ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಸಂಕ್ರಾಂತಿಯಂದೇ ಅತ್ತೆ ಕೊಂದ ಅಳಿಯ

ಬೆಳಗಾವಿ: ಇಂದು ದೇಶಾದ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಆ ತಾಯಿಯೂ ಕೂಡ ಹುಷಾರಿಲ್ಲದ ತನ್ನ ಮಗಳಿಗೆ ಸಂಕ್ರಾಂತಿ ಹಬ್ಬದೂಟ ಮಾಡಿಕೊಂಡು ಹೋಗಿದ್ದಳು. ಈ ವೇಳೆ ಅಳಿಯನ ಜೊತೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ.

ಮುಂಗೋಪಿ ಅಳಿಯನ ಹುಚ್ಚಾಟಕ್ಕೆ ಆ ಮನೆಯಲ್ಲಿ ರಕ್ತ ಹರಿದಿದೆ. ಏಳು ತಿಂಗಳ ಹಿಂದೆಯಷ್ಟೇ ಬೆಳಗಾವಿಯ ಮಲಪ್ರಭಾ ನಗರದ ನಿವಾಸಿ ಶುಭಂ ದತ್ತಾ ಬಿರ್ಜೆ ಕಲ್ಯಾಣ ನಗರದ ನಿವಾಸಿ ರೇಣುಕಾ ಪಡುಮುಖೆ ಪುತ್ರಿ ಛಾಯಾರನ್ನು ಪ್ರೀತಿಸಿ ರಿಜಿಸ್ಟ್ರಾರ್ ಮದುವೆಯಾಗಿದ್ದ‌. ಮದುವೆಯಾದ ಬಳಿಕ ಶುಭಂ ಹಾಗೂ ಛಾಯಾ ಬೆಳಗಾವಿಯ ರೈತ ಗಲ್ಲಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಮನೆಗೆ ಅತ್ತೆ ಬರುವ ವಿಚಾರಕ್ಕೆ ಆಗಾಗ ಗಲಾಟೆಯಾಗುತ್ತಿತ್ತು. ಕಳೆದ ಮೂರು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಮಗಳು ಛಾಯಾಳನ್ನು ನೋಡಿಕೊಂಡು, ಸಂಕ್ರಾಂತಿ ಹಬ್ಬದ ಬುತ್ತಿ ನೀಡೋಣ ಅಂತಾ ಅತ್ತೆ ರೇಣುಕಾ ಮನೆಗೆ ಬಂದಿದ್ದಾಳೆ. ಈ ವೇಳೆ ನಮ್ಮ ಮನೆಗೆ ಏಕೆ ಬರ್ತಿಯಾ ಅಂತಾ ತಗಾದೆ ತೆಗೆದ ಅಳಿಯ ಶುಭಂ ಗಲಾಟೆ ಶುರು ಮಾಡಿದ್ದಾನೆ. ಈ ವೇಳೆ ಇಬ್ಬರ ಮಧ್ಯದ ನಡೆದ ಗಲಾಟೆ ವಿಕೋಪಕ್ಕೆ ತಿರುಗಿದೆ. ಮನೆಯಲ್ಲಿ ಇದ್ದ ಚಾಕುವಿನಿಂದ ಅತ್ತೆಯ ಹೊಟ್ಟೆಗೆ ಇರಿದಿದ್ದಾನೆ. ತೀವ್ರ ಗಾಯವಾಗಿ ರಕ್ತಸ್ರಾವದಿಂದ ಒದ್ದಾಡುತ್ತಿದ್ದ ರೇಣುಕಾರನ್ನು ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ತರುವಷ್ಟರಲ್ಲಿಯೇ ರೇಣುಕಾ ಪ್ರಾಣ ಪಕ್ಷಿ ಹಾರಿ ಹೋಗಿದೆ.

ಇನ್ನು ಘಟನಾ ಸ್ಥಳಕ್ಕೆ ಶಹಾಪುರ ಠಾಣೆಯ ಪೊಲೀಸರು, ಡಿಸಿಪಿ ರೋಹನ್ ಜಗದೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ‌.

ಕುಟುಂಬದಲ್ಲಿ ಅದೇನೆ ಜಗಳ ಇದ್ದರೂ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕಿತ್ತು. ಆದ್ರೆ ಈ ರೀತಿ ಕೋಪದ ಕೈಗೆ ಬುದ್ದಿ ಕೊಟ್ಟ ಅಳಿಯ ಅತ್ತೆಯ ಕೊಂದು ತಂದೆ ತಾಯಿ ಜೊತೆ ಜೈಲು ಸೇರಿದ್ದಾನೆ. ಇತ್ತ ತಾಯಿ ಕೊಲೆಯಾಗಿ ಹೋದ್ರೆ ನಂಬಿ ಮದುವೆಯಾದ ಗಂಡ ತನ್ನ ತಾಯಿಯನ್ನು ಕೊಂದು ಜೈಲು ಪಾಲಾಗಿದ್ದು ಮಹಿಳೆ ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ.

ಪ್ರಲ್ಹಾದ ಪೂಜಾರಿ, ಪಬ್ಲಿಕ್ ನೆಕ್ಸ್ಟ್, ಬೆಳಗಾವಿ

Edited By : Manjunath H D
PublicNext

PublicNext

14/01/2025 07:25 pm

Cinque Terre

33.65 K

Cinque Terre

0

ಸಂಬಂಧಿತ ಸುದ್ದಿ