ರಾಯಬಾಗ: ಸಾರಾಯಿ ಮತ್ತಿನಲ್ಲಿ ಲಾರಿ ಚಾಲಕನೊಬ್ಬ ಟೈರ್ ಬ್ಲಾಸ್ಟ್ ಆದ್ರೂ 25 ಕಿ. ಮೀ. ವರೆಗೆ ಲಾರಿ ಚಲಾಯಿಸಿದರೂ ಬಳಿಕ ಲಾರಿ ಕೆಳಗೆ ಸಿಲುಕಿ ಸಾವನ್ನಪ್ಪಿರುವ ದಾರುಣ ಘಟನೆ ರಾಯಬಾಗ ತಾಲೂಕಿನ ಸುಟ್ಟಟ್ಟಿ ಕ್ರಾಸ್ ಬಳಿ ಸಂಭವಿಸಿದೆ.
ನಿನ್ನೆ ಸಾಯಂಕಾಲ ಬಾಗಲಕೋಟೆಯಿಂದ ಸಿಮೆಂಟ್ ಚೀಲಗಳನ್ನು ತುಂಬಿಕೊಂಡು ಯಬರಟ್ಟಿ ಮಾರ್ಗವಾಗಿ ಮಹಾರಾಷ್ಟ್ರಕ್ಕೆ ಸಾಗಿಸುತ್ತಿದ್ದ ಲಾರಿ ಚಾಲಕ, ಟೈರ್ ಬ್ಲಾಸ್ಟ್ ಆದ್ರೂ ಲಾರಿ ನಿಲ್ಲಿಸದೆ ಮುಂದೆ ಸಾಗುತ್ತಿದ್ದ ವಾಹನಗಳನ್ನು ಜಖಂಗೊಳಿಸಿ ಅಡ್ಡಾದಿಡ್ಡಿಯಾಗಿ ಲಾರಿ ಚಲಾಯಿಸಿದ್ದಾನೆ.
ಸ್ಥಳೀಯರು ಹಾಗೂ ಪೊಲೀಸ ರು ಲಾರಿ ಬೆನ್ನಟ್ಟಿ ನಿಲ್ಲಿಸಲು ಪ್ರಯತ್ನ ಪಟ್ಟರೂ ಲಾರಿ ನಿಲ್ಲಿಸದೆ ದುರ್ವರ್ತನೆ ತೋರಲು ಹೋಗಿದ್ದಾನೆ.
ಆದರೆ, ಸುಟ್ಟಟ್ಟಿ ಕ್ರಾಸ್ ಬಳಿ ಲಾರಿ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದೆ. ಅಪಘಾತದಲ್ಲಿ ಮಹಾರಾಷ್ಟ್ರ ಮೂಲದ ಲಾರಿ ಚಾಲಕ ಶೇಕ್ ಖೈಮುಮ್ (26) ಸ್ಥಳದಲ್ಲೇ ಮೃತ ಪಟ್ಟಿದ್ದಾನೆ.
ಕುಡಚಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
PublicNext
14/01/2025 06:04 pm