ವಿಜಯನಗರ : ಐಎಎಸ್ ಅಧಿಕಾರಿಯನ್ನು ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮವೊಂದರ ವೇದಿಕೆಯಿಂದ ಎಬ್ಬಿಸಿ ಕಳುಹಿಸಿದ ವಿಡಿಯೋ ವೈರಲ್ ಆಗುತ್ತಿದೆ.
ಹೌದು ವಿಜಯನಗರ ಜಿಲ್ಲೆಯ ಬಂಡಿಹಳ್ಳಿಯ ಎಸ್.ಎಸ್ ಫಾರಂ ಹೌಸ್‌ನಲ್ಲಿ ಆಯೋಜಿಸಿದ್ದ ಸರ್ವಧರ್ಮಗಳ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಭಾಗಿಯಾಗಿದ್ದ ಸಿಎಂ ಸಿದ್ದರಾಮಯ್ಯ ನವ ವಿವಾಹಿತ ಜೋಡಿಗಳಿಗೆ ಶುಭ ಕೋರಿದರು. ಇದಕ್ಕೂ ಮೊದಲು ವೇದಿಕೆ ಮೇಲೆ ಜನರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ವೇಳೆ ವೇದಿಕೆ ಮೇಲೆ ಕುಳಿತಿದ್ದ ಐಎಎಸ್ ಅಧಿಕಾರಿಯನ್ನು ಎಬ್ಬಿಸಿ ಗದರಿ ಕಳುಹಿಸಿದ ಘಟನೆ ನಡೆದಿದೆ.
ಸಿದ್ದರಾಮಯ್ಯ ಅವರ ಹಿಂಬಂದಿಯ ಕುರ್ಚಿಯಲ್ಲಿ ಕುಳಿತಿದ್ದ ಅಧಿಕಾರಿಯನ್ನು ಸಿದ್ದರಾಮಯ್ಯ ನಿನ್ಯಾಕೆ ಇಲ್ಲಿ ಕುಳಿತಿದ್ದೀಯಾ.. ಯಾರು ನೀನು ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಅಧಿಕಾರಿ ನಾನು ಡಿಸಿ ಎಂದು ಹೇಳಿದ್ದು, ಈ ವೇಳೆ ಸಿದ್ದರಾಮಯ್ಯ ನೀನು ಇಲ್ಲಿ ಕುಳಿತುಕೊಳ್ಳಬಾರದು. ಸ್ವಾಮೀಜಿಗಳ ಪಕ್ಕದಲ್ಲಿ ಕುಳಿತಿದ್ದೀಯಲ್ಲ.. ಅಲ್ಲಿ ಹೋಗು ಎಂದು ಹೇಳಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಸದ್ಯ ಈ ವಿಡಿಯೋಗೆ ಪರ ವಿರೋಧ ಅಭಿಪ್ರಾಯ ವ್ಯಕ್ತವಾಗುತ್ತಿದೆ.
PublicNext
13/01/2025 08:08 pm