ಬೆಳಗಾವಿ: ಇಂದು ಬೆಳಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಕಾರು ಅಪಘಾತವಾಗಿದ್ದು, ಅಪಘಾತವಾದ ಕಾರಿನಲ್ಲಿ ಎಂಎಲ್ ಸಿ ಚನ್ನರಾಜ ಹಟ್ಟಿಹೊಳಿ ಕೂಡ ಇದ್ದರು. ಈ ಘಟನೆ ಬಗ್ಗೆ ಎಂಎಲ್‌ಸಿ ಚನ್ನರಾಜ್ ಹಟ್ಟಿಹೊಳಿ ಅವರು, ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.
ಆಸ್ಪತ್ರೆಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಂಕ್ರಮಣ ಹಿಂದೆ, ಮುಂದೆ ಎಚ್ಚರಿಕೆಯಿಂದ ಇರುವಂತೆ ಜೋತಿಷಿಗಳು ಸಲಹೆ ನೀಡಿದರು. ಮನೆಯಲ್ಲಿ ದುರ್ಘಟನೆ ನಡೆಯುವ ಸಾಧ್ಯತೆ ಇದೆ ಎಂದು ಭವಿಷ್ಯ ಹೇಳಿದ್ರು. ನಮ್ಮಿಂದಲೇ ಅಚಾತುರ್ಯ ನಡೆದಿದೆ. ಇದು ಆಗಬಾರದಿತ್ತು. ನಾವು ಎಚ್ಚರಿಕೆ ವಹಿಸದೇ ನಿರ್ಲಕ್ಷ್ಯ ಮಾಡಿದ್ವಿ. ಕಾರು ಚಾಲಕನ ತಪ್ಪು ಏನು ಇಲ್ಲ. ನಾಯಿ ಅಡ್ಡ ಬಂದಿದ್ದರಿಂದ ತಪ್ಪಿಸಲು ಹೋಗಿ ಅಪಘಾತ ನಡೆದಿದೆ. ನಮ್ಮ ಜೊತೆಗೆ ಯಾವುದೇ ಬೆಂಗಾವಲು ವಾಹನ ಇರಲಿಲ್ಲ. ತಡವಾಗಿ ನಾವು ಬಿಟ್ಟಿದ್ದರಿಂದ ಬೆಂಗಾವಲು ವಾಹನಕ್ಕೆ ಮಾಹಿತಿ ನೀಡಲಿಲ್ಲ ಎಂದು ಹೇಳಿದರು.
PublicNext
14/01/2025 04:03 pm