ರಮಣ ಪುಣ್ಯದಿನವಾದ ಇಂದು ಶಬರಿಮಲೆಯಲ್ಲಿ ಅಯ್ಯಪ್ಪ ಸ್ವಾಮಿಯ ಭಕ್ತ ಸಾಗರವೇ ಸನ್ನಿಧಿಗೆ ಹರಿದು ಬರುತ್ತಿದೆ.
ಅಯ್ಯಪ್ಪ ಮಾಲಾಧಾರಿಗಳು ಶಬರಿಮಲೆಗೆ ಬಂದ ನಂತರ ಪಂಪಾ ನದಿಯಲ್ಲಿ ಜಳಕ ಮಾಡಿ ಬೆಟ್ಟ ಹತ್ತುವುದಕ್ಕೆ ಪ್ರಾರಂಭ ಮಾಡುತ್ತಾರೆ.
ಮೊದಲಿಗೆ ಕನ್ನಿಮೂಲ ಶ್ರೀಗಣಪತಿ ದೇವಸ್ಥಾನಕ್ಕೆ ತೆಂಗಿನಕಾಯಿ ಒಡೆದು ಬೆಟ್ಟ ಹತ್ತುತ್ತಾರೆ. ಬಹಳ ಕಠಿಣವಾದ ಬೆಟ್ಟವನ್ನು ಹತ್ತುವಾಗ ಸ್ವಾಮಿಗಳ ಬಾಯಲ್ಲಿ "ಸ್ವಾಮಿಯೇ ಶರಣಂ..." ದಿವ್ಯ ಮಂತ್ರ ಘೋಷ ಕೇಳಿ ಬರುತ್ತವೆ.
ನಂತರ ಬೆಟ್ಟದಲ್ಲಿ ಶರಣ್ ಗುತ್ತಿ ಸ್ಥಳ ಬರುತ್ತದೆ. ಪ್ರಪ್ರಥಮ ವರ್ಷ ಮಾಲೆ ಹಾಕಿ ಬಂದಿರುವ ಸ್ವಾಮಿಗಳು ಇಲ್ಲಿ ಬಾಣವನ್ನು ಚುಚ್ಚುತ್ತಾರೆ. ಕಾರಣ ಶ್ರೀಅಯ್ಯಪ್ಪ ಸ್ವಾಮಿಯು ಮಹಾ ರಾಕ್ಷಸಿ ಮಹಿಷಿಯನ್ನು ಈ ಸ್ಥಳದಲ್ಲಿಯೇ ಸಂಹಾರ ಮಾಡಿದ್ದರಿಂದ ಇಲ್ಲಿ ಬಾಣವನ್ನು ಚುಚ್ಚಲಾಗುತ್ತದೆ.
ನಂತರ ಮಾಲಾಧಾರಿಗಳು ಅತಿ ಪವಿತ್ರವಾದ ಹದಿನೆಂಟು ಮೆಟ್ಟಿಲು ಹತ್ತಿ, ಶ್ರೀ ಅಯ್ಯಪ್ಪ ಸ್ವಾಮಿಯ ದಿವ್ಯದರ್ಶನ ಪಡೆದು ಪುನೀತರಾಗುತ್ತಾರೆ.
ವರದಿ : ಉದಯ ಗೌಡರ ಪಬ್ಲಿಕ್ ನೆಕ್ಸ್ಟ್, ಶಬರಿಮಲೆ
PublicNext
14/01/2025 04:59 pm