ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಸವದತ್ತಿ ಯಲ್ಲಮ್ಮನ ದರ್ಶನಕ್ಕೂ ಏಜೆಂಟರ್‌ಗಳ ಹಾವಳಿ

ಬೆಳಗಾವಿ: ಉತ್ತರ ಕರ್ನಾಟಕದ ಶಕ್ತಿದೇವತೆ, ಕೋಟ್ಯಂತರ ಭಕ್ತರ ಪಾಲಿನ ಆರಾಧ್ಯ ದೇವಿಯ ಸನ್ನಿಧಿಯಲ್ಲೂ ಏಜೆಂಟರ್‌ಗಳ ಹಾವಳಿ ಹೆಚ್ಚಾಗಿದೆ. ದೇವಿಯ ದರ್ಶನದ ಹೆಸರಿನಲ್ಲಿ ಏಜೆಂಟರು ಭಕ್ತರಿಂದ ನಿತ್ಯವೂ ಲಕ್ಷಾಂತರ ಕಮಾಯಿ ಮಾಡಿಕೊಳ್ಳುತ್ತಿದ್ದಾರೆ.

ಬೆಳಗಾವಿಯಿಂದ ಸುಮಾರು 100 ಕಿ.ಮೀ ದೂರ ಇರುವ ಉತ್ತರ ಕರ್ನಾಟಕದ ಶಕ್ತಿದೇವಿ ಶ್ರೀ ರೇಣುಕಾ ಯಲ್ಲಮ್ಮ ಭಾಷೆ, ಜಾತಿ, ಗಡಿ, ಸೀಮೆಗಳ ಎಲ್ಲೆ ಮೀರಿ ಭಕ್ತಿಯ ಹೊಳೆ ಹರಿಸುವ ಮಹಾತಾಯಿ ಎಂಬುದು ಭಕ್ತರ ನಂಬಿಕೆ. ರಾಜ್ಯದಲ್ಲೇ ಅತಿಹೆಚ್ಚು ಪ್ರವಾಸಿಗರು ಭೇಟಿ ನೀಡುವ ತಾಣವಾಗಿ ಯಲ್ಲಮ್ಮನಗುಡ್ಡ ಖ್ಯಾತಿ ಗಳಿಸಿದೆ. ಸ್ವತಃ ಪ್ರವಾಸೋದ್ಯಮ ಸಚಿವ ಎಚ್‌.ಕೆ.ಪಾಟೀಲ ಅವರೇ ಹೇಳುವಂತೆ ರಾಜ್ಯದಲ್ಲೇ ಹೆಚ್ಚು ಪ್ರವಾಸಿಗರು ಯಲ್ಲಮ್ಮನ ಗುಡ್ಡಕ್ಕೆ ಭೇಟಿ ನೀಡುತ್ತಾರೆ. ಆದರೆ, ಪ್ರವಾಸಿಗರ ಸಂಖ್ಯೆಗೆ ಅನುಗುಣವಾಗಿ ಕ್ಷೇತ್ರವನ್ನು ಅಭಿವೃದ್ಧಿಪಡಿಸದೇ ಇರುವುದು ವಿಪರ್ಯಾಸ ಎಂದೂ ಒಂದೊಮ್ಮೆ ಹೇಳಿಕೆಯನ್ನೂ ಕೊಟ್ಟಿದ್ದಾರೆ‌. ಅವರ ಹೇಳಿಕೆಗೆ ಅನುಗುಣವಾಗಿ ರೇಣುಕಾ ಯಲ್ಲಮ್ಮನ ಪುಣ್ಯಕ್ಷೇತ್ರದಲ್ಲಿ ದರ್ಶನದ ಹೆಸರಿನಲ್ಲಿ ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ಗಂಭೀರ ಆರೋಪ‌ ಕೇಳಿಬಂದಿದೆ.

ಪ್ರತಿವರ್ಷ ಬಣದ ಹುಣ್ಣಿಮೆ ದಿವಸ ಸವದತ್ತಿ ಶ್ರೀ ರೇಣುಕಾ ಯಲ್ಲಮ್ಮನ ದರ್ಶನಕ್ಕೆ ಲಕ್ಷಾಂತರ ಭಕ್ತ ಸಾಗರವೇ ಹರಿದುಬರುತ್ತದೆ. ಅದರಲ್ಲಿ‌ ಬಣದ ಹುಣ್ಣಿಮೆ, ಭರತ ಹುಣ್ಣಿಮೆ ಸಂದರ್ಭದಲ್ಲಿ ಲಕ್ಷಾಂತರ ಭಕ್ತರು ಹೆಚ್ಚಿನ ಸಂಖ್ಯೆಯ ಆಗಮಿಸುತ್ತಾರೆ. ಸೋಮವಾರದಿಂದ ಮೂರು ದಿನಗಳ ಅವಧಿಯಲ್ಲಿ 10 ಲಕ್ಷಕ್ಕೂ ಹೆಚ್ಚು ಭಕ್ತರಿಂದ ದೇವಿಯ ದರ್ಶನ ಪಡೆಯುತ್ತಾರೆ. ಆದರೆ, ಭಕ್ತರ ಸಂಖ್ಯೆ ಹೆಚ್ಚಳ ಹಿನ್ನೆಲೆ ಶೀಘ್ರ ದರ್ಶನದ ಹೆಸರಿನಲ್ಲಿ ದೇವಸ್ಥಾನದ ಆವರಣದಲ್ಲಿ ನೂರಾರು ಜನ ಏಜೆಂಟರು ಭಕ್ತರ ಬಳಿ ಹಣ ವಸೂಲಿ ದಂಧೆಯನ್ನು ಮಾಡಿಕೊಂಡಿದ್ದಾರಂತೆ. ಒಬ್ಬರಿಗೆ 1 ಸಾವಿರ ರೂಪಾಯಿಂದ 1500 ರೂಪಾಯಿ ಹಣ ವಸೂಲಿ ಮಾಡುತ್ತಿದ್ದು‌, ಯಲ್ಲಮ್ಮ ದರ್ಶನಕ್ಕೆ ಬರೋ ಭಕ್ತರನ್ನು ಟಾರ್ಗೆಟ್ ಮಾಡುವ ಏಜೆಂಟರ್ ಹಣದ ಡಿಮ್ಯಾಂಡ್ ಮಾಡುತ್ತಾರೆ. ದೇವಾಲಯ ಮುಂದೆ ನಿಂತುಕೊಳ್ಳುವ ಏಜೆಂಟರು ಹೈಪೈ ಡ್ರೆಸ್, ಕಾರ್ ತಗೊಂಡು ಬರೋ ಭಕ್ತರೇ ಗಾಳವನ್ನ ಹಾಕುತ್ತಾರೆ. ಭಕ್ತರ ಬಂದ ತಕ್ಷಣ ಅವರನ್ನು ಭೇಟಿಯಾಗಿ ತುರ್ತು ದರ್ಶನಕ್ಕೆ ಆಫರ್ ಕೊಡುತ್ತಾರೆ. ಆದರೆ, ಸವದತ್ತಿ ಯಲ್ಲಮ್ಮನ ವಿಶೇಷ ದರ್ಶನಕ್ಕೆ ನೂರು ರೂಪಾಯಿ ‌ನಿಗದಿಯನ್ನ ಸವದತ್ತಿ ಯಲ್ಲಮ್ಮನ ದೇವಸ್ಥಾನದ ಆಡಳಿತ ಮಂಡಳಿ ಮಾಡಿದೆ. ಇದನ್ನು ಹೊರತುಪಡಿಸಿ ಭಕ್ತರಿಂದ ಏಜೆಂಟರು ಹಣ ಲೂಟಿ ಮಾಡುತ್ತಿದ್ದು ಆಡಳಿತ ಮಂಡಳಿಗೆ ಎಲ್ಲವೂ ಗೊತ್ತಿದ್ದು, ಮೌನವಾಗಿದ್ದಾರೆ. ಆಡಳಿತ ಮಂಡಳಿಯ ಸದಸ್ಯರು ಸಹ ಏಜೆಂಟ್ ರಿಗೆ ಪರೋಕ್ಷ ಸಹಕಾರ ನೀಡುತ್ತಿರುವ ಅನುಮಾನ ವ್ಯಕ್ತವಾಗಿದೆ.

ಒಟ್ಟಿನಲ್ಲಿ ಉತ್ತರ ಕರ್ನಾಟಕದ ಶಕ್ತಿದೇವಿ ಯಲ್ಲಮ್ಮನ ಸನ್ನಿಧಿಯಲ್ಲಿ ದೇವಿಯ ದರ್ಶನದ ಹೆಸರಿನಲ್ಲಿ ಹಣ ವಸೂಲಿ ಮಾಡುವ ಏಜೆಂಟರ್ ಹಾವಳಿ ತಪ್ಪಿಸಿ ಅವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಬೇಕಿದೆ.

ಪ್ರಲ್ಹಾದ ಪೂಜಾರಿ ಬೆಳಗಾವಿ

Edited By : Vinayak Patil
PublicNext

PublicNext

14/01/2025 06:01 pm

Cinque Terre

24.58 K

Cinque Terre

2

ಸಂಬಂಧಿತ ಸುದ್ದಿ