ಬೆಳಗಾವಿ: ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯತ್ ಚುನಾವಣೆಗಳು ಎಪ್ರಿಲ್, ಮೇ ನಲ್ಲಿ ನಡೆಸುವ ಉದ್ದೇಶ ಇದೆ. ಇವಿಎಂ, ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ಮಾಡಬೇಕಾ ಎಂದು ಚರ್ಚೆ ನಡೆದಿದೆ ಎಂದು ರಾಜ್ಯ ಚುನಾವಣೆ ಆಯುಕ್ತ ಜಿ. ಎಸ್. ಸಂಗ್ರೇಶಿ ಹೇಳಿದರು.
ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮುಂಬರುವ ಜಿಪಂ, ತಾಪಂ ಚುನಾವಣೆ ಸಿದ್ಧತೆ ಬಗ್ಗೆ ಬೆಳಗಾವಿ ಡಿಸಿ ಜೊತೆ ಸಭೆ ಮಾಡಿದ್ದೇವೆ. ಮತದಾರರ ಪಟ್ಟಿ ಸಿದ್ಧಪಡಿಸಬೇಕು. 18 ವರ್ಷ ತುಂಬಿದ ಎಲ್ಲಾ ಯುವಕ, ಯುವತಿಯರನ್ನು ಈ ಪಟ್ಟಿಗೆ ಸೇರಿಸಬೇಕು. ಈ ನಿಟ್ಟಿನಲ್ಲಿ ಮಾರ್ಗದರ್ಶನ ನೀಡಲಾಗಿದೆ. ಎಪ್ರಿಲ್, ಮೇ ನಲ್ಲಿ ಜಿಪಂ, ತಾಪಂ ಚುನಾವಣೆ ಮಾಡಬೇಕಿದೆ. ಮೀಸಲಾತಿ ಕಾರ್ಯಸೂಚಿ ಸಂಬಂಧಪಟ್ಟ ಪಂಚಾಯತ್ ಇಲಾಖೆ ಕೊಡುವುದು ಬಾಕಿ ಇದೆ. ಈ ಮಾಹಿತಿ ಬಂದ ತಕ್ಷಣವೇ ದಿನಾಂಕ ನಿಗದಿ ಮಾಡ್ತೀವಿ. ಎಪ್ರಿಲ್ , ಮೇ ನಲ್ಲಿ ಚುನಾವಣೆ ಮಾಡೋದಕ್ಕೆ ಸರ್ಕಾರ ಕೂಡಾ ಸ್ಪಂದನೆ ನೀಡಿದೆ ಎಂದರು.
ಜಿಪಂ, ತಾಪಂ ಎರಡಕ್ಕೂ ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ಮಾಡಬೇಕು ಎನ್ನುವುದು ನಮ್ಮ ಅಭಿಪ್ರಾಯವು ಆಗಿದೆ. ಬ್ಯಾಲೆಟ್ ಪೇಪರ್ ಮೂಲಕವೇ ಚುನಾವಣೆ ಮಾಡಬೇಕು. ಎಲ್ಲಾ ಚುನಾವಣೆ ನೋಡಿದಾಗ ಮತದಾರರು ಜಾಗೃತರಾಗಬೇಕು. ಮತದಾರರು ಹಣ, ಹೆಂಡಕ್ಕೆ ಬಲಿಯಾಗಬಾರದು. ಭ್ರಷ್ಟಾಚಾರ ರಹಿತ ಆಡಳಿತ ಕೊಡಲು ಆಗಲ್ಲ. ಮತದಾರರ ಮನಸ್ಸು ಗೆಲ್ಲುವ ಪ್ರಕ್ರಿಯೆಯಲ್ಲಿ ಹಣ ಹಂಚಿಕೆ ಆಗಬಾರದು. ಒಬ್ಬರಿಗೆ ಒಂದು ಸಾವಿರ ಎನ್ನುವ ಮನಸ್ಥಿತಿ ಹೋಗಬೇಕು ಎಂದು ಕರೆ ನೀಡಿದರು.
PublicNext
13/01/2025 07:39 pm