ಬೆಂಗಳೂರು : ಬೆಂಗಳೂರಿನಲ್ಲಿಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೀತು. ಸಭೆಯಲ್ಲಿ ಡಿನ್ನರ್ ಪಾಲಿಟಿಕ್ಸ್ ಬಗ್ಗೆ ಪರೋಕ್ಷವಾಗಿ ಪ್ರಸ್ತಾಪಿಸಿ ಕಾಂಗ್ರೆಸ್ ನ ಎಲ್ಲಾ ಶಾಸಕರಿಗೆ ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲಾ ತಾಕೀತು ಮಾಡಿದ್ರು.
ಏನೇ ಗೊಂದಲಗಳಿದ್ದರೂ ನಾಲ್ಕು ಗೋಡೆಯ ಮಧ್ಯೆ ಪಕ್ಷದ ಚೌಕಟ್ಟಿನಲ್ಲಿ ಚರ್ಚಿಸಿ. ನಿಮಗೆ ಏನೇ ಅಸಮಾಧಾನಗಳಿದ್ದರೆ ನಮಗೆ ತಿಳಿಸಿ ಎಂದು ಸುರ್ಜೆವಾಲ ಸಲಹೆ ನೀಡಿದ್ರು. ಸುರ್ಜೆವಾಲಾ ಮಾತಿಗೆ ದನಿಗೂಡಿಸಿದ ಸಿಎಂ, ಎಲ್ಲವೂ ಹೈಕಮಾಂಡ್‌ಗೆ ಬಿಟ್ಟ ವಿಚಾರ. ಅದರಂತೆ ಎಲ್ಲರೂ ನಡೆಯಬೇಕು ಎಂದರು. ಪಕ್ಷದ ನಿಲುವು ಸಿದ್ದಾಂತದಲ್ಲಿ ಯಾವುದೇ ಬದಲಾವಣೆ ಇಲ್ಲ,ಯಾವ ನಾಯಕರೂ ಕೂಡ ಪಕ್ಷದ ಚೌಕಟ್ಟು ಮೀರಿ ಮಾತನಾಡಬೇಡಿ, ಪಕ್ಷ ಸಂಘಟನೆಯ ಸಭೆಗಳನ್ನು ಪಕ್ಷವೇ ಆಯೋಜನೆ ಮಾಡುತ್ತದೆ.
ಸಮುದಾಯದ ಸಭೆಗಳನ್ನು ಪಕ್ಷದ ವೇದಿಕೆಯಲ್ಲೇ ನಡೆಸುತ್ತೇವೆ ಎಂದು ಹೇಳುವ ಮೂಲಕ ಪ್ರತ್ಯೇಕವಾಗಿ ಸಭೆ ಮಾಡದಂತೆ ಸುರ್ಜೆವಾಲಾ ಸೂಚಿಸಿದ್ದಾರೆ ಎನ್ನಲಾಗಿದೆ.
ಇನ್ನೂ ಶಾಸಕಾಂಗ ಸಭೆಯಲ್ಲಿ ಶಾಸಕರ ಕ್ಷೇತ್ರಕ್ಕೆ ಅನುದಾನ ಇಲ್ಲದ ವಿಚಾರ ಮತ್ತೆ ಪ್ರತಿಧ್ವನಿಸಿದೆ. ಇದಕ್ಕೆ ಉತ್ತರಿಸಿದ ಸಿಎಂ ಬಜೆಟ್ ನಲ್ಲಿ ಹೆಚ್ಚಿನ ಅನುದಾನ ನೀಡ್ತೀವಿ ಈಗ ಶಾಸಕರಿಗೆ ತಲಾ 10 ಕೋಟಿ ನೀಡುತ್ತಿರೋದಾಗಿ ಘೋಷಿಸಿದರು,ನಿನ್ನೆಯಷ್ಟೇ ಅನುದಾನಕ್ಕೆ ಸಹಿ ಹಾಕಿದ್ದೇನೆ,ಎಲ್ಲಾ ಪಕ್ಷದವರಿಗೂ ಅನುದಾನ ನೀಡ್ತಿದ್ದೇವೆ ಬಿಜೆಪಿ, ಜೆಡಿಎಸ್ ಶಾಸಕರಿಗೂ 10 ಕೋಟಿ ಕೊಡ್ತಿದ್ದೇವೆ ಎಂದರು. ಅಲ್ದೇ ಮುಂದೆ ಮಂಡಿಸುವ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ಒದಗಿಸವುದಾಗಿ ಭರವಸೆ ನೀಡಿದ್ರು. ಮಾರ್ಚ್ ಬಜೆಟ್ ಮಂಡನೆಗೂ ಮುನ್ನ ಮತ್ತೊಮ್ಮೆ ಶಾಸಕಾಂಗ ಸಭೆ ಕರೆಯುವುದಾಗಿ ತಿಳಿಸಿದರು.
PublicNext
13/01/2025 11:02 pm