ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸತೀಶ್ ಜಾರಕಿಹೊಳಿ, ಡಿಕೆಶಿ ನಡುವೆ ಜಟಾಪಟಿ! ಸಿಎಲ್‌ಪಿ ಸಭೆಯಲ್ಲಿ ಆಗಿದ್ದೇನು?

ಬೆಂಗಳೂರು: ಕಾಂಗ್ರೆಸ್ ಸಿಎಲ್‌ಪಿ ಸಭೆಯಲ್ಲಿ ಬೆಳಗಾವಿ ರಾಜಕಾರಣ ಮತ್ತೆ ಸದ್ದು ಮಾಡಿದೆ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಬೆಳಗಾವಿ ಜಿಲ್ಲಾ ರಾಜಕಾರಣ ವಿಚಾರವಾಗಿ ಡಿಕೆಶಿ ಹಾಗೂ ಸತೀಶ್ ನಡುವೆ ತಿಕ್ಕಾಟ ನಡೆದಿದೆ ಎನ್ನಲಾಗಿದೆ.

ಶಾಸಕಾಂಗ ಪಕ್ಷದ ಸಭೆಯಲ್ಲಿ ಡಿಕೆಶಿ ಭಾಷಣದ ವೇಳೆ ಬೆಳಗಾವಿ ಡಿಸಿಸಿ ಕಚೇರಿಯನ್ನ ಲಕ್ಷ್ಮೀ ಹೆಬ್ಬಾಳಕರ್ ಕಟ್ಟಿದ್ದಾರೆ ಎಂದು ಹೇಳಿದ್ದಾರೆ. ತಮ್ಮ ಭಾಷಣದ ವೇಳೆ ಲಕ್ಷ್ಮಿ ಹೆಬ್ಬಾಳ್ಕರ್ ಪರ ಬ್ಯಾಟಿಂಗ್ ಮಾಡಿದ ಡಿಕೆಶಿ ಬೆಳಗಾವಿಯಲ್ಲಿ ಡಿಸಿಸಿ ಕಚೇರಿಯನ್ನ ಕಟ್ಟಿದ್ದಾರೆ ಎಂದು ಹೇಳಿದರು. ಇದರಿಂದ ತೀವ್ರ ಸಿಡಿಮಿಡಿಗೊಂಡ ಸಚಿವ ಸತೀಶ್ ಜಾರಕಿಹೊಳಿ ಸಿಟ್ಟಿಗೆದ್ದು ಸಭೆಯಲ್ಲಿ ಎದ್ದು ಬಂದು 'ಪದೇ ಪದೇ ಲಕ್ಷ್ಮೀ ಹೆಬ್ಬಾಳಕರ್ ಕಟ್ಟಿದ್ರು ಅಂತ ಹೇಳಬೇಡಿ ಹೀಗೆ ಹೇಳಿ ಇತರರನ್ನ ಅವಮಾನಿಸಬೇಡಿ. ಡಿಸಿಸಿ ಕಚೇರಿ ಕಟ್ಟಡಕ್ಕೆ ನಾನೂ ಹಣ ನೀಡಿದ್ದೇನೆ. ರಮೇಶ್ ಜಾರಕಿಹೊಳಿ ಕಟ್ಟಡ ನಿರ್ಮಾಣಕ್ಕೆ ಜಾಗ ನೀಡಿದ್ದರು ನನ್ನ ಸ್ವಂತ ದುಡ್ಡಿನಲ್ಲಿ ಮೂರು ಕೋಟಿ ನೀಡಿದ್ದೇನೆ ಎಂದು ಸಭೆಯಲ್ಲೇ ಡಿಕೆ ಶಿವಕುಮಾರ್ ಗೆ ತಿರುಗೇಟು ನೀಡಿದ ಸತೀಶ್ ಜಾರಕಿಹೊಳಿ.

ಈ ವೇಳೆ ಲಕ್ಷ್ಮಿ ಹೆಬ್ಬಾಳ್ಕರ್ ಮಧ್ಯ ಪ್ರವೇಶಿಸಲು ಯತ್ನಿಸಿದ್ದಾರೆ. ಕೊನೆಗೆ ಪರಿಸ್ಥಿತಿ ಬೇರೆ ಕಡೆ ಹೋಗುತ್ತಿರುವುದನ್ನ ಅರಿತು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲ ಉಭಯ ನಾಯಕರನ್ನು ಸಮಾಧಾನಪಡಿಸಿದ್ದಾರೆ. ‌ಒಟ್ಟಾರೆ ಬೆಳಗಾವಿ ರಾಜಕಾರಣ ಮತ್ತೆ ಸದ್ದು ಮಾಡುತ್ತಿದೆ.

Edited By : Nagaraj Tulugeri
PublicNext

PublicNext

13/01/2025 10:08 pm

Cinque Terre

60 K

Cinque Terre

7