ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಬರಿಮಲೈ: ಪಂದಳದಿಂದ ಹೊರಟ ಅಯ್ಯಪ್ಪನ ಆಭರಣ - ರೋಮಾಂಚನ ದೃಶ್ಯ ಕಣ್ತುಂಬಿಕೊಂಡ ಭಕ್ತರು

ಶಬರಿಮಲೈ: ವೀಕ್ಷಕರೇ ಅಯ್ಯಪ್ಪ ಸ್ವಾಮಿಗೆ ಸಂಕ್ರಮಣ ದಿನದಂದು ಆಭರಣವನ್ನು ಧರಿಸಿ ಪೂಜೆ ಸಲ್ಲಿಸಲಾಗುತ್ತದೆ. ಆದ್ದರಿಂದ ಪ್ರತಿವರ್ಷ ಜನವರಿ 12ರಂದು ಅಯ್ಯಪ್ಪ ಆಡಿ ಬೆಳೆದ ಪಂದಳ ಊರಿಂದ ಆಭರಣಗಳನ್ನು ತೆಗೆದುಕೊಂಡು ಹೋಗಲಾಗುತ್ತದೆ.

ಪಂದಳ ರಾಜ ಅಯ್ಯಪ್ಪನಿಗೆ ಪಟ್ಟಾಭಿಷೇಕ ಮಾಡಬೇಕು ಎನ್ನುವ ಅಸೆ ಹೊತ್ತ ಕಾರಣ ಅಯ್ಯಪ್ಪನಿಗೆ ಮನವಿ ಮಾಡಿದ್ದನಂತೆ ಆದರೆ ಅಯ್ಯಪ್ಪ ಸ್ವಾಮಿಯು ನನಗೆ ಪಟ್ಟಾಭಿಷೇಕ ಬೇಡ ಎಂದನಂತೆ ಅದರ ಬದಲಾಗಿ ಮಕರ ಸಂಕ್ರಮಣ ದಿನದಂದು ನಿಮ್ಮ ನೆಚ್ಚಿನ ಆಭರಣ ಧರಿಸಿ ಅದನ್ನೇ ನನ್ನ ಪಟ್ಟಾಭಿಷೇಕ ಎಂದು ತಿಳಿದುಕೊಳ್ಳಿ ಎಂದು ಹೇಳಿದ್ದರಂತೆ.

ಅಂದಿನಿಂದ ಇವತ್ತಿನವರೆಗೂ ಅಯ್ಯಪ್ಪಸ್ವಾಮಿಗೆ ಪಂದಳದ ಅರಮನೆಯಿಂದ ಆಭರಣ ತೆಗೆದುಕೊಂಡು ಹೋಗಲಾಗುತ್ತದೆ. ಈ ಆಭರಣಗಳು ಹೊರಡುವಾಗ ಪಂದಳ ಊರಿನಲ್ಲಿ ಹಬ್ಬದ ಸಂಭ್ರಮ ಮುಳುಗಿರುತ್ತದೆ.

ಇಲ್ಲಿಯ ಇನ್ನೊಂದು ವಿಶೇಷ ಹಾಗೂ ಅಚ್ಚರಿ ಎಂದರೆ ಆಭರಣ ಹೊರಡುವಾಗ ಆಕಾಶದಲ್ಲಿ ಗರುಡ ಪ್ರದಕ್ಷಿಣೆ ಹಾಕುತ್ತಾನೆ. ಅಷ್ಟೆ ಅಲ್ಲದೆ ಆಭರಣದ ಜೊತೆ ಜೊತೆ ಗರುಡ ಕಾವಲಾಗಿ ಹೋಗುವ ದೃಶ್ಯ ನೋಡಲು ಜನಸಾಗರವೆ ಬಂದು ಕಣ್ತುಂಬಿಕೊಂಡು ಪುನೀತರಾಗುತ್ತಾರೆ.

ಅಯ್ಯಪ್ಪ ಸ್ವಾಮಿ ಅಡಿ ಬೆಳೆದಂತ ಅಂದಿನ ಕಾಲದ ಅರಮನೆ ಇಂದಿಗೂ ಪಂದಳದಲ್ಲಿ ನೋಡಲು ಸಿಗುತ್ತದೆ. ಅಯ್ಯಪ್ಪ ಮಾಲಾಧಾರಿಗಳು ಇಲ್ಲಿ ಆಗಮಿಸಿ ಅರಮನೆ ವೀಕ್ಷಿಸಿ ಪುನೀತರಾಗುತ್ತಾರೆ.

ವರದಿ : ಉದಯ ಗೌಡರ ಪಬ್ಲಿಕ್ ನೆಕ್ಸ್ಟ್

Edited By : Manjunath H D
PublicNext

PublicNext

13/01/2025 11:06 pm

Cinque Terre

192.87 K

Cinque Terre

2