ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಪೊಲೀಸ್ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ - ಅಪಘಾತಕ್ಕೆ ಆಹ್ವಾನ ನೀಡುತ್ತಿದೆ ಸಿಗ್ನಲ್‌

ಬೆಳಗಾವಿ: ಅಪಘಾತಗಳ ತಡೆಗೆ ಹಾಗೂ ವಾಹನಗಳು ಸುಗಮವಾಗಿ ಸಾಗಲು ಟ್ರಾಫಿಕ್ ಸಿಗ್ನಲ್‌ಗಳ ಅಳವಡಿಕೆ ಮಾಡಲಾಗಿರುತ್ತೆ. ಆದರೆ ಸದಾ ಜನಜಂಗುಳಿಯಿಂದ ಹಾಗೂ ವಾಹನ ಸವಾರಿಂದ ಕೂಡಿರುವ ಈ ಮುಖ್ಯ ರಸ್ತೆಗೆ ಸಿಗ್ನಲ್‌ ವ್ಯವಸ್ಥೆ ಇಲ್ಲದೆ ವಾನಹಗಳು ಅಡ್ಡಾದಿಡ್ಡಿ ಓಡಾಡುವ ದೃಶ್ಯಗಳ ಸರ್ವೇ ಸಾಮಾನ್ಯವಾಗಿದೆ.

ಬೆಳಗಾವಿ ನಗರದ ಪ್ರಮುಖ ರಸ್ತೆಯಲ್ಲಿ ಒಂದಾಗಿರುವ ಭೋಗಾರವೇಸ್ ರಸ್ತೆಯಲ್ಲಿ ಬಿಟ್ಟು ಬಿಡದೆ ಒಂದೆ ಸಮನೆ ವಾಹನಗಳು ಸಂಚರಿಸುತ್ತೆ. ಇದೆ ರಸ್ತೆಯಲ್ಲಿರುವ ಸಮಾದೇವಿ ಗಲ್ಲಿ ಬಳಿರುವ ಈ ಸಿಗ್ನಲ್ ಬಂದ್ ಆಗಿ ಅಪಘಾತಗಳಿಗೆ ಎಡೆಮಾಡಿಕೊಡಿತ್ತಿದೆ.‌ ಕಳೆದ ಜುಲೈ ತಿಂಗಳಲ್ಲಿ ಸುರಿದ ಭಾರಿ ಮಳೆಗೆ ಒಂದು ಬದಿಯ ಸಿಗ್ನಲ್‌ ಕಂಬ ಮಳೆಯಿಂದ ಬಿದ್ದು ಇನ್ನುವರೆಗೆ ರಿಪೇರಿ ಭಾಗ್ಯ ಕಂಡಿಲ್ಲ. ಹಾಗಾಗಿ ನಾಲ್ಕು ಬದಿಯ ವಾಹನ ಸವಾರರು ಅಡ್ಡಾದಿಡ್ಡಿ ವಾಹನ ಚಲಾವಣೆ ಮಾಡುತ್ತಿದ್ದು, ಅನೇಕ ಅಪಘಾತಗಳು ಸಂಭವಿಸುತ್ತಿದೆ.‌ ಸಿಗ್ನಲ್ ಕಂಬ ಬಿದ್ದು ಏಳು ತಿಂಗಳ ಕಳೆದರು ಹಿರಿಯ ಪೊಲೀಸ್ ಅಧಿಕಾರಿಗಳ ದಿವ್ಯ ನಿರ್ಲಕ್ಷಕ್ಕೆ ಇನ್ನುವರೆಗೆ ರಿಪೇರಿ ಭಾಗ್ಯ ಕಂಡಿಲ್ಲ.

ಇನ್ನೂ ಈ ರಸ್ತೆ ಅಕ್ಕಪಕ್ಕ ಸಾಕಷ್ಟು ಶಾಲಾ ಕಾಲೇಜುಗಳಿದ್ದು, ವಿದ್ಯಾರ್ಥಿಗಳು ಜೀವ ಕೈಯಲ್ಲಿ ಹಿಡಿದು ಸಿಗ್ನಲ್ ದಾಟಬೇಕು.‌ ಚನ್ನಮ್ಮ ವೃತ್ತದಿಂದ ಭೋಗಾರವೇಸ್ ವೃತ್ತ, ಗಣೇಶಪುರ ಮೂಲಕ ನಗರಕ್ಕೆ ಆಗಮಿಸುವ ಸವಾರರು, ಸಮಾದೇವಿ ಗಲ್ಲಿಯಿಂದ ಹೊರಗಡೆ ಹೊಗುವ ಸವಾರರು ಹಾಗೂ ಭೋಗಾರವೇಸ್ ವೃತ್ತದಿಂದ ಬಸ್ ನಿಲ್ದಾಣದ ಕಡೆ ಇದೇ ಸಿಗ್ನಲ್ ದಾಟಿ ಓಡಾಡಬೇಕು.‌ ಇಷ್ಟೆಲ್ಲ ವಾಹನಗಳು ಓಡಾಡಿದರು ಒಂದೇ ಒಂದು ಸಿಗ್ನಲ್ ಕಂಬ ರಿಪೇರಿ ಮಾಡಿಸಲು ಬೆಳಗಾವಿ ಪೊಲೀಸ್ ಇಲಾಖೆಗೆ ಆಗುತ್ತಿಲ್ಲ.

ಒಟ್ಟಿನಲ್ಲಿ ಸಿಗ್ನಲ್ ರಿಪೇರಿಗೆ ಅನುದಾನ ಬಂದಿದ್ದು, ಮುಂದಿನ 15-20 ದಿನಗಳಲ್ಲಿ ರಿಪೇರಿ ಆಗುತ್ತೆ ಎಂದು ಭರವಸೆ ನೀಡಿರುವ ಟ್ರಾಫಿಕ್ ಡಿಸಿಪಿ ಅವರು ಆದಷ್ಟು ಬೇಗ ಸಿಗ್ನಲ್ ಆರಂಭಸಿ ಅಪಘಾತಗಳು ತಪ್ಪಿಸಬೇಕಿದೆ.‌

ಪ್ರಲ್ಹಾದ ಪೂಜಾರಿ ಬೆಳಗಾವಿ

Edited By : Suman K
Kshetra Samachara

Kshetra Samachara

13/01/2025 01:47 pm

Cinque Terre

27.36 K

Cinque Terre

0

ಸಂಬಂಧಿತ ಸುದ್ದಿ