ಲಕ್ನೋ: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ತ್ರಿವೇಣಿ ಸಂಗಮದಲ್ಲಿ ವಿವಿಧ ಅಖಾಡಾಗಳ ಸಂತರು ಮತ್ತು ಸಾಧುಗಳು ಸೇರಿದಂತೆ ಸುಮಾರು 3.5 ಕೋಟಿ ಭಕ್ತರು ಮಕರ ಸಂಕ್ರಾಂತಿ ದಿನದಂದು ಮೊದಲ 'ಅಮೃತ ಸ್ನಾನ' (ಪವಿತ್ರ ಸ್ನಾನ) ಮಾಡಿದ್ದಾರೆ.
ಮಹಾಕುಂಭ ಮೇಳದಲ್ಲಿ ಸೋಮವಾರ ‘ಪುಷ್ಯ ಪೂರ್ಣಿಮಾ’ ದಿನದಂದು ಮೊದಲ ‘ಸ್ನಾನ’ ನಡೆದಿತ್ತು. ಸುಮಾರು 1.75 ಕೋಟಿ ಮಂದಿ ಪಾಲ್ಗೊಂಡಿದ್ದರು. ಎರಡನೇ ದಿನವಾದ ಮಂಗಳವಾರ ವಿವಿಧ ಅಖಾಡಾಗಳ ಸದಸ್ಯರು ‘ಅಮೃತ ಸ್ನಾನ’ ಮಾಡಿದರು. ಶ್ರೀ ಪಂಚಾಯತಿ ಆಖಾಡಾ ಮಹಾನಿರ್ವಾಣಿ ಸದಸ್ಯರು ಮೊದಲನೆಯವರಾಗಿ ಸ್ನಾನದಲ್ಲಿ ಪಾಲ್ಗೊಂಡರೆ, ಶ್ರೀ ಶಂಭು ಪಂಚಾಯತಿ ಅಟಲ್ ಅಖಾಡಾ ಸೇರಿದಂತೆ ಇತರ ಅಖಾಡಾಗಳ ಸದಸ್ಯರು ಬಳಿಕ ಸ್ನಾನ ಘಟ್ಟಗಳತ್ತ ಬಂದರು.
ಪ್ರಯಾಗ್‌ರಾಜ್ ಮಹಾಕುಂಭ ಮೇಳದ ವೈಭವದಲ್ಲಿ ಕೋಟ್ಯಾಂತರ ಭಕ್ತರು ಭಾಗಿಯಾಗಿದ್ದಾರೆ. ನಿನ್ನೆ ಮಕರ ಸಂಕ್ರಾಂತಿ ಸಂಭ್ರಮದಲ್ಲಿ ತ್ರಿವೇಣಿ ಸಂಗಮದಲ್ಲಿ ಸಾಧು-ಸಂತರ ಅಪೂರ್ವ ಸಮಾಗಮ ಹೊಸ ದೃಶ್ಯಕಾವ್ಯವನ್ನೇ ಸೃಷ್ಟಿಸಿದೆ. ವಿದೇಶಿ ಭಕ್ತರು ಮಹಾಕುಂಭದ ಮಜಲಿಗೆ ಮಾರುಹೋಗಿದ್ದು ಪುಣ್ಯ ಸ್ಥಾನ ಮಾಡಿ ಭಕ್ತಿಯ ಪರಾಕಾಷ್ಟೆ ಮೆರೆದಿದ್ದಾರೆ.
PublicNext
15/01/2025 09:31 am